ಜನರ ದುಡ್ಡಲ್ಲಿ ಹೈಫೈ ಲೈಫ್: ಹಾಸನ ಟೈಲರಮ್ಮನ ಅಸಲಿ ಮುಖ ಬಿಚ್ಚಿಟ್ಟ ಸಾರ್ವಜನಿಕರು

Updated on: Oct 27, 2025 | 12:29 PM

ಹಾಸನದ ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿ ವಿರುದ್ಧ ಮಹಿಳೆಯರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದ್ದು, ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ದುಃಖ ತೋಡಿಕೊಂಡಿದ್ದಾರೆ. ಟೇಲರ್ ಲೇಡಿ ಈ ಮಹಿಳೆಯ ಬಳಿಯೇ ಅಂಗಡಿ ಬಾಡಿಗೆಗೆ ತೆಗೆದುಕೊಂಡಿದ್ದು, 2 ವರ್ಷದಿಂದ ಬಾಡಿಗೆ ನೀಡಿರಲಿಲ್ಲ. 16 ಲಕ್ಷದ ಕಾರು, ಕೋಟ್ಯಂತರ ರೂ. ಬೆಲೆ ಬಾಳುವ ಮನೆ ಖರೀದಿಸಿ ಹೈ ಫೈ ಜೀವನ ನಡೆಸುತ್ತಿದ್ದ ಟೇಲರ್ ಲೇಡಿಯ ಆಟ ಬಯಲಾಗಿದ್ದು, ಮೂರು ಕೋಟಿ ರೂ.ಗಳ ವಂಚನೆ ಮಾಡಿ ಕಾಣೆಯಾಗಿದ್ದಳು ಎಂದಿದ್ದಾರೆ.

ಹಾಸನ, ಅಕ್ಟೋಬರ್ 27: ಹಾಸನದ ಲೇಡೀಸ್ ಡ್ರೆಸ್ ಮೇಕರ್ ಹೇಮಾವತಿ ವಿರುದ್ಧ ಮಹಿಳೆಯರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದ್ದು, ವಂಚನೆಗೊಳಗಾದ ಮಹಿಳೆಯೊಬ್ಬರು ತಮ್ಮ ದುಃಖ ತೋಡಿಕೊಂಡಿದ್ದಾರೆ. ಟೇಲರ್ ಲೇಡಿ ಈ ಮಹಿಳೆಯ ಬಳಿಯೇ ಅಂಗಡಿ ಬಾಡಿಗೆಗೆ ತೆಗೆದುಕೊಂಡಿದ್ದು, 2 ವರ್ಷದಿಂದ ಬಾಡಿಗೆ ನೀಡಿರಲಿಲ್ಲ. 16 ಲಕ್ಷದ ಕಾರು, ಕೋಟ್ಯಂತರ ರೂ. ಬೆಲೆ ಬಾಳುವ ಮನೆ ಖರೀದಿಸಿ ಹೈ ಫೈ ಜೀವನ ನಡೆಸುತ್ತಿದ್ದ ಟೇಲರ್ ಲೇಡಿಯ ಆಟ ಬಯಲಾಗಿದ್ದು, ಮೂರು ಕೋಟಿ ರೂ.ಗಳ ವಂಚನೆ ಮಾಡಿ ಕಾಣೆಯಾಗಿದ್ದಳು ಎಂದಿದ್ದಾರೆ.

ನಿಮ್ಮ ಚಿನ್ನವನ್ನಾದರೂ ಅಡವಿಟ್ಟು ನನಗೆ ಹಣ ನೀಡಿ, ಚೀಟಿ ದುಡ್ಡು ಬಂದ ಮೇಲೆ ಹಿಂದಿರುಗಿಸುತ್ತೇನೆ. ನಿಮ್ಮನ್ನು ಬಿಟ್ಟು ಬೇರೆ ಯಾರ ಬಳಿಯಲ್ಲಿಯೂ ಈ ವ್ಯವಹಾರ ನಡೆಸುತ್ತಿಲ್ಲವೆಂದು ಬಣ್ಣ ಬಣ್ಣದ ಮಾತನಾಡಿ 5 ತಿಂಗಳ ಹಿಂದೆ ನನ್ನ ಬಳಿಯೇ 7.5 ಲಕ್ಷ ರೂ. ತೆಗೆದುಕೊಂಡಿದ್ದಾಳೆ. ಇಂದಿಗೂ ಹಿಂದಿರುಗಿಸಿಲ್ಲವೆಂದು ನೊಂದ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಹಾಸನ: ಕೋಟಿ ಕೋಟಿ ಲಪಟಾಯಿಸಿದ ಹಾಸನದ ಟೈಲರಮ್ಮನ ಕಥೆ: 16 ಲಕ್ಷದ ಕಾರು, ಕೋಟಿ ಬೆಲೆ ಬಾಳುವ ಮನೆ! ಇಷ್ಟೆಲ್ಲ ಸಂಪಾದಿಸಿದ್ದೇಗೆ!?

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.