ಜನ್ಮ ಕೊಟ್ಟ ತಂದೆಯನ್ನೇ ಕೊಂದು ಮೃತ ದೇಹವನ್ನು ಆ್ಯಂಬುಲೆನ್ಸ್ನಲ್ಲಿ ಕಳಿಸಿದ ಮಗಳು
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ತಂದೆ ಅನಿಲ್ ಅವರನ್ನು ಅವರ ಮಗಳ ಪ್ರಿಯಕರ ಮತ್ತು ಆರು ಜನ ಸೇರಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರು ತಿಂಗಳ ಹಿಂದೆ ಪ್ರಿಯಕರನ ಜೊತೆ ಓಡಿ ಹೋಗಿದ್ದ ಮಗಳು ಅನೀಶಾಳ ತಂದೆಗೆ ಕರೆ ಮಾಡಿ ಅಪ್ಪ ನೀನು ನಮ್ಮ ಮನೆಗೆ ಬಾ ಎಂದು ಹೇಳಿ ಕರೆಸಿಕೊಂಡು ದೊಣ್ಣೆ ಹೊಡೆದು, ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಮಗಳ ಈ ಕೃತ್ಯಕ್ಕೆ ಕಂಡು ಕುಟುಂಬ ಅಚ್ಚರಿಪಟ್ಟಿದೆ.
ಹಾಸನ,ಜ.17: ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ಜನ್ಮ ಕೊಟ್ಟ ಅಪ್ಪನನ್ನೇ ಮನೆ ಕರೆಸಿ ಮಗಳು ಕೊಲೆ ಮಾಡಿದ್ದಾಳೆ. ಅನಿಲ್ ಎಂಬವವರನ್ನು ಬರ್ಬರ ಹತ್ಯೆ ಮಾಡಲಾಗಿದೆ. ಮಗಳನ್ನು ಭೇಟಿಯಾಗಲು ಹೋಗಿದ್ದ ಅನಿಲ್ ಅವರನ್ನು ಆಕೆಯ ಪ್ರಿಯಕರ ಮತ್ತು ಆರು ಜನ ಸೇರಿ ಕೊಲೆ ಮಾಡಿದ್ದಾರೆ. ಸುಮಾರು ಆರು ತಿಂಗಳ ಹಿಂದೆ ಅನಿಲ್ ಅವರ ಮಗಳು ಅನೀಶಾ ಪ್ರಿಯಕರನ ಜೊತೆ ಓಡಿ ಹೋಗಿದ್ದಳು. ಈ ವಿಷಯ ಅನಿಲ್ ಅವರಿಗೆ ತೀವ್ರ ನೋವುಂಟು ಮಾಡಿತ್ತು. ಇತ್ತೀಚೆಗೆ ಅನೀಶಾ ಬೆಳ್ಳಾವರ ಗ್ರಾಮದಲ್ಲಿ ಇದ್ದಾಳೆ ಎಂದು ಅನಿಲ್ ಅವರಿಗೆ ತಿಳಿದುಬಂದಿತ್ತು. ಆಗ ಅನೀಶಾ ತನ್ನ ತಂದೆಗೆ ಫೋನ್ ಮಾಡಿ, ಅಪ್ಪ ಮನೆಗೆ ಬಾ ಎಂದು ಕರೆಸಿಕೊಂಡಿದ್ದಾಳೆ. ಎಷ್ಟದಾರೂ ನಾನು ಜನ್ಮ ಕೊಟ್ಟ ಮಗಳು, ಪ್ರೀತಿಯಿಂದ ಕರೆದಿದ್ದಾಳೆ ಎಂದು ಹೋಗಿದ್ದಾರೆ. ಅಲ್ಲಿ ಹೋದ ಅನಿಲ್ ಅವರಿಗೆ ಶಾಕ್ ಕಾದಿತ್ತು. ಮನೆಯಲ್ಲಿ ಮಗಳ ಗಂಡ ಮತ್ತು ಇತರ ಆರು ಮಂದಿ ದೊಣ್ಣೆಯಿಂದ ಹೊಡೆದು, ಚಾಕುವಿನಿಂದ ಹೊಟ್ಟೆಯ ಭಾಗಕ್ಕೆ ಆರು-ಏಳು ಬಾರಿ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅನಿಲ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಹಾಕಿ ಆಕೆಯೇ ಮನೆಗೆ ಕಳಿಸಿದ್ದಳು ಎಂದು ಆಕೆಯ ಚಿಕ್ಕಪ್ಪ ಹೇಳಿದ್ದಾರೆ. ನಂತರ ಕುಟುಂಬದವರು ಅನಿಲ್ ಅವರನ್ನು ಮೊದಲು ಬೇಲೂರು, ನಂತರ ಹಾಸನ ಮತ್ತು ಕೊನೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಯಕೃತ್‌ಗೆ ಗಂಭೀರ ಪೆಟ್ಟಾಗಿರುವ ಕಾರಣ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ತಿಳಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
