ಹಾಸನದ ಹಾಸನಾಂಬೆ ದೇವಿ ಉತ್ಸವಕ್ಕೆ‌ ವಿಧ್ಯುಕ್ತ ತೆರೆ: ಗರ್ಭಗುಡಿ ಬಾಗಿಲು ಬಂದ್​

Edited By:

Updated on: Nov 03, 2024 | 11:01 PM

ಹಾಸನದ ಹಾಸನಾಂಬೆ ದೇವಿ ಉತ್ಸವ ಇಂದು ಸಂಪನ್ನಗೊಂಡಿದೆ. 11 ದಿನಗಳ ಉತ್ಸವದಲ್ಲಿ 9 ದಿನಗಳ ಕಾಲ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದಾಖಲೆಯ 18 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಮಧ್ಯಾಹ್ನ 12.33ಕ್ಕೆ ಗರ್ಭಗುಡಿ ಬಾಗಿಲು ಮುಚ್ಚಲಾಗಿದೆ.

ಹಾಸನದ ಹಾಸನಾಂಬೆ (Hasanaamba) ದೇವಿ ಉತ್ಸವಕ್ಕೆ‌ ಇಂದು ವಿಧ್ಯುಕ್ತ ತೆರೆ ಎಳೆಯಲಾಗಿದೆ. ದೇವಿಯ ಅಲಂಕಾರ ಆಭರಣ ತೆರವು ಮಾಡಿ ಪೂಜೆ ಮಾಡಲಾಗಿದೆ. ವಿಶ್ವರೂಪ ದರ್ಶನದ ಬಳಿಕ ಅರ್ಚಕರು ಹೊರಬಂದರು. ಬಳಿಕ ಮಧ್ಯಾಹ್ನ 12.33ಕ್ಕೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಾಗಿಲು ಬಂದ್​ ಮಾಡಲಾಗಿದೆ. ಆ ಮೂಲಕ ಈ ವರ್ಷದ 11 ದಿನಗಳ ಉತ್ಸವ ಸಂಪನ್ನವಾಗಿದೆ. 9 ದಿನ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ದಾಖಲೆಯ 18 ಲಕ್ಷಕ್ಕೂ ಹೆಚ್ಚು ಭಕ್ತರಿಂದ ದರ್ಶನ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More