ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ, ಸೆಟ್ಲ್ ಆಗೋದಿಕ್ಕೆ ಕೊಂಚ ಸಮಯ ಬೇಕು: ಸೀಮಂತ್ ಕುಮಾರ್ ಸಿಂಗ್, ಹೊಸ ಪೊಲೀಸ್ ಕಮೀಷನರ್
ತನಗಿಂತ ಮುಂಚೆ ನಗರದ ಪೊಲೀಸ್ ಕಮೀಷನರ್ ಆಗಿ ಕೆಲಸ ಮಾಡಿರುವವರೆಲ್ಲ ಉತ್ತಮ ಕೆಲಸ ಮಾಡಿದ್ದಾರೆ, ತಾನೂ ಬೆಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ಕಮೀಷನರ್ ಮತ್ತು ಡಿಸಿಪಿಯಾಗಿ ಕೆಲಸ ಮಾಡಿರುವುದಾಗಿ ಸೀಮಂತ್ ಕುಮಾರ್ ಸಿಂಗ್ ಹೇಳಿದರು. ನಗರದಲ್ಲಿ ಈಗಿರುವ ಪೊಲೀಸ್ ಅಧಿಕಾರಿಗಳೆಲ್ಲ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ, ಎಂದು ಅವರು ಹೇಳಿದರು.
ಬೆಂಗಳೂರು, ಜೂನ್ 6: ಹಿರಿಯ ಪೊಲೀಸ್ ಅಧಿಕಾರಿ ಸೀಮಂತ್ ಕುಮಾರ್ ಸಿಂಗ್ ಬೆಂಗಳೂರಿನ ನೂತನ ಪೊಲೀಸ್ ಕಮೀಷನರ್ (Bengaluru city police commissioner) ಆಗಿ ಚಾರ್ಜ್ ವಹಿಸಿಕೊಂಡ ಬಳಿಕ ಮಧ್ಯಮಗಳಿಗೆ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ; ಮುಖ್ಯಮಂತ್ರಿ, ಗೃಹ ಸಚಿವ, ಮುಖ್ಯ ಕಾರ್ಯದರ್ಶಿ ಮತ್ತು ಡಿಜಿ ಅವರ ಸೂಚನೆ ಮೇರೆಗೆ ವಿಷಮ ಪರಿಸ್ಥಿತಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ್ದೇನೆ, ಸೆಟ್ಲ್ ಆಗೋದಿಕ್ಕೆ ಕೊಂಚ ಕಾಲಾವಕಾಶ ಬೇಕು, ಮಾಧ್ಯಮದವರು ಕೇಳುವ ಪ್ರಶ್ನೆಗಳು ಮತ್ತು ಕಾರ್ಯಯೋಜನೆ ಬಗ್ಗೆ ನಂತರ ಮಾತಾಡುತ್ತೇನೆ ಎಂದು ಹೇಳಿದರು. ನಗರದ 39ನೇ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿರುವ ಸಿಮಂತ್ ಸಿಂಗ್, ನಗರದ ಎಲ್ಲ ಪೊಲೀಸ್ ಅಧಿಕಾರಿಗಳೊಂದಿಗೆ ಮಾತಾಡಿರುವುದನ್ನು ಹೇಳಿದರು.
ಇದನ್ನೂ ಓದಿ: ಸರ್ಕಾರ ಸ್ಥಿಮಿತ ಕಳೆದುಕೊಂಡಿದೆ, ಸಿಎಂ ಹೇಡಿಯಂತೆ ವರ್ತಿಸಿದ್ದಾರೆ: ಮಾಜಿ ಐಪಿಎಸ್ ಭಾಸ್ಕರ ರಾವ್ ಟೀಕೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jun 06, 2025 11:54 AM