Bengaluru Stampede; ಪೋಲೀಸ್ ಕಮೀಶನರ್ರನ್ನು ಸಸ್ಪೆಂಡ್ ಮಾಡಿದ್ದು ಸರ್ಕಾರದ ಬೇಜವಾಬ್ದಾರಿತನ: ಜ್ಯೋತಿಪ್ರಕಾಶ್ ಮಿರ್ಜಿ
ಸತ್ಕಾರ ಕೂಟ ಬೇಡ, ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸಬಹುದು ಅಂತ ಪೊಲೀಸರು ಹೇಳಿದರೂ ಸರ್ಕಾರ ಕಾರ್ಯಕ್ರಮ ಅಯೋಜಿಸಿದ್ದು ಯಾಕೆ?ಸತ್ಕಾರ ಸಮಾರಂಭ ಮತ್ತು ಮೆರವಣಿಗೆಗೆ ಪೊಲೀಸ್ ಅನುಮತಿ ನಿರಾಕರಿಸಿತ್ತು, ಅದರೆ ಇಲಾಖೆಯ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು, ನಡೆದ ಅನಾಹುತಕ್ಕಾಗಿ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಇಲಾಖೆಯ ಕಾರ್ಯದರ್ಶಿಯನ್ನೂ ಸಸ್ಪೆಂಡ್ ಮಾಡಬೇಕಿತ್ತು ಎಂದು ಮಿರ್ಜಿ ಹೇಳಿದರು.
ಬೆಂಗಳೂರು, ಜೂನ್ 6: ಯಾವುದೇ ತಪ್ಪು ಮಾಡದ ಪೊಲೀಸ್ ಅಧಿಕಾರಿಗಳನ್ನು ವಿನಾಕಾರಣ ಸಸ್ಪೆಂಡ್ ಮಾಡಿರುವುದು ಸರ್ಕಾರದ ಬೇಜವಾಬ್ದಾರಿ ಮತ್ತು ಅಸಮಂಜಸ ಧೋರಣೆಯಾಗಿದೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ ಜ್ಯೋತಿಪ್ರಕಾಶ್ ಮಿರ್ಜಿ ಹೇಳಿದರು. ನಮ್ಮ ವರದಿಗಾರನೊಂದಿಗೆ ಮಾತಾಡಿದ ಬೆಂಗಳೂರು ನಗರದ ಮಾಜಿ ಪೊಲೀಸ್ ಕಮೀಶನರ್, ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕಾದರೆ ಯಾಕೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಅಂತ ಸರ್ಕಾರ ವಿವರಣೆ ನೀಡಬೇಕಾಗುತ್ತದೆ, ಅದರೆ ಬೆಂಗಳೂರು ಪೊಲೀಸ್ ಕಮೀಶನರ್ ಮತ್ತು ಇತರ ಕೆಲ ಅಧಿಕಾರಿಗಳನ್ನು ವಿವರಣೆ ನೀಡದೆ ಸಸ್ಪೆಂಡ್ ಮಾಡಲಾಗಿದೆ, ಕಾಲ್ತುಳಿತ ಉಂಟಾಗಿ ಜನ ಸಾವನ್ನಪ್ಪಿದ್ದಾರೆ ಅಂತ ಪೊಲೀಸರು ಸರ್ಕಾರಕ್ಕೆ ಮಾಹಿತಿ ನೀಡಿಲ್ಲ ಅನ್ನೋದು ತಪ್ಪು, ಸರ್ಕಾರದ ಪ್ರತಿನಿಧಿಗಳು ಮಾಹಿತಿ ಸಿಕ್ಕ ಬಗ್ಗೆ ಮಾಧ್ಯಮಗಳ ಮುಂದೆ ಹೇಳಿದ್ದಾರೆ ಎಂದು ಮಿರ್ಜಿ ಹೇಳಿದರು.
ಇದನ್ನೂ ಓದಿ: ಸಸ್ಪೆಂಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ನಗರಕ್ಕೆ ಹೊಸ ಪೊಲೀಸ್ ಕಮಿಷನರ್ ನೇಮಕ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ