ರಾಜಣ್ಣ ಮಂತ್ರಿ ಸ್ಥಾನಕ್ಕೆ ಯಾಕೆ ರಾಜೀನಾಮೆ ನೀಡಿದರು ಅಂತ ನಂಗೊತ್ತಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್, ಸಚಿವೆ
ಮತದಾರರ ಪಟ್ಟಿಯ ಬಗ್ಗೆ ರಾಜಣ್ಣನವರು ವ್ಯತಿರಿಕ್ತವಾಗಿ ಮಾತಾಡಿದ್ದು ತಪ್ಪಾಯಿತಾ? ಡಿಕೆ ಶಿವಕುಮಾರ್ ವಿಷಯದಲ್ಲಿ ಪದೇಪದೇ ಪರೋಕ್ಷವಾಗಿ ಹೇಳಿಕೆ ನೀಡುತ್ತಿದ್ದಿದ್ದು ಮುಳುವಾಯ್ತಾ ಅಥವಾ ಅವರ ನೇರ ಮತ್ತು ನಿಷ್ಠುರ ಮಾತುಗಾರಿಕೆ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಯಿತಾ? ಎಂದು ಕೇಳಿದ ಪ್ರಶ್ನೆಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉತ್ತರ ನೀಡಲಿಲ್ಲ.
ಬೆಂಗಳೂರು, ಆಗಸ್ಟ್ 11: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar), ಹಿರಿಯ ರಾಜಕಾರಣಿ ಕೆಎನ್ ರಾಜಣ್ಣ ಮಂತ್ರಿ ಸ್ಥಾನಕ್ಕೆ ನೀಡಿರುವ ಬಗ್ಗೆ ತನ್ನಲ್ಲಿ ಮಾಹಿತಿ ಇಲ್ಲವೆಂದು ಹೇಳಿದರು. ಬೆಳಗ್ಗೆ ಕೌನ್ಸಿಲ್ ಮೀಟಿಂಗ್ ನಲ್ಲಿ ಬಿಸಿಯಾಗಿದ್ದೆ, ಶೂನ್ಯವೇಳೆಯಲ್ಲಿ ಗಮನ ಸೆಳೆಯುವ ಸೂಚನೆಯೊಂದಕ್ಕೆ ಉತ್ತರ ಕೊಡಬೇಕಿತ್ತು, ಎಲ್ಲ ಮುಗಿಸಿಕೊಂಡು ಮೊಗಸಾಲೆಗೆ ಬಂದಾಗಲೇ ತನಗೆ ರಾಜಣ್ಣನವರರು ರಾಜೀನಾಮೆ ನೀಡಿದ ವಿಷಯ ಗೊತ್ತಾಗಿದ್ದು, ಅವರು ಯಾಕೆ ರಾಜೀನಾಮೆ ನೀಡಿದರು? ಹೈಕಮಾಂಡ್ ಯಾಕೆ ರಾಜೀನಾಮೆ ಸಲ್ಲಿಸುವಂತೆ ಹೇಳಿತು ಅನ್ನೋದ್ಯಾವುದೂ ತನಗೆ ಗೊತ್ತಿಲ್ಲ, ಮಾಹಿತಿಯನ್ನು ಸಂಗ್ರಹಿಸಿ ರಿಯಾಕ್ಟ್ ಮಾಡೋದಾಗಿ ಸಚಿವೆ ಹೇಳಿದರು.
ಇದನ್ನೂ ಓದಿ: KN Rajanna Resigns: ಸಚಿವ ಕೆಎನ್ ರಾಜಣ್ಣ ರಾಜೀನಾಮೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
