ಶಿವಾನಂದ್ ಪಾಟೀಲ್​ಗೆ ₹ 5 ಕೋಟಿ, ಶಿವಕುಮಾರ್​ಗೆ ₹ 50 ಕೋಟಿ ಕೊಡುವ ಭರವಸೆ ನೀಡಿರುವೆ: ಬಸನಗೌಡ ಯತ್ನಾಳ್

ಅರುಣ್​ ಕುಮಾರ್​ ಬೆಳ್ಳಿ

Updated on: Nov 08, 2024 | 4:22 PM

ಬೀದರ್​ನಲ್ಲಿ ಮುಸಲ್ಮಾನರು ಹಿಂದೂಗಳ ಆಸ್ತಿ ಮತ್ತು ಜಮೀನು ತಮ್ಮದು ಎನ್ನುತ್ತಿದ್ದಾರೆಂದು ಅಲ್ಲಿಂದ ವಿಜಯಪುರಕ್ಕೆ ಬಂದಿದ್ದ ರೈತರ ನಿಯೋಗ ಹೇಳಿದೆ. ಹೈದರಾಬಾದ್ ನಿಜಾಮ ಸಾಯುವ ಮೊದಲು ಜಮೀನಿಗಳೆಲ್ಲ ನಿಮ್ಮವೇ ಅಂತ ಮುಸಲ್ಮಾನರಿಗೆ ಹೇಳಿದ್ದನಂತೆ, ಅದನ್ನು ಆಧಾರವಾಗಿಟ್ಟುಕೊಂಡು ಅವರು ಜಮೀನು ನಮ್ಮದು ಎನ್ನುತ್ತಿದ್ದಾರೆ ಎಂದು ರೈತರು ಹೇಳಿದ್ದಾರೆಂದು ಯತ್ನಾಳ್ ತಿಳಿಸಿದರು.

ಹಾವೇರಿ: ಜಿಲ್ಲೆಯ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರೈತರ ಬಗ್ಗೆ ಕೇವಲವಾಗಿ ಮಾತಾಡಿದ್ದಾರೆ, 5 ಲಕ್ಷ ರೂ. ಪರಿಹಾರ ಧನಕ್ಕಾಗಿ ಸಾವಿಗೆ ಶರಣಾಗುತ್ತಾರೆ, ಪ್ರತಿ ಎರಡು ವರ್ಷಗಳಿಗೊಮ್ಮೆ ಬರಗಾಲ ಬರಲಿ ಅಂತ ಬಯಸುತ್ತಾರೆ ಎಂದು ಹೇಳಿದ್ದಾರೆ. ತಮ್ಮ ಭಾಷಣ ಕೇಳದಿದ್ದರೆ ಗೃಹಲಕ್ಷ್ಮಿ ಯೋಜನೆಯ ₹ 2,000 ನಿಲ್ಲಿಸುವುದಾಗಿ ಹೇಳಿರುವ ಅವರಿಗೆ ತಾನು 5 ಕೋಟಿ ರೂ. ಕೊಡುತ್ತೇನೆ, ಸತ್ತು ತೋರಿಸು ಅಂತ ಹೇಳಿದ್ದೇನೆ ಎಂದು ಯತ್ನಾಳ್ ಹೇಳಿದರು. ಪಾಟೀಲ್ ಹೇಳಿದ್ದು ಸರಿ ಅಂತ ಸಮರ್ಥನೆ ಮಾಡಿಕೊಂಡ ಡಿಕೆ ಶಿವಕುಮಾರ್​ಗೆ ಸಾವಿಗೆ ಶರಣಾದರೆ ₹ 50 ಕೋಟಿ ಕೊಡೋದಾಗಿ ಹೇಳಿರುವೆ ಎಂದು ಯತ್ನಾಳ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ವಕ್ಫ್ ವಿರುದ್ಧದ ಯತ್ನಾಳ್ ಧರಣಿ ಅಂತ್ಯ: ಜಂಟಿ ಸದನ ಸಮಿತಿ ಅಧ್ಯಕ್ಷ ಕೊಟ್ಟ ಭರವಸೆ ಏನು?

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.