AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್ ವಿರುದ್ಧದ ಯತ್ನಾಳ್ ಧರಣಿ ಅಂತ್ಯ: ಜಂಟಿ ಸದನ ಸಮಿತಿ ಅಧ್ಯಕ್ಷ ಕೊಟ್ಟ ಭರವಸೆ ಏನು?

ವಿಜಯಪುರದಲ್ಲಿ ನಡೆದ ವಕ್ಫ್ ಭೂವಿವಾದದ ಪ್ರತಿಭಟನೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಭೇಟಿ ನೀಡಿ, ಹೊಸ ವಕ್ಫ್ ತಿದ್ದುಪಡಿ ಮಸೂದೆಯ ಮೂಲಕ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದಾರೆ. ರೈತರ ಭೂಮಿ ವಕ್ಫ್ ಆಗಿರುವುದರಿಂದ ಉಂಟಾಗಿರುವ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯುವ ನಿರೀಕ್ಷೆಯಿದೆ. ಜಗದಾಂಬಿಕಾ ಪಾಲ್ ಭರವಸೆ ಬೆನ್ನೆಲ್ಲೇ ಪ್ರತಿಭಟನೆ ಹಿಂಪಡೆಯಲಾಗಿದೆ.

ವಕ್ಫ್ ವಿರುದ್ಧದ ಯತ್ನಾಳ್ ಧರಣಿ ಅಂತ್ಯ: ಜಂಟಿ ಸದನ ಸಮಿತಿ ಅಧ್ಯಕ್ಷ ಕೊಟ್ಟ ಭರವಸೆ ಏನು?
ವಕ್ಫ್ ವಿರುದ್ಧದ ಯತ್ನಾಳ್ ಧರಣಿ ಅಂತ್ಯ: ಜಂಟಿ ಸದನ ಸಮಿತಿ ಅಧ್ಯಕ್ಷ ಕೊಟ್ಟ ಭರವಸೆ ಏನು?
ಅಶೋಕ ಯಡಳ್ಳಿ, ವಿಜಯಪುರ
| Edited By: |

Updated on: Nov 07, 2024 | 7:39 PM

Share

ವಿಜಯಪುರ, ನವೆಂಬರ್​ 07: ಕೇಂದ್ರ ಸರ್ಕಾರ ಜಾರಿಗೆ ತರಬೇಕೆನ್ನುವ ವಕ್ಫ್ (Waqf)​ ತಿದ್ದುಪಡಿ ಬಿಲ್ ಜಾರಿಗೆ ವಿಜಯಪುರ ಜಿಲ್ಲೆಯೇ ಮೊದಲ ಮೆಟ್ಟಿಲಾಗಿದೆ. ಕಳೆದ ನಾಲ್ಕು ದಿನಗಳಿಂದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದ ಬಿಸಿ ಹೆಚ್ಚಾಗಿತ್ತು. 1974 ರ ವಕ್ಫ್​ ಗೆಜೆಟ್ ರದ್ದಾಗಬೇಕೆಂದು ಹಾಗೂ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರ ಶಾಸಕ ಯತ್ನಾಳ್​, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಇತರರ ಹೋರಾಟಕ್ಕೆ ಜಂಟಿ ಸಂಸದೀಯ ಸಮಿತಿ ಸ್ಪಂದಿಸಿದೆ. ಜೆಪಿಸಿ ಅಧ್ಯಕ್ಷ ಹಾಗೂ ಸದಸ್ಯರು ಪ್ರತಿಭಟನಾ ಸ್ಥಳಕ್ಕಾಗಮಿಸಿ ಹೋರಾಟಗಾರರ ಭೇಟಿ ಮಾಡಿ ವಕ್ಪ್ ಬೋರ್ಡ್ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಹೊಸ ವಕ್ಪ್ ತಿದ್ದುಪಡಿ ಬಿಲ್ ಮೂಲಕ ಪರಿಹಾರ ನೀಡುವ ಭರವಸೆ ನೀಡಿದ್ದು, ಪರಿಣಾಮ ಧರಣಿ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.

ವಕ್ಫ್​​ ವಿರುದ್ಧ ದಿನದಿಂದ ದಿನಕ್ಕೆ ಹೋರಾಟ ಕಾವು ಹೆಚ್ಚಾಗಿತ್ತು. ಈ ಹಿನ್ನಲೆ ಇಂದು ಪ್ರತಿಭಟನಾ ಸ್ಥಳಕ್ಕೆ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹಾಗೂ ಜೆಪಿಸಿ ಸದಸ್ಯ ತೇಜಸ್ವಿ ಸೂರ್ಯ ಭೇಟಿ ನೀಡಿ ವಕ್ಪ್ ಬೋರ್ಡ್ ಸಮಸ್ಯೆಗಳನ್ನು ಆಲಿಸಿ ಅಹವಾಲು ಸ್ವೀರಿಸಿದ್ದಾರೆ. ಕನ್ಹೇರಿ ಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಠಾಧೀಶರ ಪರವಾಗಿ ಮಾತನಾಡಿ ಅಹವಾಲು ಸಲ್ಲಿಸಿದರು.

ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಹೇಳಿದ್ದಿಷ್ಟು 

ಬಳಿಕ ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಮಾತನಾಡಿ, ಇಲ್ಲಿ ಸಾವಿರಾರು ರೈತರು ಸಂಕಷ್ಟಕ್ಕೆ ಸಿಲುಕಿರುವ ಕಾರಣ ಗೋವಾಹಾಟಿಗೆ ಹೋಗುವದನ್ನು ಬಿಟ್ಟು ಇಲ್ಲಿ ಬಂದಿದ್ದೇನೆ. ರೈತರ ಜಮೀನಿನಲ್ಲಿ ವಕ್ಪ್ ಬೋರ್ಡ್ ಆಗಿದ್ದಕ್ಕೆ ರೈತರಿಗೆ ಬೇಸರವಿದೆ. ಜಮೀನುಗಳು ವಕ್ಪ್ ಬೋರ್ಡ್ ಎಂದಾಗಿದ್ದನ್ನು ತೆರವು ಮಾಡಲು ಜೆಪಿಸಿ ರಚನೆ ಆಗಿದೆ. ವಿಜಯಪುರ ಹುಬ್ಬಳ್ಳಿಯಲ್ಲಿಯೂ ವಕ್ಪ್ ಬೋರ್ಡ್ ಸಮಸ್ಯೆಯಾಗಿದೆ. ಇಲ್ಲಿಯ ಸಮಸ್ಯೆ ಕುರಿತು ಸಂಸದ ತೇಜಸ್ವಿ ಸೂರ್ಯ, ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಮಾಹಿತಿ ನೀಡಿದರು. ರೈತರು ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆಂದು ಸಚಿವೆ ಕರಂದ್ಲಾಜೆ ಹೇಳಿದ ಕಾರಣ ಇಲ್ಲಿಗೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಜಗದಂಭಿಕಾ ಪಾಲ್ ಒಬ್ಬರೇ ಬಂದಿದ್ದಾರೆ. ಇಡೀ ಕಮೀಟಿ‌ ಯಾಕೆ ರಾಜ್ಯಕ್ಕೆ ಬಂದಿಲ್ಲ ಎಂದು ವಿರೋಧ ಪಕ್ಷದವರು ಪ್ರಶ್ನೆ ಮಾಡಿದ್ದಾರೆ. ಆದರೆ ಈ ವಿಚಾರದಲ್ಲಿ ದೇಶದಲ್ಲಿ ಒಂದು‌ ಕೋಟಿಗೂ ಅಧಿಕ ಜನರು ಮನವಿ ಸಲ್ಲಿಸಿದ್ದಾರೆ. ಜೆಪಿಸಿ ಮೂಲಕ ವಕ್ಪ್ ಕಾಯ್ದೆಯನ್ನು ಪಾರದರ್ಶಕವಾಗಿ ಬದಲಾವಣೆ ಮಾಡುತ್ತೇವೆ. ಎಲ್ಲ ಪಕ್ಷದ ಮುಖಂಡರು ವಕ್ಪ್ ಜೆಪಿಸಿಯಲ್ಲಿದ್ದೇವೆ. ಯಾವುದೇ ನಿರ್ಧಾರ ಕಾಯ್ದೆ ಕುರಿತು ಎಲ್ಲವನ್ನೂ ಎಲ್ಲರ ಸಮ್ಮುಖದಲ್ಲಿ‌ ಸಭೆ ನಡೆಸಿ ತೀರ್ಮಾನ ಮಾಡುತ್ತವೆ ಎಂದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಕ್ಫ್ ಹೆಸರು ನಮೂದಿಸಿದ್ದಾರೆ: ಹುಬ್ಬಳ್ಳಿಯಲ್ಲಿ ಜಗದಾಂಬಿಕಾ ಪಾಲ್ ಗಂಭೀರ ಆರೋಪ

ವಂಶಪಾರಂಪರ್ಯವಾಗಿ ಬಂದ ಜಮೀನುಗಳು ವಕ್ಪ್ ಬೋರ್ಡ್ ಎಂದು ಮಾಡಲಾಗುತ್ತಿದೆ. ಇದಕ್ಕೆ ರಾಜ್ಯದಲ್ಲಿ ಯಾರು ಹೊಣೆ? ವಕ್ಪ್ ಸಚಿವ ಜಮೀರ್ ರೈತರ ಜಮೀನುಗಳನ್ನು ವಕ್ಪ್ ಎಂದು ಮಾಡಲು ಅಧಿಕಾರಿಗಳಿಗೆ ಟಾರ್ಗೆಟ್ ನೀಡುತ್ತಿದ್ದಾರೆ. ರೈತರಿಗೆ ವಕ್ಪ್ ಕಾನೂನು ಜಾರಿಯಾಗುವ ಮುನ್ನ ಯಾಕೆ ನೊಟೀಸ್ ನೀಡಲಾಗುತ್ತಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ವಕ್ಪ್ ಬೋರ್ಡ್ ಆಸ್ತಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು: ಶಾಸಕ ಯತ್ನಾಳ್

ಶಾಸಕ ಯತ್ನಾಳ್​ ಮಾತನಾಡಿ, ದೇಶದಲ್ಲಿರುವ ಇಡೀ ವಕ್ಪ್ ಆಸ್ತಿ ರಾಷ್ಟ್ರೀಯ ಆಸ್ತಿಯಾಗಬೇಕು. ವಕ್ಪ್ ಬೋರ್ಡ್ ಆಸ್ತಿ ರಾಷ್ಟ್ರೀಯ ಸಂಪತ್ತು ಎಂದು ಘೋಷಣೆ ಮಾಡಬೇಕು, ಅದು ರಾಷ್ಟ್ರಕ್ಕೆ ಸೇರಬೇಕು. ಈ‌ ನಿಟ್ಟಿನಲ್ಲಿ ಸಮಗ್ರ ಮಾಹಿತಿಯ ದಾಖಲೆಗಳ ಜೊತೆಗೆ ನಾವು ಮನವಿ ಸಲ್ಲಿಕೆ ಮಾಡುತ್ತೇವೆ. ಲೋಕಸಭೆಯಲ್ಲಿ ವಕ್ಪ್ ವಿರುದ್ದ ಹೋರಾಟ ಮಾಡಿದ ವಿಜಯಪುರ ಜಿಲ್ಲೆಯು ಹೆಸರು ಉಲ್ಲೇಖವಾಗಬೇಕಿದೆ ಎಂದಿದ್ದಾರೆ.

ವಕ್ಪ್ ಕಾಯ್ದೆಯನ್ನು ಪೂರ್ಣ ಬದಲಾಯಿಸಬೇಕೆಂದು ಕನ್ಹೇರಿ ಮಠದ ಸ್ವಾಮೀಜಿ

ಜಿಲ್ಲೆಯಲ್ಲಿ ವಕ್ಪ್ ಸಮಸ್ಯೆಯಾಗಿದೆ, ಜಿಲ್ಲೆಯ ಮಠ ಮಾನ್ಯಗಳ ಜಮೀನು, ರೈತರ ಭೂಮಿಗಳು ವಕ್ಪ್ ಆಗಿವೆ. ರೈತರ ಜಮೀನುಗಳು ಮಠಗಳ ಸಂಘ ಸಂಸ್ಥೆಗಳ ಆಸ್ತಿಗಳು ವಕ್ಪ್ ಆಗಿವೆ. ಈ ಸಮಸ್ಯೆ ಒಂದು ಟಯರ್​ಗೆ 40 ಪಂಚರ್ ಆದಂತಾಗಿದೆ. ಒಂದೆರೆಡು ಪಂಚರ ಆದ ಟಯರ್ ರಿಪೇರಿ ಮಾಡಬಹುದು 40 ಪಂಚರ್ ಆದರೆ ಟಯರ್ ಬದಲಾವಣೆಯೇ ಮಾರ್ಗ. ವಕ್ಪ್ ಸಹ ಹಾಗೆ ಆಗಿದೆ. ಈ ಕಾಯ್ದೆಯನ್ನು ಪೂರ್ಣ ಬದಲಾಯಿಸಬೇಕೆಂದು ಕನ್ಹೇರಿ ಮಠದ ಸ್ವಾಮೀಜಿ ಹೇಳಿದ್ದಾರೆ.

ಬಳಿಕ ಮಾತನಾಡಿದ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ‌, ಜೆಪಿಸಿ ಅಧ್ಯಕ್ಷ ಹಾಗೂ ಸದಸ್ಯರ ಮೇಲೆ‌ ನಿರೀಕ್ಷೆ ಇದೆ. ಭೂಮಿ ದೇಶದ ಸಂಪತ್ತು. ಈ ಸಂಪತ್ತನ್ನೇ ವಶಕ್ಕೆ ಪಡೆಯಲಾಗುತ್ತಿದೆ ಎಂದಿದ್ದಾರೆ. ಹಾಗಾಗಿ ವಕ್ಪ್ ಕಾಯ್ದೆ ಬದಲಾಗಬೇಕು, ವಕ್ಪ್ ಟ್ರಿಬ್ಯುನಲ್​ನಿಂದ ಸಮಸ್ಯೆಯಾಗಿದೆ. ಒಂದೇ ದೇಶದಲ್ಲಿ ನಮಗೆ ಒಂದು ಕಾಯ್ದೆ ವಕ್ಫ್​ಗೆ ಒಂದು ಕಾನೂನು ಏಕೆ? ಇದನ್ನು ಬದಲಾವಣೆ ಮಾಡುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ ಎಂದರು. ಸರ್ಕಾರ ಮುಂದಿನ ಅಧಿವೇಶನದಲ್ಲಿ ವಕ್ಪ್ ಅಮೆಂಡ್ಮೆಂಟ್ ಬಿಲ್‌ಪಾಸ್ ಮಾಡಬೇಕೆಂದು ಒತ್ತಾಯ ಮಾಡಿದರು.

ಕರ್ನಾಟಕದಲ್ಲಿ‌ ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರೆರಿಸಮ್ ನಡೆಯುತ್ತಿದೆ ಎಂದ ಶೋಭಾ ಕರಂದ್ಲಾಜೆ

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ವಕ್ಪ ವಿಚಾರದಲ್ಲಿ ಕರ್ನಾಟಕದ ಜನರು ವಿಜಯಪುರ ಜಿಲ್ಲೆಯ ಜನರು ಜೀವವನ್ನು ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದ ಕಾರಣ ಹೋರಾಟದಲ್ಲಿ ಭಾಗಿಯಾಗಿದ್ದೇನೆ. ಅಲ್ಲಾಹನಿಗೆ ದಾನ ಮಾಡುವುದೇ ವಕ್ಪ್ ಅರ್ಥವಾಗಿದೆ. 1954 ರಲ್ಲಿ ವಕ್ಪ್ ಅಸ್ತಿ‌ ಎಷ್ಟಿತ್ತು? ಈಗಾ ದೇಶದಲ್ಲಿ 38 ಲಕ್ಷ ಎಕರರೆಯಾಗಿದೆ. ಸೇನಾ ಇಲಾಖೆ, ರೇಲ್ವೇ ಇಲಾಖೆ ಆಸ್ತಿಯ ನಂತರ ವಕ್ಪ್ ಆಸ್ತಿ ಮೂರನೇ ಸ್ಥಾನ ಪಡೆದಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸಿಎಂ ಆದ ಬಳಿಕ‌ ಜಮೀರ್ ವಕ್ಪ್ ಸಚಿವನಾದ ಬಳಿಕ ವಕ್ಫ್​ಗೆ ಅದಾಲತ್ ನಡೆಯುತ್ತಿದೆ. ಎಲ್ಲ ಜಿಲ್ಲೆಗಳಲ್ಲಿ ಡಿಸಿ ಹಾಗೂ ಅಧಿಕಾರಿಗಳಿಗೆ ಸಚಿವ ಜಮೀರ್ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದರು.  ವಕ್ಪ್ ವಿರುದ್ದ ಕೋರ್ಟ್​​ಗೆ ಹೋಗದಂತೆ ಕಾಯ್ದೆಯನ್ನು ಕಾಂಗ್ರೆಸ್ ಮಾಡಿದ್ದು ಶಾಪವಾಗಿದೆ. ವಕ್ಪ್ ಟ್ರಿಬ್ರುನಲ್​ನಿಂದ ನ್ಯಾಯ ಸಿಗಲ್ಲ. ಕರ್ನಾಟಕದಲ್ಲಿ‌ ಲ್ಯಾಂಡ್ ಜಿಹಾದ್, ಲ್ಯಾಂಡ್ ಟೆರೆರಿಸಮ್ ನಡೆಯುತ್ತಿದೆ. ಕಾರಣ ನಮಗೆ ನ್ಯಾಯ ಸಿಗೋವರೆಗೂ ನಾವು ಹೋರಾಟ ಮುನ್ನಡೆಸುತ್ತೇವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ವಕ್ಪ್ ಅಮೆಂಡ್ಮೆಂಟ್ ಬಿಲ್ ಜಾರಿಯಾಗಲಿ ಎಂದರು.

ಇದನ್ನೂ ಓದಿ: ವಕ್ಫ್ ವಿವಾದ: ವಿಜಯಪುರಕ್ಕೆ ಜೆಪಿಸಿ ಅಧ್ಯಕ್ಷರ ಭೇಟಿ ಬಗ್ಗೆ ಶೋಭಾ ಮಾತು

ಕಳೆದ ನಾಲ್ಕು ದಿನಗಳಿಂದ ವಕ್ಪ್ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಇಂದು ತೆರೆ ಬಿದ್ದಿದೆ. ವಕ್ಪ್ ಅಮೆಡ್ಮೆಂಟ್ ಬಿಲ್ ಜಾರಿ ಮಾಡಲು ರಚನೆಯಾದ ಜಂಟಿ ಸಂಸದೀಯ ಮಂಡಳಿಯ ಮೂಲಕ ವಕ್ಫ್​ಗೆ ಕಡಿವಾಣ ಹಾಕುತ್ತೇವೆಂದು ಸಮಿತಿ ಆಧ್ಯಕ್ಷ ಜಗದಾಂಬಿಕಾ ಪಾಲ್ ಭರವಸೆ ನೀಡಿದ ಕಾರಣ ಹೋರಾಟವನ್ನು ಹಿಂಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಯತ್ನಾಳ ನೇತೃತ್ವದಲ್ಲಿ ಜಿಲ್ಲೆ ಜಿಲ್ಲೆಗಳಿಗೂ ತೆರಳಿ ಜನರಲ್ಲಿ ವಕ್ಪ್ ಬೋರ್ಡ್ ಕುರಿತು ಜಾಗೃತಿ ಮೂಡಿಸೋ ಕಾರ್ಯ ಮಾಡುವುದಾಗಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Ashok Yadalli
Ashok Yadalli

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ದಿಲೀಪ್ ಕೊನೆಯ ಕ್ಷಣಗಳನ್ನು ವಿವರಿಸಿದ ಆಟೋ ಚಾಲಕ
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!
ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು!