AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಕ್ಫ್​ ವಿವಾದ: ಕರ್ನಾಟಕಕ್ಕೆ ಬಂದ ಜಂಟಿ ಸದನ ಸಮಿತಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​ ನಾಯಕರು

ವಕ್ಫ್ ಬೋರ್ಡ್​ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ವಕ್ಫ್​ ಹಾಗೂ ಸರ್ಕಾರದ ನಡೆ ವಿರುದ್ಧ ಆಹೋರಾತ್ರಿ ಧರಣಿ.. ಅನಿರ್ದಿಷ್ಟಾವಧಿ ಸತ್ಯಾಗ್ರಹದ ಕಿಚ್ಚು ವ್ಯಾಪಿಸುತ್ತಲೇ ಇದೆ. ಸರ್ಕಾರ ಆದೇಶ ವಾಪಸ್​ ತೆಗೆದುಕೊಂಡಿದ್ರೂ, ರೈತರ ಆಕ್ರೋಶ ಮಾತ್ರ ನಿಲ್ಲುತ್ತಿಲ್ಲ. ಅದೆಷ್ಟೋ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ಇವತ್ತಿಗೂ ಇದೆ. ಇನ್ನು ಇದನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ಆಹೋರಾತ್ರಿ ಧರಣಿ ನಡೆಸ್ತಿದೆ. ಇದರ ಮಧ್ಯೆ ಇದೀಗ ಅಸಲಿ ಸತ್ಯ ಶೋಧನೆಗೆ ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್​ ಎಂಟ್ರಿ ಕೊಟ್ಟಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಗಾದ್ರೆ, ಯಾರ್ಯಾರು ಏನೆಲ್ಲಾ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ವಕ್ಫ್​ ವಿವಾದ: ಕರ್ನಾಟಕಕ್ಕೆ ಬಂದ ಜಂಟಿ ಸದನ ಸಮಿತಿ ಅಧ್ಯಕ್ಷರ ವಿರುದ್ಧ ಮುಗಿಬಿದ್ದ ಕಾಂಗ್ರೆಸ್​​ ನಾಯಕರು
ವಕ್ಫ್​ ವಿವಾದ
ರಮೇಶ್ ಬಿ. ಜವಳಗೇರಾ
|

Updated on: Nov 07, 2024 | 4:01 PM

Share

ಬೆಂಗಳೂರು, (ನವೆಂಬರ್ 07): ಕರ್ನಾಟಕದಲ್ಲಿ ವಕ್ಫ್​ ಬೋರ್ಡ್​ ವಿವಾದ ದೆಹಲಿ ಮಟ್ಟಕ್ಕೂ ತಲುಪುತ್ತಿದ್ದಂತೆಯೇ ಅಸಲಿ ಸತ್ಯ ತನಿಖೆಗೆ ಜೆಪಿಸಿ ಅಧ್ಯಕ್ಷರೇ ಇದೀಗ ಎಂಟ್ರಿ ಕೊಟ್ಟಿದ್ದಾರೆ. ಹಲವು ಜಿಲ್ಲೆಗಳಿಗೆ ಭೇಟಿ ಕೊಟ್ಟು, ರೈತರಿಂದ ಅಹವಾಲು ಸ್ವೀಕರಿಸೋ ಮೂಲಕ ವಕ್ಫ್ ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಪರಿಶೀಲನೆಗೆ ಮುಂದಾಗಿದ್ದಾರೆ. ಮೊದಲಿಗೆ ಹುಬ್ಬಳ್ಳಿಗೆ ಭೇಟಿ ನೀಡಿದ ಜೆಪಿಸಿ, ನೂರಾರು ರೈತರಿಂದ ಅಹವಾಲು ಸ್ವೀಕರಿಸಿದೆ. ಬಳಿಕ ವಿಜಯಪುರಕ್ಕೂ ಭೇಟಿ ನೀಡಿ ರೈತರ ಸಮಸ್ಯೆ ಕೇಳಿದೆ. ಇನ್ನು ಜಗದಾಂಬಿಕಾ ಪಾಲ್ ನಡೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆದಿಯಾಗಿ ಸಚಿವರು, ಶಾಸಕರು ಸೇರಿದಂತೆ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

ಜೆಪಿಸಿ ಒಂದು ನಾಟಕ ಕಂಪನಿ ಎಂದ ಡಿಕೆಶಿ

ವಕ್ಫ್ ಜಂಟಿ ಸದನ ಸಮಿತಿ ಭೇಟಿ ಬಗ್ಗೆ ಹುಬ್ಬಳ್ಳಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ವಕ್ಫ್ ಜಂಟಿ ಸದನ ಸಮಿತಿ ಪಕ್ಷದ ಕೆಲಸಕ್ಕೆ ಬಂದಿದೆ. ಪ್ರಚಾರಕ್ಕಾಗಿ ಜಗದಾಂಬಿಕಾ ಪಾಲ್​​​ ಕರ್ನಾಟಕಕ್ಕೆ ಬಂದಿದ್ದಾರೆ. ಜೆಪಿಸಿ ಒಂದು ನಾಟಕ ಕಂಪನಿ ಆಗಿದೆ . ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಪಹಣಿಯಲ್ಲಿ ತಿದ್ದುಪಡಿ ಆಗಿದೆ. ರೈತರ ಆಸ್ತಿ ಕಬಳಿಸೋ ಪ್ರಶ್ನೆ ಇಲ್ಲ. ನಾವು ರೈತರನ್ನ ಉಳಿಸುತ್ತೇವೆ ಎಂದು ವಕ್ಫ್ ಜಂಟಿ ಸದನ ಸಮಿತಿ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ರಾಜ್ಯ ಸರ್ಕಾರದ ಸೂಚನೆ ಮೇರೆಗೆ ವಕ್ಫ್ ಹೆಸರು ನಮೂದಿಸಿದ್ದಾರೆ: ಹುಬ್ಬಳ್ಳಿಯಲ್ಲಿ ಜಗದಾಂಬಿಕಾ ಪಾಲ್ ಗಂಭೀರ ಆರೋಪ

ಜೆಪಿಸಿ ಕಮಿಟಿ ಭೇಟಿ ರಾಜಕೀಯ ಪ್ರೇರಿತ‌ ಎಂದ ಖರ್ಗೆ

ಇನ್ನು ಈ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ರಾಜ್ಯಕ್ಕೆ ಜೆಪಿಸಿ ಕಮಿಟಿ ಭೇಟಿ ರಾಜಕೀಯ ಪ್ರೇರಿತ‌. ಜಂಟಿ ಪಾರ್ಲಿಮೆಂಟ್ ಕಮಿಟಿ ಅಂದ್ರೆ ಏನು? ಕಮಿಟಿ ಭೇಟಿ ಅಂದ್ರೆ ಎಲ್ಲಾ ಸದಸ್ಯರು ಬರಬೇಕಲ್ವಾ? ಬರೀ ಅದ್ಯಕ್ಷಕರು ಮಾತ್ರ ಬಂದಿದ್ದಾರೆ. ಅವರ ಜೊತೆ ಯಾರಿದ್ದಾರೆ. ಬಿಜೆಪಿ ಮಾಜಿ ಎಂಪಿ ಇದ್ದಾರೆ. ಅವರೆಲ್ಲಾ ಕಮಿಟಿಗೆ ಏನು ಸಂಬಂಧ? . ವಕ್ಫ್​ ತೆಗೆಯಬೇಕು ಎಂದು ಬಿಜೆಪಿಯವರು ಹೇಳುತ್ತಾರೆ ಅಲ್ವಾ ಒಂದೂವರೆ ವರ್ಷದ ಹಿಂದೆ ಬಿಜೆಪಿ ಸರ್ಕಾರನೇ ಇತ್ತು. ಆಗ ಏನು ಇವರು ಕತ್ತೆ ಕಾಯುತ್ತಿದ್ದಾರಾ ಎಂದು ವಾಗ್ದಾಳಿ ನಡೆಸಿದರು.

ಚುನಾವಣಾ ಗಿಮಿಕ್ ಎಂದ ಸಚಿವ ಈಶ್ವರ್ ಖಂಡ್ರೆ

ಈ ಬಗ್ಗೆ ಹಾವೇರಿಯಲ್ಲಿ ಮತ್ತೋರ್ವ ಸಚಿವ ಈಶ್ವರ್ ಖಂಡ್ರೆ ಮಾತನಾಡಿದ್ದು, ಸಂಸದೀಯ ಜಂಟಿ ಸಮಿತಿ ಭೇಟಿ ಚುನಾವಣಾ ಗಿಮಿಕ್. ಬಿಜೆಪಿಯವರು ತಾವು ಮಾಡಿದ ತಪ್ಪನ್ನು ನಮ್ಮ ಮೇಲೆ ಹಾಕುತ್ತಿದ್ದಾರೆ. ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಈ ರೀತಿಯ ನಾಟಕ ಮಾಡುತ್ತಿದ್ದಾರೆ. ಯಾವ ರೈತರನ್ನು ಒಕ್ಕಲೆಬ್ಬಿಸಲ್ಲ ಎಂದು ಸಿಎಂ ಹೇಳಿದ್ದಾರೆ. ವಿಚಾರಣೆ ಇಲ್ಲದೆಯೇ ವಕ್ಫ್ ಅಂತ ಮಾಡಲ್ಲವೆಂದು ಹೇಳಿದ್ದಾರೆ. ನಾಟಕ ಮಾಡಲು ಸಂಸತ್ ಜಂಟಿ ಸಮಿತಿ ಬಂದಿದೆ . ಮುಗ್ದ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು. ಮಹಾರಾಷ್ಟ್ರ, ಜಾರ್ಖಂಡ ಹಾಗೂ ರಾಜ್ಯದಲ್ಲಿ ಉಪ ಚುನಾವಣೆ ಬಂದಿದೆ , ಇದೆಲ್ಲವೂ ಚುನಾವಣಾ ಗಿಮಿಕ್ . ಸೌಹಾರ್ದಯುತವಾಗಿ ನಮ್ಮ ಸರ್ಕಾರ ಬಗೆಹರಿಸುತ್ತೆ ಎಂದು ಹೇಳಿದರು.

ಇನ್ನು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿ, ವಕ್ಫ್ ಜಂಟಿ ಸದನ ಸಮಿತಿ ಅಧ್ಯಕ್ಷ ಒಬ್ಬರೇ ಬಂದಿದ್ದಾರೆ. ಇದರಲ್ಲಿ ಪೊಲಿಟಿಕಲ್ ಮೂವ್​ಮೆಂಟ್ ಕಾಣುತ್ತಿದೆ ಎಮದರು.

ಕರ್ನಾಟಕ ಸಂಬಂಧಿತ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ