DK Shivakumar; ಕೆಲದಿನಗಳಿಂದ ನಿದ್ರೆ ಮಾಡಿಲ್ಲ, ದೇಹಕ್ಕೆ ವಿಶ್ರಾಂತಿಯ ಅಗತ್ಯವಿದೆ: ಡಿಕೆ ಶಿವಕುಮಾರ್, ನಿಯೋಜಿತ ಉಪಮುಖ್ಯಮಂತ್ರಿ
ಮುಖ್ಯಮಂತ್ರಿಯಾಗಲಿಲ್ಲವೆನ್ನುವ ಕಹಿ ಕ್ರಮೇಣ ಅವರಿಂದ ಮರೆಯಾಗುತ್ತಿದೆ ಅಂತೆನಿಸುತ್ತಿದೆ. ಕಳೆದ ಕೆಲ ದಿನ ದಿನಗಳಿಂದ ಅವರ ಮುಖದಲ್ಲಿ ನಗು ಕಾಣದಾಗಿತ್ತು
ಬೆಂಗಳೂರು: ದೆಹಲಿಯಿಂದ ಇಂದು ಬೆಳಗ್ಗೆ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ರಾಜ್ಯದ ನಿಯೋಜಿತ ಉಪಮುಖ್ಯಮಂತ್ರಿ (designated deputy CM) ಡಿಕೆ ಶಿವಕುಮಾರ್ (DK Shivakumar) ಭಾರೀ ಪ್ರಮಾಣದಲ್ಲಿ ದಣಿದಿದ್ದರು. ಆಯಾಸ, ಬಳಲಿಕೆ (fatigue) ಅವರ ಮುಖದಲ್ಲಿ ಎದ್ದು ಕಾಣುತಿತ್ತು. ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿದ್ದು ಅದನ್ನೇ. ಕೆಲ ದಿನಗಳಿಂದ ನಿದ್ರೇನೇ ಇಲ್ಲ, ಈಗ ಮನೆಗೆ ಹೋಗಿ ಫ್ರೆಶ್ ಆಗಬೇಕು, ಬಾಡಿಗೆ ರೆಸ್ಟ್ ಬೇಕಾಗಿದೆ, ಆಮೇಲೆ ಮಾತಾಡ್ತೀನಿ ಅಂತ ಅವರು ಹೇಳುತ್ತಾರೆ. ಮುಖ್ಯಮಂತ್ರಿಯಾಗಲಿಲ್ಲವೆನ್ನುವ ಕಹಿ ಕ್ರಮೇಣ ಅವರಿಂದ ಮರೆಯಾಗುತ್ತಿದೆ ಅಂತೆನಿಸುತ್ತಿದೆ. ಕಳೆದ ಕೆಲ ದಿನ ದಿನಗಳಿಂದ ಅವರ ಮುಖದಲ್ಲಿ ನಗು ಕಾಣದಾಗಿತ್ತು. ಮಾಧ್ಯಮದವರೊಂದಿಗೆ ಮಾತಾಡುವಾಗ ಮುಖದಲ್ಲಿ ಈಗ ನಗು ಕಾಣುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ