Siddaramaiah: ನಿಯೋಜಿತ ಸಿದ್ದರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳ ದಂಡು, ಜಾನಪದ ಹಾಡುಗಳಿಂದ ಗುಣಗಾನ
‘ಸಿದ್ರಾಮಣ್ಣ ಇರುವಾಗ ಬೇರೆ ಮುಖ್ಯಮಂತ್ರಿ ಯಾಕೆ ಬೇಕಣ್ಣ...’ ಅಂತ ಹಾಡು ಸಾಗುತ್ತದೆ. ಕೆಲ ಅಭಿಮಾನಿಗಳಿಂದ ಸಿಹಿ ಹಂಚುವ ಕೆಲಸವೂ ಜಾರಿಯಲ್ಲಿದೆ.
ಬೆಂಗಳೂರು: ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಕುಮಾರಕೃಪಾ ರಸ್ತೆಯಲ್ಲಿರುವ ಮನೆಮುಂದೆ ಅಭಿಮಾನಿಗಳ ದಂಡು ನೆರೆದಿದೆ. ಜಾನಪದ ಹಾಡುಗಾರ (folk singers) ತಂಡವೊಂದು ಸಹ ಅಲ್ಲಿಗೆ ಆಗಮಿಸಿದ್ದು, ಸಿದ್ದರಾಮಯ್ಯನವರ ಮೇಲೆ ಗೀತೆಗಳನ್ನು ರಚಿಸಿ ಹಾಡುತ್ತಿದ್ದಾರೆ. ‘ಸಿದ್ರಾಮಣ್ಣ ಇರುವಾಗ ಬೇರೆ ಮುಖ್ಯಮಂತ್ರಿ ಯಾಕೆ ಬೇಕಣ್ಣ…’ ಅಂತ ಹಾಡು ಸಾಗುತ್ತದೆ. ಕೆಲ ಅಭಿಮಾನಿಗಳಿಂದ ಸಿಹಿ ಹಂಚುವ ಕೆಲಸವೂ ಜಾರಿಯಲ್ಲಿದೆ. ಸಿದ್ದರಾಮಯ್ಯ ದೆಹಲಿಯಿಂದ ಬೆಂಗಳೂರಿಗೆ ಈಗಾಗಲೇ ಆಗಮಿಸಿದ್ದು ಬೆಳಗ್ಗೆ 11 ಗಂಟೆಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ (Kanteerava Stadium) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ