Video: ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಚಿರತೆ ಮರಿ ಸಾವು

Updated on: Nov 29, 2025 | 10:31 AM

ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಕೋಣಕೆರೆ ಬಳಿ, 3 ವರ್ಷದ ಚಿರತೆ ಮರಿ ರಸ್ತೆ ದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದೆ. ಅರಣ್ಯ ಪ್ರದೇಶದಲ್ಲಿ ನಿಧಾನವಾಗಿ ಚಲಿಸುವ ಎಚ್ಚರಿಕೆ ಫಲಕಗಳಿದ್ದರೂ ವಾಹನ ಸವಾರ ವೇಗವಾಗಿ ಬಂದು ಅಪಘಾತ ಎಸಗಿದ್ದಾನೆ. ಇದು ಹಿಟ್ ಅಂಡ್ ರನ್ ಪ್ರಕರಣವಾಗಿದ್ದು, ಅರಣ್ಯ ಇಲಾಖೆ ಹಾಗೂ ಪೊಲೀಸರು ಚಾಲಕನ ಪತ್ತೆಗಾಗಿ ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಹಾವೇರಿ, ನ.29: ಜಿಲ್ಲೆಯ ಶಿಗ್ಗಾಂವಿ ತಾಲ್ಲೂಕಿನ ಕೋಣಕೆರೆ (leopard cub accident) ಗ್ರಾಮದ ಬಳಿ  ರಸ್ತೆ ದಾಟುತ್ತಿದ್ದ ಮೂರು ವರ್ಷದ ಚಿರತೆ ಮಗೆ ವಾಹನ ಡಿಕ್ಕಿ ಹೊಡೆದಿದ್ದು, ಚಿರತೆ  ಸ್ಥಳದಲ್ಲೇ ಸಾವನ್ನಪ್ಪಿದೆ. ಅರಣ್ಯಪ್ರದೇಶದಲ್ಲಿ ನಿಧಾನವಾಗಿ ಚಲಿಸಬೇಕು ಎಂಬ ಎಚ್ಚರಿಕೆ ಬೋರ್ಡ್​​ ಹಾಕಿದ್ರು, ವಾಹನ ಸವಾರ ವೇಗವಾಗಿ ಬಂದು ಚಿರತೆಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಾಹನ ಸವಾರನ ಮೇಲೆ ಹಿಟ್ ಆ್ಯಂಡ್ ರನ್ ಪ್ರಕರಣವನ್ನು ದಾಖಲಿಸಲಾಗಿದೆ. ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಪೊಲೀಸರು ವಾಹನ ಸವಾರನ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ