Video: ಹಣ ಹಂಚಿಕೆ ವಿಚಾರವಾಗಿ ಮಂಗಳಮುಖಿಯರ ನಡುವೆ ಮಾರಾಮಾರಿ
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಹಣ ಹಂಚಿಕೆ ವಿಚಾರಕ್ಕೆ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ನಡೆದ ಭೀಕರ ಗಲಾಟೆ ವಿಡಿಯೋ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಮಾರಾಮಾರಿಯಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದೆ ಹಾಗೂ ವಸ್ತುಗಳಿಗೆ ಹಾನಿಯನ್ನುಂಟು ಮಾಡಿದ್ದಾರೆ. ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ.
ಮಂಡ್ಯ, ನ.29: ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ಗ್ರಾಮದಲ್ಲಿ ಮಂಗಳಮುಖಿಯರ (Mandya transgender fight) ನಡುವೆ ಬಿಗ್ ಫೈಟ್ ನಡೆದಿದೆ. ಇದೀಗ ಈ ಬಗ್ಗೆ ವಿಡಿಯೋವೊಂದು ವೈರಲ್ ಆಗಿದೆ. ಹಣ ಹಂಚಿಕೆ ವಿಚಾರಕ್ಕೆ ಮೈಸೂರು ಮತ್ತು ಮಂಡ್ಯದ ಮಂಗಳಮುಖಿಯರ ಗುಂಪುಗಳ ಮಧ್ಯೆ ಗಲಾಟೆ ನಡೆದಿದೆ. ಎರಡು ಕಡೆಯವರು ಸಾರ್ವಜನಿಕ ಸ್ಥಳದಲ್ಲಿ ಸಿಕ್ಕ ಸಿಕ್ಕ ವಸ್ತುಗಳಿಂದ ಮನಬಂದಂತೆ ಬಡಿದಾಡಿಕೊಂಡಿದ್ದಾರೆ. ಇವರ ಗಲಾಟೆಯಿಂದ ಸಾರ್ವಜನಿಕ ವಸ್ತುಗಳಿಗೆ ಹಾನಿಯಾಗಿದೆ. ಜತೆಗೆ ಅಲ್ಲಿನ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಪ್ರತಿದಿನ ಈ ಮಂಗಳಮುಖಿಯರ ಜಗಳ ನಡೆಯುತ್ತಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದೀಗ ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ದೂರು ಕೂಡ ನೀಡಲಾಗಿದೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Nov 29, 2025 09:46 AM

