ಹುಬ್ಬಳ್ಳಿ: ಮಹಬೂಬ್ ಶಾಹ ಖಾದ್ರಿ ದರ್ಗಾ ತೆರವು ಕಾರ್ಯಾಚರಣೆ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿದೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 22, 2022 | 11:48 AM

ದರ್ಗಾ ತೆರವುಗೊಳಿಸಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮುಸಲ್ಮಾನರಲ್ಲದೆ ಬೇರೆ ಧರ್ಮದ ಜನ ಕೂಡ ದರ್ಗಾಗೆ ಭೇಟಿ ನೀಡುತ್ತಿದ್ದರೆಂದು ಒಬ್ಬ ನಿವಾಸಿ ಹೇಳಿದ್ದಾರೆ.

ಹುಬ್ಬಳ್ಳಿ-ಧಾರವಾಡ ಬಸ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ (ಹೆಚ್ ಡಿ ಬಿಆರ್ ಟಿಎಸ್) ಕಾರಿಡಾರ್ ಯೋಜನೆಗಾಗಿ ಹುಬ್ಬಳ್ಳಿಯ ಬೈರಿದೇವರಕೊಪ್ಪದಲ್ಲಿದ್ದ ಹಜರತ್ ಮಹಮೂದ್ ಶಾಹ ಖಾದ್ರಿ ದರ್ಗಾ (Hazarath Mehboob Shah Quadri Dargah,) ತೆರವು ಅಥವಾ ಸ್ಥಳಾಂತರ ಮತ್ತು ಭೂಸ್ವಾಧೀನ (land acquisition) ಕಾರ್ಯಾಚರಣೆ ಯಾವುದೇ ಅಹಿತಕರ ಘಟನೆಗೆ ಆಸ್ಪದವಿರದಂತೆ ಸುಸೂತ್ರವಾಗಿ ಪೂರ್ಣಗೊಂಡಿದೆ. ಟಿವಿ9 ಹುಬ್ಬಳ್ಳಿ ವರದಿಗಾರ ರಹಮತ್ ಕಂಚುಗಾರ ಒಂದು ಸಮಗ್ರ ವರದಿಯನ್ನು ನಮ್ಮ ವೀಕ್ಷಕರಿಗೆ ನೀಡಿದ್ದಾರೆ. ಈ ಯೋಜನೆಗಾಗಿ ಒಟ್ಟು 14 ಪೂಜಾ ಸ್ಥಳಗಳನ್ನು ಸ್ಥಳಾಂತರಿಸಲಾಗಿದ್ದು ಅದರಲ್ಲಿ ಮಂದಿರ, ಚರ್ಚ್ ಮತ್ತು ಮಸೀದಿ ಕೂಡಾ ಸೇರಿವೆ. ದರ್ಗಾ ತೆರವುಗೊಳಿಸಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಮುಸಲ್ಮಾನರಲ್ಲದೆ ಬೇರೆ ಧರ್ಮದ ಜನ ಕೂಡ ದರ್ಗಾಗೆ ಭೇಟಿ ನೀಡುತ್ತಿದ್ದರೆಂದು ಒಬ್ಬ ನಿವಾಸಿ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ