HD Devegowda Press Meet: ಬೆಂಗಳೂರಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ದೇವೇಗೌಡರು ಪತ್ರಕರ್ತರ ಮೇಲೆ ರೇಗಿದ್ದು ಯಾಕೆ ಗೊತ್ತಾ?
ದೇವೇಗೌಡರಿಗೆ ವಯೋಸಹಜ ಶ್ರವಣದೋಷ ಉಂಟಾಗಿರುವ ಕಾರಣ ಪತ್ರಕರ್ತರು ತಮ್ಮ ಪ್ರಶ್ನೆಯನ್ನು ಪದೇಪದೆ ಪುನಾರಾವರ್ತಿಸಬೇಕಿತ್ತು.
ಬೆಂಗಳೂರು: ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ (HD Devegowda) ಇಂದು ಬೆಂಗಳೂರಲ್ಲಿ ಸುದ್ದಿಗೋಷ್ಟಿಯೊಂದನ್ನು (press meet) ನಡೆಸಿ ಮಾಧ್ಯಮದವರ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದರು. ಗೋಷ್ಟಿ ನಡೆಯುತ್ತಿದ್ದಾಗ ಒಂದು ಸಂದರ್ಭದಲ್ಲಿ ಅವರು ಪತ್ರಕರ್ತರ ಮೇಲೆ ರೇಗಿದ ಪ್ರಸಂಗ ಕೂಡ ನಡೆಯಿತು. ಇತ್ತೀಚಿಗೆ ಬೆಂಗಳೂರಲ್ಲಿ ನಡೆದ ವಿರೋಧ ಪಕ್ಷಗಳ ಸಭೆಗೆ (opposition parties meet) ಕಾಂಗ್ರೆಸ್ ಪಕ್ಷದ ಒಂದು ಬಣ ದೇವೇಗೌಡರನ್ನು ಆಹ್ವಾನಿಸಿತ್ತು ಆದರೆ, ಗೌಡರು ಬರೋದಿಲ್ಲ ಅಂತ ಹೇಳಿದ್ದರು ಅಂತ ಪ್ರಸ್ತಾಪಿಸಿದ ಕೆಲ ಪತ್ರಕರ್ತರು ಕಾಂಗ್ರೆಸ್ ಯಾವ ಬಣ ಅವರನ್ನು ಅಹ್ವಾನಿಸಿತ್ತು ಅಂತ ಕೇಳಿದರು. ಪ್ರಶ್ನೆಗ ಉತ್ತರಿಸಲು ಇಚ್ಛಿಸದ ದೇವೇಗೌಡರು ಇಲ್ಲವೆನ್ನುವಂತೆ ಗೋಣು ಆಡಿಸಿದರು. ಪತ್ರಕರ್ತರು ಪ್ರಶ್ನೆಯನ್ನು ಪುನರಾವರ್ತಿಸಿದಾಗ ದೇವೇಗೌಡರು ತಾಳ್ಮೆ ಕಳೆದುಕೊಡು, ‘ಏಯ್ ಅತಿಯಾಯ್ತು ನಿಮ್ದು!’ ಅಂತ ಗದರಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ