Solar Power irregularity: ಧಮ್ಮಿದ್ರೆ ಸಿದ್ದರಾಮಯ್ಯ ತನಿಖೆ ಮಾಡಿಸಲಿ ಎನ್ನುವ ಹೆಚ್ ಡಿ ಕುಮಾರಸ್ವಾಮಿ ತಾವು ಸಿಎಂ ಆಗಿದ್ದಾಗ ಗೌಣವಾಗಿದ್ದು ಯಾಕೆ?

|

Updated on: Jun 08, 2023 | 5:39 PM

ಸಿದ್ದರಾಮಯ್ಯ ನಂತರ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕುಮಾರಸ್ವಾಮಿಯವರೇ! ಆಗ ಯಾಕೆ ಅವರು ತನಿಖೆ ಮಾಡಿಸಲಿಲ್ಲ?

ಬೆಂಗಳೂರು: ಜೆಡಿಎಸ್ ಶಾಸಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹಿಟ್ ಅಂಡ್ ರನ್ ಸ್ವಭಾವದವರು ಅಂತ ಹಿಂದೆಯೂ ಸಾಬೀತಾಗಿದೆ. ತಮ್ಮ ಎದುರಾಳಿಗಳ ಮೇಲೆ ಅವರು ಆರೋಪಗಳನ್ನು ಮಾಡುತ್ತಾರೆಯೇ ಹೊರತು ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಪುಷ್ಠೀಕರಿಸುವುದಿಲ್ಲ. ಅವರಿಲ್ಲಿ ಮಾತಾಡುತ್ತಿರುವುದನ್ನೇ ಕೇಳಿಸಿಕೊಳ್ಳಿ. ಸಿದ್ದರಾಮಯ್ಯನವರ ಹಿಂದಿನ ಸರ್ಕಾರದಲ್ಲಿ ಇಂಧನ ಸಚಿವರಾಗಿದ್ದ ಡಿಕೆ ಶಿವಕುಮಾರ್ (DK Shivakumar) ಸೋಲಾರ್ ಪವರ್ ಗಾಗಿ ಪ್ರತಿ ಯುನಿಟ್ ಗೆ ರೂ. 9.65 ರಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ, ಆದರೆ ಬೇರೆ ರಾಜ್ಯಗಳಲ್ಲಿ ಅದರ ದರ ಪ್ರತಿ ಯುನಿಟ್ ಗೆ ರೂ. 2-3 ಮಾತ್ರ ಇತ್ತು ಅಂತ ಆರೋಪಿಸುವ ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ (Siddaramaiah) ತಾಕತ್ತಿದ್ದರೆ ತನಿಖೆ ಮಾಡಿಸಲಿ ಎಂದು ಹೇಳುತ್ತಾರೆ. ಆದರೆ ಒಂದು ಸಂಗತಿಯನ್ನು ಮರೆಮಾಚುತ್ತಾರೆ. ಸಿದ್ದರಾಮಯ್ಯ ನಂತರ ರಾಜ್ಯದ ಮುಖ್ಯಮಂತ್ರಿಯಾಗಿದ್ದು ಕುಮಾರಸ್ವಾಮಿಯವರೇ! ಆಗ ಯಾಕೆ ಅವರು ತನಿಖೆ ಮಾಡಿಸಲಿಲ್ಲ? ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕಿದ್ದು ಕಾಂಗ್ರೆಸ್ ಪಕ್ಷದ ಕೃಪಕಟಾಕ್ಷದಿಂದ ಅಂತಲೇ?

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ