ಸಿಎಮ್ ಸಿದ್ದರಾಮಯ್ಯ ವೈಯಕ್ತಿಕ ಅಭಿರುಚಿ ತೋರುತ್ತಿರುವುದರಿಂದ ಈ ವರ್ಷವೇ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಯಲಿದೆ: ಮಧು ಬಂಗಾರಪ್ಪ, ಸಚಿವ
ತಜ್ಞರ ತಂಡವೊಂದು ಪರಿಷ್ಕರಣೆಯಲ್ಲಿ ಈಗಾಗಲೇ ಕಾರ್ಯನಿರತವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಬೆಂಗಳೂರು: ಇಂದು ಸುದ್ದಿಗೋಷ್ಠಿಯೊಂದನ್ನು ನಡೆಸಿ ಮಾತಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಪಠ್ಯಪುಸ್ತಕಗಳ ಪರಿಷ್ಕರಣೆ ಇದೇ ವರ್ಷ ನಡೆಯಲಿದೆ ಎದು ಹೇಳಿದರು. ಪರಿಷ್ಕರಣೆ (revision) ಈ ವರ್ಷ ನಡೆಯಲಾರದು ಎಂಬ ವದಂತಿಗಳು ಹರಡುತ್ತಿವೆ, ಆದರೆ ಅದು ಸುಳ್ಳು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಮಕ್ಕಳಿಗೆ ಅವಶ್ಯವಿಲ್ಲದ ವಿಷಯಗಳನ್ನು ತೆಗೆದುಹಾಕಿ, ಅವರ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯವಿರುವ ವಿಷಯಗಳನ್ನು ಸೇರಿಸಲಾಗುವುದು ಎಂದು ಸಚಿವ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪಠ್ಯಪುಸ್ತಕಗಳ ಪರಿಷ್ಕರಣೆಗಾಗಿ ವೈಯಕ್ತಿಕ ಅಭಿರುಚಿ ತೋರಿರುವುದರಿಂದ ಆ ಕೆಲಸವನ್ನು ಆದ್ಯತೆಯ ಮೇಲೆ ಮಾಡಲಾಗುತ್ತಿದೆ ಮತ್ತು ತಜ್ಞರ ತಂಡವೊಂದು ಈ ದಿಶೆಯಲ್ಲಿ ಈಗಾಗಲೇ ಕಾರ್ಯನಿರತವಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos