ಜಿ.ಟಿ ದೇವೇಗೌಡ ಹೇಳಿಕೆಗೆ ಖಡಕ್ ರಿಯಾಕ್ಷನ್​ ಕೊಟ್ಟ ಹೆಚ್​ಡಿಕೆ

ಕಿರಣ್ ಹನುಮಂತ್​ ಮಾದಾರ್

Updated on: Oct 03, 2024 | 4:10 PM

ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್​ಡಿ ಕುಮಾರಸ್ವಾಮಿ, ‘ಮೈಸೂರಿನವ್ರು ತೊಂದರೆಯಲ್ಲಿ ಸಿಲುಕಬಾರದೆಂದು ಹೇಳಿರಬಹುದು. ಸಿಎಂ ಪರ ಮಾತಾಡಲಿ ಬಿಡಿ, ಏಕೆ ಅವರ ಪರ ಮಾತಾಡಬಾರದು. FIR ದಾಖಲಾಗಿದ್ದಕ್ಕೆ ನಾನು ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕೆ ರಾಜೀನಾಮೆ ಕೇಳಿದ್ದೆ ಎಂದರು.

ಬೆಂಗಳೂರು, ಅ.03: ಮುಡಾ ಹಗರಣದಲ್ಲಿ ಸಿಎಂ ರಾಜೀನಾಮೆ ಕೊಡುವ ಅಗತ್ಯವಿಲ್ಲ ಎಂಬ ಜಿಟಿಡಿ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್​ಡಿ ಕುಮಾರಸ್ವಾಮಿ, ‘ಮೈಸೂರಿನವ್ರು ತೊಂದರೆಯಲ್ಲಿ ಸಿಲುಕಬಾರದೆಂದು ಹೇಳಿರಬಹುದು. ಸಿಎಂ ಪರ ಮಾತಾಡಲಿ ಬಿಡಿ, ಏಕೆ ಅವರ ಪರ ಮಾತಾಡಬಾರದು. FIR ದಾಖಲಾಗಿದ್ದಕ್ಕೆ ನಾನು ಸಿದ್ದರಾಮಯ್ಯ ರಾಜೀನಾಮೆ ಕೇಳಿಲ್ಲ. ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಕ್ಕೆ ರಾಜೀನಾಮೆ ಕೇಳಿದ್ದೆ. ನನ್ನ ಮೇಲೆ ಏನೋ‌ ಮಾಡುವುದಕ್ಕೆ ಹೊರಟಿದ್ದಾರೆ.  ನಿನ್ನೆ ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿರುವುದು ಏನು?, ಸುಳ್ಳು ವರದಿ ಬರ್ತಿದೆ, ಸೀರಿಯಸ್ ಆಗಿ ತೆಗೆದುಕೊಳ್ಳಬೇಡಿ ಎಂದಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us