ಕುಮಾರಸ್ವಾಮಿ ಕಾವೇರಿ ನೀರು ವಿವಾದದ ಬಗ್ಗೆ ಯಾವತ್ತೂ ಸೀರಿಯಸ್ಸಾಗಿಲ್ಲ: ಡಿಕೆ ಶಿವಕುಮಾರ್

|

Updated on: Jul 16, 2024 | 12:31 PM

ಶಿವಕುಮಾರ್ ಹೇಳಿರುವುದರಲ್ಲಿ ಸತ್ಯಾಂಶ ಇಲ್ಲದಿಲ್ಲ. ಕನ್ನಡಿಗರಿಗೆ ಚೆನ್ನಾಗಿ ನೆನಪಿದೆ, ಕಳೆದ ವರ್ಷ ರಾಜ್ಯದಲ್ಲಿ ಕಾವೇರಿ ನೀರಿನ ತಗಾದೆಗೆ ಸಂಬಂಧಿಸಿದಂತೆ, ಸರ್ಕಾರ, ಬಿಜೆಪಿ ನಾಯಕರು ಮತ್ತು ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿ ಹೋರಾಟ ನಡೆಸಿದ್ದರೆ, ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚಿಸಲು ಗೋವಾದ ಮುಖ್ಯಮಂತ್ರಿಯನ್ನು ಕರೆದುಕೊಂಡು ದೆಹಲಿಗೆ ಹೋಗಿದ್ದರು.

ಬೆಂಗಳೂರು: ವಿಧಾನಸಭಾ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಪಾಲ್ಗೊಳ್ಳಲು ಸದನದೊಳಗೆ ತೆರಳುವ ಮೊದಲು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕರ್ನಾಟಕ ಸರ್ಕಾರದ ಹಾಗೆಯೇ ತಮಿಳುನಾಡು ಸರ್ಕಾರ ಸಹ ಕಾವೇರಿ ನೀರಿಗೆ ಸಂಬಂಧಿಸಿದತೆ ಸರ್ವಪಕ್ಷ ಸಭೆ ಕರೆದಿದೆ, ಅದರಿಂದ ತಮಗೇನೂ ಅಭ್ಯಂತರವಿಲ್ಲ, ಕಾವೇರಿ ಜಲ ನಿರ್ವಹಣಾ ಸಮಿತಿಯ ಸೂಚನೆ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲಿದೆ ಎಂದು ಹೇಳಿ ಕಾವೇರಿ ನದಿಗೆ ಒಳಹರಿವು ಹೆಚ್ಚಾಗಿದೆ, ಹೆಚ್ಚುವರಿ ನೀರನ್ನ ಬಿಳಿಗುಂಡ್ಲುಗೆ ಹರಿಬಿಡುವ ಏರ್ಪಾಟು ಮಾಡಲಾಗಿದೆ ಅಂತ ಹೇಳಿದರು. ನಿನ್ನೆ ದೆಹಲಿಯಲ್ಲಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಸಿದ್ದರಾಮಯ್ಯ ಕರೆದ ಸರ್ವಪಕ್ಷ ಸಭೆಗೆ ಬಾದಾಮಿ ಗೋಡಂಬಿ ತಿನ್ನೋದಿಕ್ಕೆ ಹೋಗಬೇಕಿತ್ತಾ ಅಂತ ಹೇಳಿರುವುದಕ್ಕೆ ತೀಕ್ಷ್ನವಾಗಿ ಪ್ರತಿಕ್ರಿಯಿಸಿದ ಶಿವಕುಮಾರ್, ಅವರು ಸಿನಿಮಾ ಶೈಲಿಯಲ್ಲಿ ಮಾತಾಡುತ್ತಾರೆ, ಅವರ ಪಕ್ಷದವರು ಗೋಡಂಬಿ ತಿನ್ನಲು ಹಾಜರಾಗಿದ್ರಾ? ಅಸಲು ವಿಷಯವೇನೆಂದರೆ ಕಾವೇರಿ ಜಲವಿವಾದದ ಬಗ್ಗೆ ಕುಮಾರಸ್ವಾಮಿ ಯಾವತ್ತೂ ಗಂಭೀರವಾಗಿಲ್ಲ ಎಂದು ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:    ಕುಮಾರಸ್ವಾಮಿ ಕೆಲಸ ಮಾಡಿಲ್ಲವೆನ್ನುವುದಕ್ಕೆ ಆ 10 ಸಾವಿರ ಅರ್ಜಿಗಳೇ ಸಾಕ್ಷಿ: ಡಿಕೆ ಶಿವಕುಮಾರ್ ತಿರುಗೇಟು

Published on: Jul 16, 2024 12:30 PM