ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆಯಲ್ಲಿ ಸಫಲರಾಗಿ ಗೆಲುವಿನ ನಗೆಯೊಂದಿಗೆ ಹಿಂತಿರುಗಿದ ಕುಮಾರಸ್ವಾಮಿ

|

Updated on: Sep 23, 2023 | 1:12 PM

ಮಾತುಕತೆ ಇನ್ನೂ ಆರಂಭಿಕ ಹಂತದಲಿದೆ. ರಾಜ್ಯದ 28 ವಿಧಾನ ಸಭಾ ಕ್ಷೇತ್ರಗಳ ಪೈಕಿ 6 ಸೀಟುಗಳನ್ನು ತಮಗೆ ನೀಡಬೇಕೆಂದು ಕುಮಾರಸ್ವಾಮಿ ಕೇಳಿರುವ ಸುಳಿವಿದೆ. ಕನ್ನಡಿಗರಲ್ಲಿ ಉದ್ಭವಿಸಿರುವ ದೊಡ್ಡ ಪ್ರಶ್ನೆಯೆಂದರೆ ಮಂಡ್ಯದ ಸೀಟು ಯಾರಿಗೆ ಅನ್ನೋದು. ಹಾಲಿ ಸದಸ್ಯೆ ಸುಮಲತಾ ಅಂಬರೀಶ್ ಮತ್ತು ಕುಮಾರಸ್ವಾಮಿ ನಡುವೆ ಹಾವು-ಮುಂಗುಸಿ ಜಗಳವಿದೆ.

ಬೆಂಗಳೂರು: ಲೋಕ ಸಭಾ ಚುನಾವಣೆಗಾಗಿ ಬಿಜೆಪಿ ವರಿಷ್ಠರೊಂದಿಗೆ ಮೈತ್ರಿಯ (alliance) ಮಾತುಕತೆ ನಡೆಸಲು ಗುರುವಾರ ದೆಹಲಿಗೆ ಹೋಗಿದ್ದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾದರು. ಬಿಜೆಪಿ ನಾಯಕರು ಮೈತ್ರಿ ಮತ್ತು ಸೀಟು ಹೊಂದಾಣಿಕೆಗೆ ಒಪ್ಪಿಕೊಂಡಿದ್ದಾರೆ ಅಂತ ಕುಮಾರಸ್ವಾಮಿ ನಿನ್ನೆ ಸಾಯಂಕಾಲ ದೆಹಲಿಯಲ್ಲಿ ಹೇಳಿದ್ದರು. ಮಾತುಕತೆ ಇನ್ನೂ ಆರಂಭಿಕ ಹಂತದಲಿದೆ. ರಾಜ್ಯದ 28 ವಿಧಾನ ಸಭಾ ಕ್ಷೇತ್ರಗಳ ಪೈಕಿ 6 ಸೀಟುಗಳನ್ನು ತಮಗೆ ನೀಡಬೇಕೆಂದು ಕುಮಾರಸ್ವಾಮಿ ಕೇಳಿರುವ ಸುಳಿವಿದೆ. ಕನ್ನಡಿಗರಲ್ಲಿ ಉದ್ಭವಿಸಿರುವ ದೊಡ್ಡ ಪ್ರಶ್ನೆಯೆಂದರೆ ಮಂಡ್ಯದ ಸೀಟು ಯಾರಿಗೆ ಅನ್ನೋದು. ಹಾಲಿ ಸದಸ್ಯೆ ಸುಮಲತಾ ಅಂಬರೀಶ್ (Sumalatha Ambareesh) ಮತ್ತು ಕುಮಾರಸ್ವಾಮಿ ನಡುವೆ ಹಾವು-ಮುಂಗುಸಿ ಜಗಳವಿದೆ. ಕಳೆದ ಬಾರಿಯ ಉಪ ಚುನಾವಣೆಯಲ್ಲಿ ಇಡೀ ರಾಜ್ಯ ಸರ್ಕಾರ ಸುಮಲತಾ ವಿರುದ್ಧ ಪ್ರಚಾರ ನಡೆಸಿದರೂ ಅವರು 60,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಸುಮಲತಾ ಬಿಜೆಪಿಗೆ ಬೆಂಬಲ ನೀಡಿದ್ದಾರೆಯೇ ಹೊರತು ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಚುನಾವಣೆಗೆ ಮೊದಲು ಅವರು ವಿದ್ಯುಕ್ತವಾಗಿ ಸೇರುವ ಸಾಧ್ಯತೆಯಂತೂ ಇದೆ. ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯ ಕುಮಾರಸ್ವಾಮಿಗೆ ಬೇಕು. ಹಾಗಾದರೆ, ಸುಮಲತಾ ಪಾಡೇನು? ಅದು ಬಿಡಿ ಮುಂದೆ ನೋಡೋಣ. ಕುಮಾರಸ್ವಾಮಿಯನ್ನು ಇಂದು ಬರಮಾಡಿಕೊಳ್ಳಲು ಹೋಗಿದ್ದು ಬಿಜೆಪಿ ಶಾಸಕ ಮುನಿರತ್ನ ನಾಯ್ಡು! ಮೈತ್ರಿ ಆಗಲೇ ಶುರುವಾಗಿಬಿಟ್ಟಿದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ