ಸಿದ್ದರಾಮಯ್ಯ ಸರ್ಕಾರ ಡಿಸೆಂಬರ್​ನಲ್ಲಿ ಪತನವಾಗುತ್ತೆ ಎಂದಿದ್ದ ಕುಮಾರಸ್ವಾಮಿ ಈಗ ಮೇನಲ್ಲಿ ಅಂತಿದ್ದಾರೆ!

|

Updated on: Dec 11, 2023 | 10:58 AM

ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ಕುಮಾರಸ್ವಾಮಿ ಸಿಂಗಾಪುರ್ ನಲ್ಲಿದ್ದರು, ಯಾಕೆ ಏನು ಅಂತ ಯಾರಿಗೂ ಗೊತ್ತಿಲ್ಲ. ಅವರ ಪಕ್ಷಕ್ಕೆ ಕೇವಲ 19 ಸ್ಥಾನಗಳು ಮಾತ್ರ ದಕ್ಕಿದಾಗ ತೀವ್ರ ಹತಾಶರಾಗಿದ್ದ ಅವರು ಮೂರು ತಿಂಗಳಲ್ಲಿ ಕಾಂಗ್ರೆಸ್ ಉರುಳುತ್ತೆ ಅಂತ ಹೇಳಿದ್ದರು. ಅಮೇಲೆ ಅದನ್ನು ಡಿಸೆಂಬರ್ ವರೆಗೆ ವಿಸ್ತರಿಸಿದರು. ಡಿಸೆಂಬರ್ ನಲ್ಲಿ ಅಂಥ ಲಕ್ಷಣ ಕಾಣದಿರುವ ಹಿನ್ನೆಲೆಯಲ್ಲಿ ಮೇನಲ್ಲಿ ಸರ್ಕಾರ ಉರುಳುತ್ತೆ ಅಂತಿದ್ದಾರೆ.

ಮಂಡ್ಯ: ಸಿದ್ದರಾಮಯ್ಯ ಸರ್ಕಾರ (Siddaramaiah government) ಉರುಳಲಿದೆ ಅಂತ ಹೇಳೋದನ್ನು ಜೆಡಿಎಸ್ ಪಕ್ಷದ ರಾಜ್ಯಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮುಂದುವರಿಸಿದ್ದಾರೆ. ಜಿಲ್ಲೆಯ ಕೆಆರ್ ಪೇಟೆ ಕ್ಷೇತ್ರದ ಬೆಳತೂರು ಗ್ರಾಮದಲ್ಲಿ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಮಾತಾಡಿದ ಅವರು, ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಮೇ ತಿಂಗಳಲ್ಲಿ ಉರುಳಲಿದೆ ಎಂದು ಹೇಳಿದರು. ಜಿಲ್ಲೆಯಿಂದ ಜೆಡಿಎಸ್ ಪಕ್ಷದ ಏಕೈಕ ಶಾಸಕರಾಗಿರುವ ಹೆಚ್ ಟಿ ಮಂಜು (HT Manju) ಮೇಲೆ ಪ್ರೀತಿ ವಿಶ್ವಾಸವಿಟ್ಟು ಗೆಲ್ಲಿಸಿರುವುದಕ್ಕೆ ಜನರಿಗೆ ಧನ್ಯವಾದ ಹೇಳಿದ ಕುಮಾರಸ್ವಾಮಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದ್ದರೆ ಅದಕ್ಕೆ ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮಗಳು ಎಂದು ಹೇಳಿದರು. ನಂತರ ಅವರು ತಾವು ಮಂಗಳೂರುನಿಂದ ಬೆಳ್ತಂಗಡಿ ಮತ್ತು ಅಲ್ಲಿಂದ ಬೆಳತೂರು ಬರಲು ಏನೆಲ್ಲ ಕಷ್ಟಪಡಬೇಕಾಯಿತು ಅಂತ ಹೇಳುತ್ತಾರೆ. ಕುಮಾರಸ್ವಾಮಿಯವ ಮಾತಿನ ವರಸೆ ನೋಡಿದರೆ, ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಉರುಳುತ್ತೆ ಮತ್ತು ಅದಾದ ಬಳಿಕವೇ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಶುರುವಾಗುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ