Unsafe Pitch: ಇದು ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ ಲೀಗ್ 2023ರ ಹೈವೋಲ್ಟೇಜ್ ಪಂದ್ಯ
MLR vs PRS Match called off: ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಆಯೋಜನೆ ಮಾಡಲಾಗಿದ್ದ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ನಡುವಿನ ಬಿಗ್ ಬ್ಯಾಷ್ ಲೀಗ್ 2023ರ ಪಂದ್ಯವನ್ನು ಅಸುರಕ್ಷಿತ ಪಿಚ್ ಎಂದು ಪರಿಗಣಿಸಿ ಅರ್ಧಕ್ಕೆ ರದ್ದುಗೊಳಿಸಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಬಿಗ್ ಬ್ಯಾಷ್ ಲೀಗ್ 2023ಕ್ಕೆ (Big Bash League 2023) ಚಾಲನೆ ಸಿಕ್ಕಿ ಐದು ದಿನಗಳಾಗಿವೆ. ಟೂರ್ನಿ ರೋಚಕತೆ ಸೃಷ್ಟಿಸುತ್ತಿದೆ ಎಂಬೊತ್ತಿಗೆ ವಿವಾದಗಳು ಕೂಡ ಸದ್ದು ಮಾಡುತ್ತಿದೆ. ಇದೀಗ ಡಿಸೆಂಬರ್ 10, 2023 ರಂದು ನಡೆದ ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಪರ್ತ್ ಸ್ಕಾರ್ಚರ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ಈ ಪಂದ್ಯವನ್ನು ಆಯೋಜನೆ ಮಾಡಲಾಗಿತ್ತು. ಆದರೆ, ಇದು ಅಸುರಕ್ಷಿತ ಪಿಚ್ ಎಂದು ಸಂಪೂರ್ಣ ಪಂದ್ಯವನ್ನು ರದ್ದುಗೊಳಿಸಲಾಗಿದೆ. ಪಿಚ್ ಸಂಪೂರ್ಣ ತೇವವಾಗಿದ್ದು ಬ್ಯಾಟರ್‌ಗಳಿಗೆ ಕಂಟಕವಾಗಿ ಪರಿಣಮಿಸಿತ್ತು. ಚೆಂಡು ಪಿಚ್ ಮೇಲೆ ಬಿದ್ದಾಗಲೆಲ್ಲ ವಿಚಿತ್ರವಾಗಿ ಪುಟಿದೇಳುತ್ತಿತ್ತು. ಇದರ ವೀಡಿಯೋ ಕೂಡ ಸಾಮಾಜಿಕ ವಲಯದಲ್ಲಿ ವೈರಲ್ ಆಗುತ್ತಿದೆ. ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ, 6.5 ಓವರ್‌ಗಳನ್ನು ಬೌಲ್ ಮಾಡಿದಾಗ ಪಂದ್ಯವನ್ನು ರದ್ದು ಮಾಡಲಾಗಿದೆ. ರಾತ್ರಿಯ ವೇಳೆ ಮಳೆ ಸುರಿದಿತ್ತು. ಆದರೆ, ಪಿಚ್ ಮೇಲೆ ಹೊದಿಸಿದ ಹೊದಿಕೆಯಡಿಯಲ್ಲಿ ನೀರು ನುಗ್ಗಿದೆ. ಇದರಿಂದ ಪಿಚ್ ವಿಚಿತ್ರವಾಗಿ ಕಾಣಿಸಿಕೊಂಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ