ಏಯ್​! ಸುಮ್ಮನೆ ಕೂತ್ಕೋಳಿ: ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದ್ದ ಹೆಚ್​ಡಿ ಕುಮಾರಸ್ವಾಮಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 17, 2024 | 10:14 PM

ತುಮಕೂರಿನಲ್ಲಿ ಇಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಭಾಷಣ ಮಾಡಬೇಕಾದರೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಕುಮಾರಸ್ವಾಮಿ ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದಿದ್ದಾರೆ. ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ ಎಂದು ಕಾರ್ಯಕರ್ತರ ಮೇಲೆ ಸಿಟ್ಟಾಗಿದ್ದಾರೆ. ವಿಡಿಯೋ ನೋಡಿ.

ತುಮಕೂರು, ಜೂನ್​ 17: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಅವರು ಇಂದು ನಗರಕ್ಕೆ ಆಗಮಿಸಿದ್ದರು. ಜೆಡಿಎಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಲಾಗಿದೆ. ಕೇಂದ್ರ ಸಚಿವ ಹೆಚ್​.ಡಿ.ಕುಮಾರಸ್ವಾಮಿಗೆ ಪುತ್ರ ನಿಖಿಲ್​ ಸಾಥ್​ ನೀಡಿದ್ದಾರೆ. ಕೇಂದ್ರ ಸಚಿವರಾದ ಹಿನ್ನಲೆ ಇಂದು ನಗರದಲ್ಲಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿತ್ತು. ಈ ವೇಳೆ ಹೆಚ್.ಡಿ.ಕುಮಾರಸ್ವಾಮಿ ಭಾಷಣ ಮಾಡಬೇಕಾದರೆ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದ್ದಾರೆ. ಇದಕ್ಕೆ ಕುಮಾರಸ್ವಾಮಿ ವೇದಿಕೆಯಲ್ಲೇ ಕಾರ್ಯಕರ್ತರ ಮೇಲೆ ಸಿಟ್ಟಿಗೆದಿದ್ದಾರೆ. ಸಭೆ ಮಾಡುವುದಕ್ಕೆ ಬಂದಿದ್ದೀರಾ ಇಲ್ಲಾ ಸಂತೆ ಮಾಡುವುದಕ್ಕಾ? ನೀವು ಸುಮ್ಮನಿದ್ದರೆ ಕಾರ್ಯಕ್ರಮ ನಡೆಯುತ್ತದೆ. ಸುಮ್ಮನೆ ಕುಳಿತುಕೊಳ್ಳಿ. ನಿಮ್ಮ ಉತ್ಸಾಹ ನನಗೆ ಅರ್ಥವಾಗುತ್ತದೆ ಎಂದು ಕಾರ್ಯಕರ್ತರ ಮೇಲೆ ಸಿಟ್ಟಾಗಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.