ಕನ್ನಡ ರಾಜ್ಯೋತ್ಸವ ದಿನವೇ ಮುಳುಬಾಗಿಲುನಲ್ಲಿ ಹೆಚ್ ಡಿ ಕುಮಾರಸ್ವಾಮಿ ತಮ್ಮ ಪಂಚರತ್ನ ಯೋಜನೆಗೆ ಚಾಲನೆ ನೀಡುತ್ತಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 01, 2022 | 11:35 AM

ತಮ್ಮ ಪಂಚರತ್ನ ಕಾರ್ಯಕ್ರಮ ನಾಡಿನ ಸಮಸ್ತ ಜನತೆಗೆ ಇಷ್ಟವಾಗಿ ಜೆಡಿ(ಎಸ್) ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

ಬೆಂಗಳೂರು: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳ ಅಬ್ಬರದ ಭಾರತ ಜೋಡೊ ಮತ್ತು ಜನಸಂಕಲ್ಪ ಯಾತ್ರೆಗಳ ನಡುವೆ ಜೆಡಿ(ಎಸ್) ಪಕ್ಷದ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಕನ್ನಡ ರಾಜ್ಯೋತ್ಸವ ದಿನವಾಗಿರುವ ಇಂದು ತಮ್ಮ ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಯನ್ನು (Pancharatna Program) ಕೋಲಾರ ಜಿಲ್ಲೆಯ ಮುಳುಬಾಗಿಲಿನಿಂದ (Mulbagal) ಆರಂಭಿಸಲಿದ್ದಾರೆ. ಮುಳಬಾಗಿಲು ತೆರಳುವ ಮುನ್ನ ಬೆಂಗಳೂರಲ್ಲಿ ಟಿವಿ9 ಕನ್ನಡ ವಾಹಿನಿಯ ಜೊತೆ ಮಾತಾಡಿದ ಅವರು ತಮ್ಮ ಗ್ರಾಮವಾಸ್ತವ್ಯದ ಉದ್ದೇಶನ್ನು ಸಹ ಹೇಳಿದರು. ತಮ್ಮ ಪಂಚರತ್ನ ಕಾರ್ಯಕ್ರಮ ನಾಡಿನ ಸಮಸ್ತ ಜನತೆಗೆ ಇಷ್ಟವಾಗಿ ಜೆಡಿ(ಎಸ್) ಪಕ್ಷ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಕುಮಾರಸ್ವಾಮಿ ವ್ಯಕ್ತಪಡಿಸಿದರು.

Published on: Nov 01, 2022 11:35 AM