Kannada Rajyotsava: ಬೆಳಗಾವಿಯಲ್ಲಿ ಕನ್ನಡ ಬಾವುಟ ಹಾರಿಸೋಕೆ ನಿಂತ ಪುಟ್ಟ ಪೋರ
ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಭರ್ಜರಿ ತಯಾರಿ ನಡೆಯುತ್ತಿದೆ, ಅದರಂತೆ ಕನ್ನಡಾಂಬೆಯ ಮಕ್ಕಳೆಲ್ಲರು ಕನ್ನಡ ಧ್ವಜವನ್ನು ಖರೀಸಿ ಹಾರಾಟ ನಡೆಸುತ್ತಿದ್ದಾರೆ.
ಬೆಳಗಾವಿ: ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಭರ್ಜರಿ ತಯಾರಿ ನಡೆದಿದೆ. ಕನ್ನಡ ಪರ ಸಂಘಟನೆಗಳು ಕನ್ನಡ ಹಬ್ಬವನ್ನ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದಾರೆ. ಇದಕ್ಕಾಗಿಯೇ ಹಬ್ಬದ ಊಟದ ತಯಾರಿಯೂ ಜೋರಾಗಿ ನಡೀತಿದೆ. ಇನ್ನೊಂದೆಡೆ ಕನ್ನಡ ಧ್ವಜಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಅಂಗಡಿಗಳಿಗೆ ಬಂದು ಕನ್ನಡ ಧ್ವಜಗಳನ್ನು ಖರೀದಿಸುತ್ತಿದ್ದಾರೆ. ಹೀಗೆ ತಂದೆಯೊಂದಿಗೆ ಬಂದ ಸಣ್ಣ ಬಾಲಕನೊಬ್ಬ ಕನ್ನಡ ಧ್ವಜವನ್ನು ಖರೀದಿಸಿ ಹಾರಿಸಿದ್ದಾನೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published on: Nov 01, 2022 10:04 AM
Latest Videos