Video: ಓದಿನಲ್ಲಿ ವಿದ್ಯಾರ್ಥಿಗಳ ಕಳಪೆ ಪ್ರದರ್ಶನ, ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡ ಮುಖ್ಯೋಪಾಧ್ಯಾಯರು

Updated on: Mar 14, 2025 | 2:34 PM

ಈ ಮೊದಲೆಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅಥವಾ ಕಡಿಮೆ ಅಂಕ ಪಡೆದರೆ ಶಿಕ್ಷಕರು ಮಕ್ಕಳಿಗೆ ಪೆಟ್ಟುಕೊಟ್ಟು ಬುದ್ಧಿ ಕಲಿಸುತ್ತಿದ್ದರು. ಆದರೆ ಕಾನೂನು ಕಠಿಣವಾಗಿದೆ. ಮಕ್ಕಳು ಒಂದೊಮ್ಮೆ ಶಿಕ್ಷಕರ ಮಾತು ಕೇಳಲಿಲ್ಲವೆಂದರೆ ಬೇರೆ ಆಯ್ಕೆಗಳೇ ಅವರ ಮುಂದಿರುವುದಿಲ್ಲ, ಅಸಹಾಯಕರಾಗುತ್ತಿದ್ದಾರೆ. ಹಾಗೆಯೇ ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳು ಓದಿನಲ್ಲಿ ಕಳಪೆ ಪ್ರದರ್ಶಿಸಿದ್ದರು. ಹೀಗಾಗಿ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಶಿಕ್ಷೆ ಕೊಡದೆ ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ.

ಆಂಧ್ರಪ್ರದೇಶ, ಮಾರ್ಚ್​ 14: ಈ ಮೊದಲೆಲ್ಲಾ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಅಥವಾ ಕಡಿಮೆ ಅಂಕ ಪಡೆದರೆ ಶಿಕ್ಷಕರು ಮಕ್ಕಳಿಗೆ ಪೆಟ್ಟುಕೊಟ್ಟು ಬುದ್ಧಿ ಕಲಿಸುತ್ತಿದ್ದರು. ಆದರೆ ಕಾನೂನು ಕಠಿಣವಾಗಿದೆ. ಮಕ್ಕಳು ಒಂದೊಮ್ಮೆ ಶಿಕ್ಷಕರ ಮಾತು ಕೇಳಲಿಲ್ಲವೆಂದರೆ ಬೇರೆ ಆಯ್ಕೆಗಳೇ ಅವರ ಮುಂದಿರುವುದಿಲ್ಲ, ಅಸಹಾಯಕರಾಗುತ್ತಿದ್ದಾರೆ.

ಹಾಗೆಯೇ ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳು ಓದಿನಲ್ಲಿ ಕಳಪೆ ಪ್ರದರ್ಶಿಸಿದ್ದರು. ಹೀಗಾಗಿ ಶಾಲಾ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಶಿಕ್ಷೆ ಕೊಡದೆ ತಮಗೆ ತಾವೇ ಶಿಕ್ಷೆ ಕೊಟ್ಟುಕೊಂಡಿದ್ದಾರೆ. 50 ಸಿಟ್​ಅಪ್ಸ್​ ಮಾಡಿದ್ದಾರೆ. ಈ ಘಟನೆಯ 2.3 ನಿಮಿಷಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

ನಾನು ನಿಮ್ಮನ್ನು ಬೈಯ್ಯುತ್ತಿಲ್ಲ, ನಮ್ಮ ಕೈಗಳನ್ನು ಕಟ್ಟಿಹಾಕಿಕೊಂಡಿದ್ದೇವೆ, ನಾವು ಎಷ್ಟೆಲ್ಲಾ ಪ್ರಯತ್ನ ಮಾಡಿದರೂ ನಡವಳಿಕೆ, ಶಿಕ್ಷಣಿಕ, ಬರವಣಿಗೆ ಅಥವಾ ಓದಿನಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಮುಖ್ಯೋಪಾಧ್ಯಾಯರಾದ ಚಿಂತಾರಮಣ ಹೇಳಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Mar 14, 2025 02:30 PM