H3N2 Influenza Wave; ಮಕ್ಕಳು, ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕು: ಡಾ ಕೆ ಸುಧಾಕರ್
ಸೋಂಕಿನ ಟೆಸ್ಟ್ ನಡೆಸಲು ಲ್ಯಾಬ್ ಗಳಲ್ಲಿ ಹೆಚ್ಚು ಹಣ ಪೀಕುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಇಷ್ಟರಲ್ಲೇ ತಜ್ಞರ ಸಮಿತಿಯೊಂದನ್ನು ರಚಿಸಿ ಆದಷ್ಟು ಬೇಗ ಒಂದು ದರ ನಿಗದಿ ಮಾಡಲಾಗುವುದು ಎಂದು ಡಾ ಸುಧಾಕರ್ ಹೇಳಿದರು.
ಬೆಂಗಳೂರು: ಕೋವಿಡ್-19 ಆತಂಕ ಕ್ರಮೇಣ ದೂರವಾಗುತ್ತಿದ್ದಂತೆಯೇ ಹೆಚ್3ಎನ್2 ಸೋಂಕಿನ (H3N2 Influenza) ಪ್ರಕರಣಗಳು ಹೆಚ್ಚುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ. ಸೋಂಕು ಕುರಿತು ನಗರದಲ್ಲಿಂದು ಸುದ್ದಿಗೋಷ್ಟಿಯೊಂದನ್ನು ನಡೆಸಿ ಮಾತಾಡಿದ ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಅವರು ಮಕ್ಕಳು, ಗರ್ಭಿಣಿಯರು ಹೆಚ್ಚು ಜಾಗರೂಕರಾಗಿರಬೇಕೆಂದು ಹೇಳಿದರು. ಶಾಲಾ ಕಾಲೇಜುಗಳಲ್ಲಿ ಮಕ್ಕಳು ಮಾಸ್ಕ್ ಧರಿಸಬೇಕು ಮತ್ತು ಎಲ್ಲ ಆರೋಗ್ಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ (Mask) ಧರಿಸಲೇಬೇಕು ಎಂದು ಸಚಿವರು ಹೇಳಿದರು. ಸೋಂಕಿನ ಟೆಸ್ಟ್ ನಡೆಸಲು ಲ್ಯಾಬ್ ಗಳಲ್ಲಿ ಹೆಚ್ಚು ಹಣ ಪೀಕಿತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ, ಇಷ್ಟರಲ್ಲೇ ತಜ್ಞರ ಸಮಿತಿಯೊಂದನ್ನು (expert committee) ರಚಿಸಿ ಆದಷ್ಟು ಬೇಗ ಒಂದು ದರ ನಿಗದಿ ಮಾಡಲಾಗುವುದು ಎಂದು ಡಾ ಸುಧಾಕರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 06, 2023 01:43 PM