ಮೈಸೂರು: ಸರ್ಕಾರದ ಪ್ರತಿನಿಧಿಗಳಾಗಲಿ ಆಥವಾ ವಿರೋಧಪಕ್ಷದ ನಾಯಕರಾಗಲಿ, ಅವರಿಗೆ ಪ್ರಶ್ನೆ ಕೇಳುವುದು ಪತ್ರಕರ್ತರ ಹಕ್ಕು. ಆದರೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಇದನ್ನು ಮರೆತಿರುವಂತಿದೆ. ಮೈಸೂರಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಸಿದ್ದರಾಮಯ್ಯನವರು, ತಮ್ಮ ಸರ್ಕಾರ ಲೋಕಾಯುಕ್ತ ರದ್ದುಮಾಡಿರಲಿಲ್ಲ, ನ್ಯಾಯಮೂರ್ತಿ ಪಿ ವಿಶ್ವನಾಥ ಶೆಟ್ಟಿ (Justice P Vishwanath Shetty) ಲೋಕಾಯುಕ್ತರಾಗಿದ್ದು ತಮ್ಮ ಆಧಿಕಾರಾವಧಿಯಲ್ಲಿ, ಎಸಿಬಿಯನ್ನು ರಚಿಸಿದ್ದು ತಮ್ಮ ಸರ್ಕಾರವಾದರೂ ಅದನ್ನು ಅಮಾನ್ಯಗೊಳಿಸಿದ್ದು ಬಸವರಾಜ ಎಸ್ ಬೊಮ್ಮಾಯಿ (Basavaraj S Bommai) ಸರ್ಕಾರವಲ್ಲ, ಬದಲಿಗೆ ರಾಜ್ಯದ ಹೈಕೋರ್ಟ್ ಎಂದು ಹೇಳಿದ ಸಿದ್ದರಾಮಯ್ಯನವರು, ಬೊಮ್ಮಾಯಿ ಸುಳ್ಳು ಹೇಳುತ್ತಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಸಿಡುಕಿದ ಸಿದ್ದರಾಮಯ್ಯ, ‘ಸುಮ್ನೆ ನಾನ್ ಹೇಳಿದ್ದು ಕೇಳ್ರೀ, ಇಲ್ಲಾಂದ್ರೆ ಎದ್ದ್ ಹೋಗ್ರೀ’ ಅಂತ ಗದರುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ