Siddaramaiah in Mysuru: ಟಿ ನರಸೀಪುರದಲ್ಲಿ 50ಕ್ಕೂ ಹೆಚ್ಚು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ

Arun Kumar Belly

|

Updated on:Mar 06, 2023 | 11:34 AM

ಲಭ್ಯ ಮಾಹಿತಿಯ ಪ್ರಕಾರ ಜೆಡಿಎಸ್ ಮತ್ತು ಬಿಜೆಪಿಯ ಸುಮಾರು 50 ಕಾರ್ಯಕರ್ತರು ಇಂದು ತಮ್ಮ ತಮ್ಮ ಪಕ್ಷಗಳನ್ನು ತೊರೆದು ಕಾಂಗ್ರೆಸ್ (Congress) ಸೇರಲಿದ್ದು ಸಿದ್ದರಾಮಯ್ಯನವರು ಅವರೆಲ್ಲರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.

ಮೈಸೂರು: ಕಾಂಗ್ರೆಸ್ ಧುರೀಣ ಸಿದ್ದರಾಮಯ್ಯನವರು (Siddaramaiah) ಇಂದ ತಮ್ಮ ತವರು ಜಿಲ್ಲೆ ಮೈಸೂರಲ್ಲಿ ಪ್ರವಾಸ ಮಾಡಲಿದ್ದಾರೆ. ಜಿಲ್ಲೆಯ ಟಿ ನರಸೀಪುರ (T Narasipura) ಕ್ಷೇತ್ರದಲ್ಲಿ ಕಾರ್ಯಕ್ರಮವೊಂದನ್ನು ಏರ್ಪಡಿಸಲಾಗಿದ್ದು ಸಿದ್ದಾರಾಮಯ್ಯ ಅದರಲ್ಲಿ ಭಾಗವಹಿಸಿಲಿದ್ದಾರೆ. ಲಭ್ಯ ಮಾಹಿತಿಯ ಪ್ರಕಾರ ಜೆಡಿಎಸ್ ಮತ್ತು ಬಿಜೆಪಿಯ ಸುಮಾರು 50 ಕಾರ್ಯಕರ್ತರು ಇಂದು ತಮ್ಮ ತಮ್ಮ ಪಕ್ಷಗಳನ್ನು ತೊರೆದು ಕಾಂಗ್ರೆಸ್ (Congress) ಸೇರಲಿದ್ದು ಸಿದ್ದರಾಮಯ್ಯನವರು ಅವರೆಲ್ಲರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ. ನೀವಿಲ್ಲಿ ನೋಡುತ್ತಿರುವ ದೃಶ್ಯ ಪ್ರಜಾಧ್ವನಿ ಯಾತ್ರೆ ಭಾಗವಾಗಿ ಸಿದ್ದರಾಮಯ್ಯನವರು ಇತ್ತೀಚಿಗೆ ಕಲಬುರಗಿ ಜಿಲ್ಲೆಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada