ಬೆಂಗಳೂರು: ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ವಸತಿ ಖಾತೆ ಸಚಿವರಾಗಿರುವ ವಿ ಸೋಮಣ್ಣ (V Somanna) ಅವರು ಬಿಜೆಪಿ ಸೇರುವ ಬಗ್ಗೆ ದಟ್ಟ ವದಂತಿಗಳು ಹಬ್ಬಿವೆ. ನಿಮಗೆ ಗೊತ್ತಿರಬಹುದು, ಸಂಪುಟದ ಎಲ್ಲ ಸಚಿವರು ಪಕ್ಷದ ವಿಜಯ ಸಂಕಲ್ಪ ಯಾತ್ರೆಯಲ್ಲಿ (Vijay Sankalp Yatre) ಪಾಲ್ಗೊಳ್ಳುತ್ತಿದ್ದರೆ ಸೋಮಣ್ಣ ಮಾತ್ರ ನಿನ್ನೆಯವರೆಗೆ ದೂರವೇ ಉಳಿದಿದ್ದರು. ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳ ಕೈಗೆ ಸಿಕ್ಕ ಸಚಿವರು ಕಾಂಗ್ರೆಸ್ ಸೇರುವ ಬಗ್ಗೆ ಕೇಳಿದ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡಲಿಲ್ಲ. ನೀವು ಹರಡುವ ವದಂತಿಗಳಿಗೆ (rumours) ಉತ್ತರ ಕೊಡಲಾಗುತ್ತಾ? ನಾನು ಯಾವತ್ತಾದರು ಕಾಂಗ್ರೆಸ್ ಸೇರುವ ಬಗ್ಗೆ ಮಾತಾಡಿದ್ದೀನಾ? ಅಂತ ಮರುಪ್ರಶ್ನೆ ಹಾಕಿ ಅಲ್ಲಿಂದ ಹೊರಟರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ