Shantha Clinic: ತಾಯಿ ಹೆಸರಿನಲ್ಲಿ ಮೊಬೈಲ್ ಕ್ಲಿನಿಕ್ ಆರಂಭಿಸಿದ ಡಾ.ಕೆ.ಸುಧಾಕರ್
ಚಿಕ್ಕಬಳ್ಳಾಪುರದ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಮ್ಮ ತಾಯಿ ಹೆಸರಲ್ಲಿ ಶಾಂತಾ ಮೊಬೈಲ್ ಕ್ಲಿನಿಕ್ ಎಂಬ ಪ್ರಾರಂಭಿಸಿದ್ದಾರೆ. ಇದು ಇಲ್ಲಿನ ಗ್ರಾಮಸ್ಥರಲ್ಲಿ ಖುಷಿ ತಂದುಕೊಟ್ಟಿದೆ.
ಚಿಕ್ಕಬಳ್ಳಾಪುರ: ಇನ್ಮುಂದೆ ಚಿಕ್ಕಬಳ್ಳಾಪುರ(Chikkaballapura)ದ ಜನರ ಮನೆ ಬಾಗಿಲ ಬಳಿಯೇ ಉಚಿತ ಆರೋಗ್ಯ ಸೇವೆ ಬರಲಿದೆ. ಹೌದು ಆರೋಗ್ಯ ಸಚಿವ ಡಾ. ಸುಧಾಕರ್( Dr. K. Sudhakar) ಒಂದು ಹೊಸ ಪ್ರಯತ್ನವನ್ನು ಶುರು ಮಾಡಿದ್ದಾರೆ, ಚಿಕ್ಕಬಳ್ಳಾಪುರದ ಜನರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ತಮ್ಮ ತಾಯಿ ಹೆಸರಲ್ಲಿ ಶಾಂತಾ ಮೊಬೈಲ್ ಕ್ಲಿನಿಕ್ ಆರಂಭಿಸಿದ್ದು, ಇದು ಈ ಗ್ರಾಮಸ್ಥರಲ್ಲಿ ಖುಷಿ ತಂದುಕೊಟ್ಟಿದೆ. ಮೊಬೈಲ್ ಕ್ಲಿನಿಕ್ನ್ನು ಸಚಿವರಾದ ಆರ್.ಅಶೋಕ್ ಹಾಗೂ ಎಂ.ಟಿ.ಬಿ.ನಾಗರಾಜು ಉದ್ಘಾಟಿಸಿದ್ದಾರೆ. ಐಷಾರಾಮಿ ಬಸ್ಸುಗಳಲ್ಲಿ ನಿರ್ಮಿಸಿರುವ ಶಾಂತಾ ಕ್ಲಿನಿಕ್ನಲ್ಲಿ ಉಚಿತ ತಪಾಸಣೆ, ಚಿಕಿತ್ಸೆ, ಔಷಧಿ ಸಿಗುತ್ತದೆ. ಪ್ರತಿ ಮೊಬೈಲ್ ಕ್ಲಿನಿಕ್ನಲ್ಲಿ ನುರಿತ MBBS ವೈದ್ಯರು, ನರ್ಸ್ ಹಾಗೂ ಲ್ಯಾಬ್ ಟೆಕ್ನಿಶಿಯನ್ ಇರಲಿದ್ದಾರೆ.
Published on: Nov 26, 2022 07:15 PM