ಚಾಮುಂಡಿ ಬೆಟ್ಟದಲ್ಲಿ ಸಚಿವ ಡಾ ಕೆ ಸುಧಾಕರ್ ಅವರು ಅಶ್ವಿನಿ ಪುನೀತ್ ರಾಜಕುಮಾರ ಆಗಮನಕ್ಕಾಗಿ ಕಾಯ್ದರು

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2022 | 11:58 AM

ಅವರು ಬರೋದು ಎಷ್ಟೊತ್ತಾಗುತ್ತದೆ ಅಂತ ಕೇಳಿ ತಿಳಿದುಕೊಳ್ಳುವ ಸಚಿವರು ಅಷ್ಟರೊಳಗೆ ಬೇರೆ ಕೆಲಸ ಮುಗಿಸಿಕೊಳ್ಳುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಡುತ್ತಾರೆ.

ಮೈಸೂರು: ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ಗುರುವಾರದಿಂದ ಮೈಸೂರು ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಬೆಳಗ್ಗೆ ಚಾಮುಂಡಿ ಬೆಟ್ಟದಲ್ಲಿ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಅಶ್ವಿನಿ ಪುನೀತ್ ರಾಜಕುಮಾರ (Ashwini Puneeth Rajkumar) ಅವರ ಆಗಮನಕ್ಕಾಗಿ ಕಾಯುವ ಪ್ರಸಂಗ ಏರ್ಪಟ್ಟಿತು. ಅಶ್ವಿನಿ ಅವರು ಶ್ರೀರಂಗಪಟ್ಟಣದ (Srirangapatna) ನಿಮಿಷಾಂಬ ದೇವಾಯಯಲ್ಲಿ ಪೂಜೆ ಸಲ್ಲಿಸಿ ಮೈಸೂರು ಕಡೆ ಹೊರಟಿದ್ದರಿಂದ ಅವರು ತಲುಪುವುದು ತಡವಾಗಿತ್ತು. ಅವರು ಬರೋದು ಎಷ್ಟೊತ್ತಾಗುತ್ತದೆ ಅಂತ ಕೇಳಿ ತಿಳಿದುಕೊಳ್ಳುವ ಸಚಿವರು ಅಷ್ಟರೊಳಗೆ ಬೇರೆ ಕೆಲಸ ಮುಗಿಸಿಕೊಳ್ಳುತ್ತೇನೆ ಅಂತ ಹೇಳಿ ಅಲ್ಲಿಂದ ಹೊರಡುತ್ತಾರೆ.

Published on: Oct 28, 2022 11:57 AM