AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಮಕ್ಕಳಿದ್ದೂ ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?

ಇಬ್ಬರು ಮಕ್ಕಳಿದ್ದೂ ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?

Sahadev Mane
| Edited By: |

Updated on: Apr 21, 2026 | 12:57 PM

Share

ಬೆಳಗಾವಿಯಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ವೃದ್ಧಾಶ್ರಮದಲ್ಲಿದ್ದ ತಾಯಿ ಮೃತಪಟ್ಟ ನಂತರ ಆಕೆಯ ಅಂತ್ಯಕ್ರಿಯೆ ನಡೆಸಲೂ ಗಂಡು ಮಕ್ಕಳು ನಿರಾಕರಿಸಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ಜನ್ಮ ನೀಡಿದಾಕೆಯ ಅಂತಿಮ ವಿಧಿ ವಿಧಾನ ನೆರವೇರಿಸಲು ನಿರಾಕರಿಸಿದ ಪಾಪಿ ಪುತ್ರರ ವಿರುದ್ಧ ವ್ಯಾಪಕ ಆಕ್ರೋಶ ಕೇಳಿಬಂದಿದೆ.

ಬೆಳಗಾವಿ, ಏಪ್ರಿಲ್​​ 21: ನಗರದಲ್ಲಿ ಹೃದಯ ಕಲಕುವ ಘಟನೆಯೊಂದು ನಡೆದಿದ್ದು, ತಾಯಿ ಮೃತಪಟ್ಟ ನಂತರ ಆಕೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಮಕ್ಕಳು ನಿರಾಕರಿಸಿದ್ದಾರೆ. ವಯೋಸಹಜ ಕಾಯಿಲೆಯಿಂದ ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಅಂಜನಾ ಧಾಮನೆ ಮೃತಪಟ್ಟಿದ್ದರು. ಕಳೆದ ಮೂರು ವರ್ಷಗಳಿಂದ ವೃದ್ಧಾಶ್ರಮದಲ್ಲಿದ್ದ ವೃದ್ಧೆ ಅಂಜನಾಗೆ, ಇಬ್ಬರು ಮಕ್ಕಳಿದ್ರೂ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಅಂಜನಾ ಸ್ಥಿತಿ ಕಂಡು ಸಹೋದರ ಅವರನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದ. ವೃದ್ಧೆ ಮೃತಪಟ್ಟ ಹಿನ್ನೆಲೆ ಮಕ್ಕಳಿಗೆ ಆಶ್ರಮ ಸಿಬ್ಬಂದಿ ಕರೆ ಮಾಡಿದ್ದು, ಈ ವೇಳೆ ನೀವೇ ಅಂತ್ಯಕ್ರಿಯೆ ಮಾಡಿ ಎಂದು ಪಾಪಿ ಮಕ್ಕಳು ಕರೆ ಕಟ್ ಮಾಡಿದ್ದಾರೆ. ಬಳಿಕ ನಗರಸೇವಕ ಶಂಕರ್ ಪಾಟೀಲ್, ಗಂಗಾಧರ್ ಪಾಟೀಲ್​ಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಅಂತಿಮವಾಗಿ ಆಶ್ರಮಕ್ಕೆ ತೆರಳಿ ವೃದ್ಧೆಯ ಅಂತ್ಯಕ್ರಿಯೆಯನ್ನು ಸಮಾಜ ಸೇವಕರು ನೆರವೇರಿಸಿದ್ದಾರೆ. ಕೇವಲ 10 ಕಿ.ಮೀ. ದೂರದಲ್ಲಿದ್ರೂ ತಾಯಿಯ ಅಂತ್ಯಕ್ರಿಯೆಗೆ ಬಾರದ ಮಕ್ಕಳಾದ ಮಹೇಶ್, ಶ್ರೀಕಾಂತ್ ವಿರುದ್ಧ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Follow Us