ಬೆಂಗಳೂರಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ, ಮೊಹಮ್ಮದ್ ನಲಪಾಡ್ ಮತ್ತು ಪೊಲೀಸರ ನಡುವೆ ಜಟಾಪಟಿ
ಪೊಲೀಸರು ನಲಪಾಡರನ್ನು ನೂಕಾಡಿದಾಗ ಅವರು ಪೊಲೀಸರನ್ನು ತಳ್ಳುತ್ತಿರುವುದು ವಿಡಿಯೋನಲ್ಲಿ ಸೆರೆಯಾಗಿದೆ. ಅಲ್ಲದೆ ಅವರು ಪೊಲೀಸರಿಗೆ ಗದರುವ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಕೊನೆಗೂ ಪೊಲೀಸರು ನಲಪಾಡರನ್ನು ಬಸ್ಸೊಳಗೆ ನೂಕುವುದರಲ್ಲಿ ಸಫಲರಾಗುತ್ತಾರೆ.
Bengaluru: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಜಾರಿ ನಿರ್ದೇಶನಾಲಯ (ಈಡಿ) (ED) ವಿಚಾರಣೆ ನಡೆಸುತ್ತಿರುವುದನ್ನು ವಿರೋಧಿಸಿ ಬೆಂಗಳೂರಲ್ಲಿ ಶುಕ್ರವಾರ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ (Mohammad Nalapad) ನೇತೃತ್ವದಲ್ಲಿ ಯುವ ಕಾರ್ಯಕರ್ತರು (youth workers) ಪ್ರತಿಭಟನೆಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ಪೊಲೀಸರು ನಲಪಾಡರನ್ನು ವಶಕ್ಕೆ ಪಡೆದು ಬಸ್ಸಲ್ಲಿ ಕರೆದೊಯ್ಯವ ಪ್ರಯತ್ನ ಮಾಡಿದಾಗ ಯುವ ನೇತಾರ ಮತ್ತು ಪೊಲೀಸರ ನಡುವೆ ಜಟಾಪಟಿ ನಡೆಯಿತು. ಪೊಲೀಸರು ನಲಪಾಡರನ್ನು ನೂಕಾಡಿದಾಗ ಅವರು ಪೊಲೀಸರನ್ನು ತಳ್ಳುತ್ತಿರುವುದು ವಿಡಿಯೋನಲ್ಲಿ ಸೆರೆಯಾಗಿದೆ. ಅಲ್ಲದೆ ಅವರು ಪೊಲೀಸರಿಗೆ ಗದರುವ ರೀತಿಯಲ್ಲಿ ಮಾತಾಡುತ್ತಿದ್ದಾರೆ. ಕೊನೆಗೂ ಪೊಲೀಸರು ನಲಪಾಡರನ್ನು ಬಸ್ಸೊಳಗೆ ನೂಕುವುದರಲ್ಲಿ ಸಫಲರಾಗುತ್ತಾರೆ.
ಇದನ್ನೂ ಓದಿ: Tribute: ಅಗಲಿದ ಪಂಜಾಬಿ ಗಾಯಕ ಸಿಧು ಮೂಸೇವಾಲಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ ಸರ್ಫರಾಜ್; ವಿಡಿಯೋ