Tribute: ಅಗಲಿದ ಪಂಜಾಬಿ ಗಾಯಕ ಸಿಧು ಮೂಸೇವಾಲಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ ಸರ್ಫರಾಜ್; ವಿಡಿಯೋ

Ranji Trophy 2022: ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಈ ಇನ್ನಿಂಗ್ಸ್‌ಗೆ ಜೋರಾಗಿ ಚಪ್ಪಾಳೆ ತಟ್ಟಿದರು. ಸರ್ಫರಾಜ್ ಖಾನ್ ಇನ್ನಿಂಗ್ಸ್ ನಂತರ ಕಣ್ಣೀರು ಸುರಿಸುತ್ತಾ, ಅಂತಿಮವಾಗಿ ಸಿಧು ಮುಸೇವಾಲಾ ಅವರ ಸಿಗ್ನೇಚರ್ ಶೈಲಿಯಲ್ಲಿ ತೊಡೆ ತಟ್ಟಿ ಪಂಜಾಬಿ ಗಾಯಕನಿಗೆ ಗೌರವ ಸಲ್ಲಿಸಿದರು.

Tribute: ಅಗಲಿದ ಪಂಜಾಬಿ ಗಾಯಕ ಸಿಧು ಮೂಸೇವಾಲಗೆ ಭಾವನಾತ್ಮಕ ಶ್ರದ್ಧಾಂಜಲಿ ಸಲ್ಲಿಸಿದ ಸರ್ಫರಾಜ್; ವಿಡಿಯೋ
ಸರ್ಫರಾಜ್ ಖಾನ್, ಸಿಧು ಮುಸೇವಾಲಾ
Follow us
TV9 Web
| Updated By: ಪೃಥ್ವಿಶಂಕರ

Updated on: Jun 23, 2022 | 8:42 PM

ಕಳೆದ ಕೆಲವು ದಿನಗಳ ಹಿಂದೆ ಅಗಲಿದ ಪಂಜಾಬಿ ಗಾಯಕ-ರ್ಯಾಪರ್ ಸಿಧು ಮೂಸೇವಾಲ (Sidhu Moosewala) ಅವರು ಕೋಟ್ಯಾಂತರ ಅಭಿಮಾನಿ ಬಳಗವನ್ನು ಹೊಂದಿದ್ದರು. ಜನರು ಅವರ ಹಾಡುಗಳನ್ನು ಹೆಚ್ಚು ಇಷ್ಟಪಡುವುದಲ್ಲದೆ, ಅವರ ವ್ಯಕ್ತಿತ್ವದಿಂದ ತುಂಬಾ ಪ್ರಭಾವಿತರಾಗಿದ್ದರು. ಆದರೆ ಅವರು ಈಗ ಈ ಜಗತ್ತಿನಲ್ಲಿ ಇಲ್ಲ. ಅವರನ್ನು ಕಳೆದುಕೊಂಡ ಸಾಕಷ್ಟು ಅಭಿಮಾನಿ ಬಳಗ ಅವರಿಗೆ ತಮ್ಮದೇ ಆದ ರೀತಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ, ರಣಜಿ ಟ್ರೋಫಿ (Ranji Trophy)ಯಲ್ಲಿ ಶತಕ ಸಿಡಿಸಿದ ಕ್ರಿಕೆಟಿಗ ಸರ್ಫರಾಜ್ ಖಾನ್ (Sarfaraz Khan) ಅವರು ಸಿಧು ಮುಸೇವಾಲಾ ಅವರಿಗೆ ಕ್ರೀಡಾಂಗಣದ ಮಧ್ಯದಲ್ಲಿ ಭಾವನಾತ್ಮಕವಾಗಿ ಗೌರವ ಸಲ್ಲಿಸಿದರು. ಅಂತಹ ಭಾವನಾತ್ಮಕ ಶ್ರದ್ಧಾಂಜಲಿಯನ್ನು ಯಾರೂ ಕೂಡ ಅವರಿಗೆ ಇದುವರೆಗೆ ನೀಡಿರಲಿಲ್ಲ. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸರ್ಫರಾಜ್, ಸಿಧುಗೆ ಅವರದೇ ಶೈಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ತೊಡೆ ತಟ್ಟಿ ಸಿಧು ನೆನೆದ ಸರ್ಫರಾಜ್

ಇದನ್ನೂ ಓದಿ
Image
IND vs IRE: ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್​ಗೆ ಹಾರಿದ ಭಾರತ; ಪ್ರವಾಸದ ಸಂಪೂರ್ಣ ವೇಳಾಪಟ್ಟಿ, ತಂಡಗಳು ಹೀಗಿವೆ
Image
IND vs ENG: ಆಂಗ್ಲರನ್ನು ಮಣಿಸಲು ಭಾರತ ಸಿದ್ಧ; ಜೂನ್ 23 ರಿಂದ ಅಭ್ಯಾಸ ಪಂದ್ಯ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಖಾನ್ ಅಮೋಘ ಪ್ರದರ್ಶನ ನೀಡುತ್ತಿದ್ದು, ಆಯ್ಕೆಗಾರರು ಅವರನ್ನು ಕಡೆಗಣಿಸುವಂತಿಲ್ಲ. ಗುರುವಾರ ನಡೆದ ರಣಜಿ ಟ್ರೋಫಿ ಫೈನಲ್‌ನಲ್ಲಿ ಸರ್ಫರಾಜ್ ಖಾನ್ 8ನೇ ಇನ್ನಿಂಗ್ಸ್‌ನಲ್ಲಿ ಈ ಋತುವಿನ ನಾಲ್ಕನೇ ಶತಕ ದಾಖಲಿಸಿದರು. ಸರ್ಫರಾಜ್ ಅವರ ಇನ್ನಿಂಗ್ಸ್ 243 ಎಸೆತಗಳಲ್ಲಿ 13 ಬೌಂಡರಿ ಮತ್ತು 2 ಸಿಕ್ಸರ್ ಸೇರಿದಂತೆ 55 ಸ್ಟ್ರೈಕ್ ರೇಟ್‌ನೊಂದಿಗೆ ಕೂಡಿತ್ತು. ಈ ಮೂಲಕ ಮುಂಬೈ ಮೊದಲ ಇನ್ನಿಂಗ್ಸ್ ನಲ್ಲಿ ಒಟ್ಟು 374 ರನ್ ಗಳಿಸಲು ನೆರವಾಯಿತು. ಇದೇ ವೇಳೆ ಸರ್ಫರಾಜ್ ಖಾನ್ ಶತಕ ಬಾರಿಸಿದ ತಕ್ಷಣ ಭಾವುಕರಾದರು. ತಕ್ಷಣ ಹೆಲ್ಮೆಟ್ ತೆಗೆದು ಬ್ಯಾಟನ್ನು ಆಕಾಶಕ್ಕೆ ತೋರಿಸಿ ಭಾವುಕರಾದರು. ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಈ ಇನ್ನಿಂಗ್ಸ್‌ಗೆ ಜೋರಾಗಿ ಚಪ್ಪಾಳೆ ತಟ್ಟಿದರು. ಸರ್ಫರಾಜ್ ಖಾನ್ ಇನ್ನಿಂಗ್ಸ್ ನಂತರ ಕಣ್ಣೀರು ಸುರಿಸುತ್ತಾ, ಅಂತಿಮವಾಗಿ ಸಿಧು ಮುಸೇವಾಲಾ ಅವರ ಸಿಗ್ನೇಚರ್ ಶೈಲಿಯಲ್ಲಿ ತೊಡೆ ತಟ್ಟಿ ಪಂಜಾಬಿ ಗಾಯಕನಿಗೆ ಗೌರವ ಸಲ್ಲಿಸಿದರು.

ಇದನ್ನೂ ಓದಿ: Ranji Trophy: 23 ವರ್ಷಗಳ ನಂತರ ಮೊದಲ ಬಾರಿಗೆ ರಣಜಿ ಟ್ರೋಫಿ ಫೈನಲ್‌ ಪ್ರವೇಶಿಸಿದ ಮಧ್ಯಪ್ರದೇಶ..!

ಅನೇಕ ಜನರು ಮುಸೇವಾಲಾಗೆ ಗೌರವ

ಮೇ 29 ರಂದು, ತನ್ನ ಗ್ರಾಮವಾದ ಮಾನ್ಸಾಗೆ ಹೋಗುತ್ತಿದ್ದಾಗ, ಕೆಲವು ಅಪರಿಚಿತ ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದರು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹತ್ಯೆಯ ಹೊಣೆ ಹೊತ್ತುಕೊಂಡಿದೆ. ಈ ಪ್ರಕರಣದಲ್ಲಿ ಇದುವರೆಗೆ ಹಲವರನ್ನು ಬಂಧಿಸಲಾಗಿದೆ. ಅವರ ಕುಟುಂಬ ದುರಂತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಜನರು ಅವರಿಗೆ ತಮ್ಮದೇ ಆದ ರೀತಿಯಲ್ಲಿ ಗೌರವ ಸಲ್ಲಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಅಮೆರಿಕದ ಟೈಮ್ಸ್ ಸ್ಕ್ವೇರ್ ಕಟ್ಟಡದಲ್ಲೂ ಸಿದ್ದು ಮುಸೇವಾಲಾ ಅವರ ಹಾಡುಗಳನ್ನು ನುಡಿಸಿ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು. ಇದೇ ವೇಳೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಅಲ್ಲಿ ಜಮಾಯಿಸಿದ್ದರು. ಇದಲ್ಲದೇ, ವ್ಯಾಂಕೋವರ್‌ನಲ್ಲಿ ನಡೆದ ಸಂಗೀತ ಕಛೇರಿಯೊಂದರಲ್ಲಿ ದಿಲ್ಜಿತ್ ದೋಸಾಂಜ್ ಅವರು ಸಿಧು ಮುಸೇವಾಲಾ ಅವರಿಗಾಗಿ ಹಾಡನ್ನು ಹಾಡಿದರು ಮತ್ತು ಹಾಡುಗಳ ಮೂಲಕ ಅವರಿಗೆ ಗೌರವ ಸಲ್ಲಿಸಿದರು.

ಬಲಗೈ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಸೌರಾಷ್ಟ್ರ ವಿರುದ್ಧ 275, ಉತ್ತರಾಖಂಡ ವಿರುದ್ಧ ಕ್ವಾರ್ಟರ್ ಫೈನಲ್‌ನಲ್ಲಿ 153 ಮತ್ತು ಒಡಿಶಾ ವಿರುದ್ಧ 165 ರನ್ ಗಳಿಸಿ ಫೈನಲ್‌ನಲ್ಲಿ ಶತಕ ಬಾರಿಸಿದ್ದರು. ಅದೇ ಸಮಯದಲ್ಲಿ, ಸರ್ಫರಾಜ್ ಖಾನ್ ಅವರು 2019/20 ರ ರಣಜಿ ಟ್ರೋಫಿ ಋತುವಿನಲ್ಲಿ ಅವರ ರನ್ ಟ್ಯಾಲಿಯನ್ನು ಮೀರಿಸಿದರು, ಅವರು 9 ಇನ್ನಿಂಗ್ಸ್‌ಗಳಲ್ಲಿ 928 ರನ್‌ಗಳನ್ನು ಗಳಿಸಿದರು, ಇದರಲ್ಲಿ ಅವರ ವೃತ್ತಿಜೀವನದ ಅತ್ಯುತ್ತಮ ಸ್ಕೋರ್ 301 ರನ್ ಆಗಿದೆ.