IND W vs SL W: ಏಕಪಕ್ಷೀಯವಾಗಿ ಶ್ರೀಲಂಕಾವನ್ನು ಮಣಿಸಿದ ಟೀಂ ಇಂಡಿಯಾ; ಗೆಲುವಿನೊಂದಿಗೆ ಸರಣಿ ಆರಂಭ

IND W vs SL W: ದಂಬುಲ್ಲಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಶೈಲಿಯಲ್ಲಿ ಶ್ರೀಲಂಕಾವನ್ನು 34 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 138 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ತಂಡವು 104 ರನ್ ಗಳಿಸಲಷ್ಟೇ ಶಕ್ತವಾಯಿತು.

IND W vs SL W: ಏಕಪಕ್ಷೀಯವಾಗಿ ಶ್ರೀಲಂಕಾವನ್ನು ಮಣಿಸಿದ ಟೀಂ ಇಂಡಿಯಾ; ಗೆಲುವಿನೊಂದಿಗೆ ಸರಣಿ ಆರಂಭ
IND W vs SL W
Follow us
| Updated By: ಪೃಥ್ವಿಶಂಕರ

Updated on:Jun 23, 2022 | 5:49 PM

ಭಾರತೀಯ ಮಹಿಳಾ ಕ್ರಿಕೆಟ್ ತಂಡ, ಶ್ರೀಲಂಕಾ ವಿರುದ್ಧದ T20 ಸರಣಿಯನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ(Sri Lanka Women vs India Women, 1st T20I). ದಂಬುಲ್ಲಾದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಏಕಪಕ್ಷೀಯ ಶೈಲಿಯಲ್ಲಿ ಶ್ರೀಲಂಕಾವನ್ನು 34 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 138 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ ತಂಡವು 104 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ರಾಧಾ ಯಾದವ್ 22 ರನ್ ನೀಡಿ 2 ವಿಕೆಟ್ ಪಡೆದರು. ದೀಪ್ತಿ ಶರ್ಮಾ, ಶೆಫಾಲಿ ವರ್ಮಾ ಮತ್ತು ಪೂಜಾ ವಸ್ತ್ರಕರ್ (Deepti Sharma, Shefali Verma and Pooja Vastrakar) ಒಂದು ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲಿ ಜೆಮಿಮಾ ರೋಡ್ರಿಗಸ್ 27 ಎಸೆತಗಳಲ್ಲಿ ಅಜೇಯ 36, ಶೆಫಾಲಿ ವರ್ಮಾ 31 ರನ್ ಗಳಿಸಿದರು. ಕೊನೆಯ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿದ ದೀಪ್ತಿ ಶರ್ಮಾ 8 ಎಸೆತಗಳಲ್ಲಿ 17 ರನ್ ಗಳಿಸಿದರು.

ಭಾರತಕ್ಕೆ ಕಳಪೆ ಆರಂಭ

ಭಾರತದ ಹೊಸ ಆಲ್-ಫಾರ್ಮ್ಯಾಟ್ ನಾಯಕಿ ಹರ್ಮನ್‌ಪ್ರೀತ್ ಕೌರ್ ಟಾಸ್ ಗೆದ್ದು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಇನಿಂಗ್ಸ್​ನ ಮೂರನೇ ಓವರ್​ನಲ್ಲಿ ಭಾರತ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (01) ವಿಕೆಟ್ ಕಳೆದುಕೊಂಡಿತು. 25ರ ಹರೆಯದ ಭಾರತದ ಆಟಗಾರ್ತಿ ಅನುಭವಿ ಓಷಾದಿಗೆ ಬಲಿಯಾದರು. ಸಭಿನೆನೆ ಮೇಘನಾ ಒಂದು ರನ್ ಸೇರಿಸಲು ಸಾಧ್ಯವಾಗಲಿಲ್ಲ, ಅನುಭವಿ ರಣಸಿಂಗ್ ಅವರನ್ನು ಡ್ರೆಸ್ಸಿಂಗ್ ಕೋಣೆಗೆ ಕಳುಹಿಸಿದರು.

ಇದನ್ನೂ ಓದಿ
Image
India vs Leicestershire: ಅಭ್ಯಾಸ ಪಂದ್ಯದಲ್ಲೂ ಅದೇ ಕಥೆ; ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿದ ರೋಹಿತ್ ಪಡೆ
Image
World Cup Super League: ನೆದರ್ಲೆಂಡ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್; 6ನೇ ಸ್ಥಾನದಲ್ಲಿ ಭಾರತ
Image
ರೋಹಿತ್ ಶರ್ಮಾ ಅಂತರಾಷ್ಟ್ರೀಯ ಕ್ರಿಕೆಟ್‌ ಬದುಕಿಗೆ ಭರ್ತಿ 15 ವರ್ಷ; ಭಾವನಾತ್ಮಕ ಸಂದೇಶ ಪೋಸ್ಟ್ ಮಾಡಿದ ಹಿಟ್‌ಮ್ಯಾನ್

ಇದನ್ನೂ ಓದಿ: Mithali Raj Surpass MS Dhoni: ಧೋನಿ ದಾಖಲೆ ಮುರಿದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್

ರಾಡ್ರಿಗಸ್ ಉತ್ತಮ ಸ್ಕೋರ್

ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಕಳೆದುಕೊಂಡ ನಂತರ ತಂಡದ ಮೇಲಿನ ಒತ್ತಡವು ಸ್ಪಷ್ಟವಾಗಿ ಗೋಚರಿಸಿತು. ಹರ್ಮನ್‌ಪ್ರೀತ್ ಮತ್ತು ಶೆಫಾಲಿ ವರ್ಮಾ ಜೋಡಿ ಈ ಸೂಕ್ಷ್ಮ ಪರಿಸ್ಥಿತಿಯನ್ನು ನಿಭಾಯಿಸಿದರು. ಶೆಫಾಲಿ (31 ರನ್) ಮೂರನೇ ಆಟಗಾರ್ತಿಯಾಗಿ ಔಟಾದರು, ಅವರು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುತ್ತಿದ್ದಾಗ ಅಟಪಟ್ಟುಗೆ ಕ್ಯಾಚ್ ನೀಡಿದರು. ಶ್ರೀಲಂಕಾದ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿ ಆರಂಭದಲ್ಲಿ ದೊಡ್ಡ ವಿಕೆಟ್ ಪಡೆದರು. ನಾಯಕಿ ಹರ್ಮನ್ಪ್ರೀತ್ (22) ಅವರನ್ನು 11 ನೇ ಓವರ್ನಲ್ಲಿ ಸ್ಪಿನ್ನರ್ ಇನೋಕಾ ರಣವೀರ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸಿದರು. ರಣವೀರ ತಮ್ಮ ಹೆಸರಿಗೆ ಇನ್ನೂ ಎರಡು ವಿಕೆಟ್‌ಗಳನ್ನು ಪಡೆದರು, ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಚಾ ಘೋಷ್ (11) ಮತ್ತು ಪೂಜಾ ವಸ್ತ್ರಕರ್ (14) ಅವರು ತಂಡದ ಸ್ಕೋರ್ ಕೇವಲ 106 ರನ್ ಆಗಿದ್ದಾಗ ವಿಕೆಟ್ ಒಪ್ಪಿಸಿದರು. ತಂಡಕ್ಕೆ ಮರಳಿದ ರಾಡ್ರಿಗಸ್ ಭಾರತವನ್ನು ಗೌರವಾನ್ವಿತ ಸ್ಕೋರ್‌ಗೆ ಕೊಂಡೊಯ್ಯುವ ಜವಾಬ್ದಾರಿಯನ್ನು ನಿರ್ವಹಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ರೊಡ್ರಿಗಸ್ ಒತ್ತಡಕ್ಕೆ ಮಣಿಯದೆ ತಂಡಕ್ಕೆ ಪ್ರಮುಖ ರನ್ ಗಳಿಸಿದರು. ಅವರು ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಇನ್ನೊಂದು ತುದಿಯಲ್ಲಿ ದೀಪ್ತಿ ಶರ್ಮಾ ಎಂಟು ಎಸೆತಗಳಲ್ಲಿ 17 ರನ್ ಸೇರಿಸಿದರು.

Published On - 5:49 pm, Thu, 23 June 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ