World Cup Super League: ನೆದರ್ಲೆಂಡ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್; 6ನೇ ಸ್ಥಾನದಲ್ಲಿ ಭಾರತ

World Cup Super League: ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಅಗ್ರ ಎಂಟು ತಂಡಗಳು ಪಂದ್ಯಾವಳಿಗೆ ನೇರ ಪ್ರವೇಶವನ್ನು ಹೊಂದಿರುತ್ತವೆ. ಆದಾಗ್ಯೂ, ಟೀಂ ಇಂಡಿಯಾ ವಿಶ್ವಕಪ್ ಆತಿಥ್ಯ ವಹಿಸುವುದರಿಂದ ವಿಶ್ವಕಪ್ ಸೂಪರ್ ಲೀಗ್ ತಂಡದ ಮೇಲೆ ಪರಿಣಾಮ ಬೀರುವುದಿಲ್ಲ.

World Cup Super League: ನೆದರ್ಲೆಂಡ್ಸ್ ಮಣಿಸಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್; 6ನೇ ಸ್ಥಾನದಲ್ಲಿ ಭಾರತ
England Vs Netherland
Follow us
TV9 Web
| Updated By: ಪೃಥ್ವಿಶಂಕರ

Updated on:Jun 23, 2022 | 3:52 PM

ನೆದರ್ಲ್ಯಾಂಡ್ಸ್ ವಿರುದ್ಧದ (England Vs Netherland) ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಳಕ ಇಂಗ್ಲೆಂಡ್ 3-0 ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. ಸರಣಿಯ ಮೊದಲ ಪಂದ್ಯವನ್ನು 232 ರನ್‌ಗಳಿಂದ ಗೆದ್ದುಕೊಂಡ ಇಂಗ್ಲೆಂಡ್, ಎರಡನೇ ಪಂದ್ಯವನ್ನು 6 ವಿಕೆಟ್‌ಗಳಿಂದ ಮತ್ತು ಕೊನೆಯ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದುಕೊಂಡಿತು. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ಸ್ ಪಟ್ಟಿ (ICC Men’s Cricket World Cup Super League points table)ಯಲ್ಲಿ ಈ ಗೆಲುವು ಇಂಗ್ಲೆಂಡ್‌ಗೂ ಲಾಭ ತಂದಿದೆ. ಇದೀಗ ಇಂಗ್ಲೆಂಡ್ 125 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಬಾಂಗ್ಲಾದೇಶ ಎರಡನೇ ಸ್ಥಾನಕ್ಕೆ ಕುಸಿದಿದೆ.

ಇಂಗ್ಲೆಂಡ್ 125 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ

ಇದನ್ನೂ ಓದಿ
Image
IND vs IRE: ಪಾಂಡ್ಯ ನಾಯಕತ್ವದಲ್ಲಿ ಐರ್ಲೆಂಡ್​ಗೆ ಹಾರಿದ ಭಾರತ; ಪ್ರವಾಸದ ಸಂಪೂರ್ಣ ವೇಳಾಪಟ್ಟಿ, ತಂಡಗಳು ಹೀಗಿವೆ
Image
IND vs ENG: ಆಂಗ್ಲರನ್ನು ಮಣಿಸಲು ಭಾರತ ಸಿದ್ಧ; ಜೂನ್ 23 ರಿಂದ ಅಭ್ಯಾಸ ಪಂದ್ಯ; ಪಂದ್ಯದ ಬಗ್ಗೆ ಇಲ್ಲಿದೆ ಮಾಹಿತಿ

ವಿಶ್ವಕಪ್ ಸೂಪರ್ ಲೀಗ್ ಪಾಯಿಂಟ್ ಪಟ್ಟಿಯ​ಲ್ಲಿ 125 ಅಂಕಗಳೊಂದಿಗೆ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, 120 ಅಂಕಗಳೊಂದಿಗೆ ಬಾಂಗ್ಲಾದೇಶ ಎರಡನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನ 100 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇದೀಗ ಪಾಕಿಸ್ತಾನ ತಂಡ 90 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ ತಂಡ ಕೂಡ 80 ಅಂಕ ಪಡೆದು 5ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:T20 World Cup: ಟಿ20 ವಿಶ್ವಕಪ್​ಗೆ ತಂಡ ಪ್ರಕಟಿಸಲು ಐಸಿಸಿ ಗಡುವು; ಈ 4 ಸರಣಿಗಳಿಂದ ತಂಡ ಕಟ್ಟಬೇಕಿದೆ ಕೋಚ್ ರಾಹುಲ್

ಆರನೇ ಸ್ಥಾನದಲ್ಲಿ ಟೀಂ ಇಂಡಿಯಾ

ಭಾರತ ತಂಡ 79 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 70 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಐರ್ಲೆಂಡ್ 68 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಶ್ರೀಲಂಕಾ ಕ್ರಿಕೆಟ್ 62 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಕ್ರಿಕೆಟ್ 60 ಅಂಕಗಳೊಂದಿಗೆ 10 ನೇ ಸ್ಥಾನದಲ್ಲಿದೆ ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ 49 ಅಂಕಗಳೊಂದಿಗೆ 11 ನೇ ಸ್ಥಾನದಲ್ಲಿದೆ.

ಈ ತಂಡಗಳಿಗೆ ನೇರ ಪ್ರವೇಶ

2023 ರಲ್ಲಿ ಭಾರತದಲ್ಲಿ ನಡೆಯಲಿರುವ ODI ವಿಶ್ವಕಪ್ ಅನ್ನು ಪರಿಗಣಿಸಿ ವಿಶ್ವಕಪ್ ಸೂಪರ್ ಲೀಗ್ ಬಹಳ ಮುಖ್ಯ. ವಿಶ್ವಕಪ್ ಸೂಪರ್ ಲೀಗ್‌ನಲ್ಲಿ ಅಗ್ರ ಎಂಟು ತಂಡಗಳು ಪಂದ್ಯಾವಳಿಗೆ ನೇರ ಪ್ರವೇಶವನ್ನು ಹೊಂದಿರುತ್ತವೆ. ಆದಾಗ್ಯೂ, ಟೀಂ ಇಂಡಿಯಾ ವಿಶ್ವಕಪ್ ಆತಿಥ್ಯ ವಹಿಸುವುದರಿಂದ ವಿಶ್ವಕಪ್ ಸೂಪರ್ ಲೀಗ್ ತಂಡದ ಮೇಲೆ ಪರಿಣಾಮ ಬೀರುವುದಿಲ್ಲ. ಮತ್ತೊಂದೆಡೆ ಅಗ್ರ 8 ರೊಳಗೆ ಸ್ಥಾನ ಪಡೆಯದ ತಂಡಗಳು ಅರ್ಹತೆ ಪಡೆಯಲು ಮತ್ತೊಂದು ಅವಕಾಶವನ್ನು ಹೊಂದಿರುತ್ತವೆ.

Published On - 3:52 pm, Thu, 23 June 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್