Leicestershire vs India: ಟೀಮ್ ಇಂಡಿಯಾದ ಅಭ್ಯಾಸ ಪಂದ್ಯದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ

Leicestershire vs India: ಟಾಸ್ ಗೆದ್ದಿರುವ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ವಿರುದ್ದ ಜಸ್​ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಬೌಲಿಂಗ್ ಅನ್ನು ಕೂಡ ಆರಂಭಿಸಿದ್ದಾರೆ.

Leicestershire vs India: ಟೀಮ್ ಇಂಡಿಯಾದ ಅಭ್ಯಾಸ ಪಂದ್ಯದ ನೇರ ಪ್ರಸಾರವನ್ನು ಇಲ್ಲಿ ವೀಕ್ಷಿಸಿ
Leicestershire vs India
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jun 23, 2022 | 4:54 PM

ಭಾರತ-ಇಂಗ್ಲೆಂಡ್ (India vs England) ನಡುವಣ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಅಭ್ಯಾಸ ಪಂದ್ಯವನ್ನು ಆಡುತ್ತಿದೆ. ಲೀಸೆಸ್ಟರ್ಷೈರ್ (Leicestershire vs India) ತಂಡ ವಿರುದ್ಧ ಟೀಮ್ ಇಂಡಿಯಾ ವಾರ್ಮ್​ ಅಪ್ ಮ್ಯಾಚ್ ಶುರುವಾಗಿದ್ದು, ಈ ಪಂದ್ಯವು ನಾಲ್ಕು ದಿನಗಳ ಕಾಲ ನಡೆಯಲಿದೆ. ವಿಶೇಷ ಎಂದರೆ ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಕೆಲ ಸ್ಟಾರ್ ಆಟಗಾರರು ಎದುರಾಳಿ ತಂಡದ ಪರ ಕಣಕ್ಕಿಳಿದಿದ್ದಾರೆ. ಈ ಮೂಲಕ ಸಂಪೂರ್ಣ ಬಳಗ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಅದರಂತೆ ಲೀಸೆಸ್ಟರ್ಷೈರ್ ತಂಡದಲ್ಲಿ ಟೀಮ್ ಇಂಡಿಯಾದ ಚೇತೇಶ್ವರ್ ಪೂಜಾರ, ಜಸ್​ಪ್ರೀತ್ ಬುಮ್ರಾ, ರಿಷಭ್ ಪಂತ್ ಮತ್ತು ಪ್ರಸಿದ್ಧ್ ಕೃಷ್ಣ ಕಾಣಿಸಿಕೊಂಡಿದ್ದಾರೆ.

ಇದೀಗ ಪಂದ್ಯವು ಶುರುವಾಗಿದ್ದು, ಟಾಸ್ ಗೆದ್ದಿರುವ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ವಿರುದ್ದ ಜಸ್​ಪ್ರೀತ್ ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ಬೌಲಿಂಗ್ ಅನ್ನು ಕೂಡ ಆರಂಭಿಸಿದ್ದಾರೆ. ಇದು ಅಭ್ಯಾಸ ಪಂದ್ಯವಾಗಿರುವ ಈ ಮ್ಯಾಚ್​ನ ನೇರ ಪ್ರಸಾರ ಯಾವುದೇ ಟಿವಿ ಚಾನೆಲ್​ನಲ್ಲಿ ಇರುವುದಿಲ್ಲ. ಬದಲಾಗಿ ಫಾಕ್ಸ್​ ಟಿವಿ ಯೂಟ್ಯೂಬ್​ ಚಾನೆಲ್​ನಲ್ಲಿ ಪಂದ್ಯದ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಟೀಮ್ ಇಂಡಿಯಾ-ಲೀಸೆಸ್ಟರ್ಷೈರ್ ಅಭ್ಯಾಸ ಪಂದ್ಯದ ನೇರ ಪ್ರಸಾರ:

ಲೀಸೆಸ್ಟರ್ಷೈರ್ ಪ್ಲೇಯಿಂಗ್​ 11: ಸ್ಯಾಮ್ಯುಯೆಲ್ ಇವಾನ್ಸ್ (ನಾಯಕ) , ಲೂಯಿಸ್ ಕಿಂಬರ್ , ಚೇತೇಶ್ವರ ಪೂಜಾರ , ರಿಷಭ್ ಪಂತ್ , ರೆಹಾನ್ ಅಹ್ಮದ್ , ಜೋಯ್ ಎವಿಸನ್ , ಸ್ಯಾಮ್ಯುಯೆಲ್ ಬೇಟ್ಸ್ (ವಿಕೆಟ್ ಕೀಪರ್) , ರೋಮನ್ ವಾಕರ್ , ಜಸ್ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ , ವಿಲ್ ಡೇವಿಸ್.

ಟೀಮ್ ಇಂಡಿಯಾ ಪ್ಲೇಯಿಂಗ್ 11: ರೋಹಿತ್ ಶರ್ಮಾ (ನಾಯಕ) , ಶುಭಮನ್ ಗಿಲ್ , ಶ್ರೇಯಸ್ ಅಯ್ಯರ್ , ವಿರಾಟ್ ಕೊಹ್ಲಿ , ಹನುಮ ವಿಹಾರಿ , ಶ್ರೀಕರ್ ಭರತ್ ( ವಿಕೆಟ್ ಕೀಪರ್) , ರವೀಂದ್ರ ಜಡೇಜಾ , ಶಾರ್ದೂಲ್ ಠಾಕೂರ್ , ಮೊಹಮ್ಮದ್ ಶಮಿ , ಮೊಹಮ್ಮದ್ ಸಿರಾಜ್ , ಉಮೇಶ್ ಯಾದವ್.

ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳಾಪಟ್ಟಿ ಹೀಗಿದೆ:

ಜುಲೈ 1 – 5: ಏಕೈಕ ಟೆಸ್ಟ್ ಪಂದ್ಯ (ಎಡ್ಜ್‌ಬಾಸ್ಟನ್) ಜುಲೈ 7: ಮೊದಲ ಟಿ20 ಪಂದ್ಯ (ಏಜಿಯಾಸ್ ಬೌಲ್) ಜುಲೈ 9: 2ನೇ ಟಿ20 ಪಂದ್ಯ (ಎಡ್ಜ್‌ಬಾಸ್ಟನ್) ಜುಲೈ 10: 3ನೇ ಟಿ20 ಪಂದ್ಯ (ಟ್ರೆಂಟ್ ಬ್ರಿಡ್ಜ್)

ಏಕದಿನ ಸರಣಿ ವೇಳಾಪಟ್ಟಿ:

ಜುಲೈ 12- ಮೊದಲ ಏಕದಿನ ಪಂದ್ಯ (ಕಿಯಾ ಓವಲ್) ಜುಲೈ 14- 2ನೇ ಏಕದಿನ ಪಂದ್ಯ (ಲಾರ್ಡ್ಸ್) ಜುಲೈ 17- 3ನೇ ಏಕದಿನ ಪಂದ್ಯ (ಮ್ಯಾಂಚೆಸ್ಟರ್)

ಭಾರತ ಟೆಸ್ಟ್ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಬ್ ಪಂತ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಪ್ರಸಿಧ್ದ್ ಕೃಷ್ಣ.

Published On - 4:24 pm, Thu, 23 June 22