T20 World Cup 2022: ಟಿ20 ವಿಶ್ವಕಪ್​ಗೆ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ ಟೀಮ್ ಇಂಡಿಯಾ..!

India T20 World Cup Squd: ಅನೇಕ ಆಟಗಾರರು ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವುದರಿಂದ ಯಾರನ್ನು ಆಯ್ಕೆ ಮಾಡುವುದು ಯಾರನ್ನು ಬಿಡುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ.

T20 World Cup 2022: ಟಿ20 ವಿಶ್ವಕಪ್​ಗೆ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ ಟೀಮ್ ಇಂಡಿಯಾ..!
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jun 23, 2022 | 3:58 PM

ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗಾಗಿ (T20 World Cup 2022) ಟೀಮ್ ಇಂಡಿಯಾ (Team India) ಆಯ್ಕೆ ಯಾವಾಗ ಎಂಬ ಪ್ರಶ್ನೆಗಳು ಈಗ ಚರ್ಚಾ ವಿಷಯವಾಗಿದೆ. ಏಕೆಂದರೆ ಟೀಮ್ ಇಂಡಿಯಾದಲ್ಲಿ ಅನೇಕ ಆಟಗಾರರಿದ್ದು, ಅವರಿಂದ 18 ಸದಸ್ಯರ ಬಳಗವನ್ನು ರೂಪಿಸುವುದು ಆಯ್ಕೆ ಸಮಿತಿಗೆ ದೊಡ್ಡ ಸವಾಲೇ ಸರಿ. ಏಕೆಂದರೆ ಟೀಮ್ ಇಂಡಿಯಾ ಈಗ ಎರಡು ತಂಡವಾಗಿ ಸರಣಿಗಳನ್ನು ಆಡುತ್ತಿದೆ. ಒಂದು ತಂಡವು ಇಂಗ್ಲೆಂಡ್​ ವಿರುದ್ದ ಟೆಸ್ಟ್ ಸರಣಿ ಆಡಲು ಸಜ್ಜಾಗಿದ್ದರೆ, ಮತ್ತೊಂದು ತಂಡ ಐರ್ಲೆಂಡ್ ವಿರುದ್ದ ಟಿ20 ಸರಣಿ ಆಡಲಿದೆ. ಈ ಎರಡೂ ತಂಡಗಳಿಂದ ಪ್ರಮುಖ ಆಟಗಾರರನ್ನು ಆಯ್ಕೆ ಮಾಡಿ ಟಿ20 ವಿಶ್ವಕಪ್​ಗಾಗಿ ತಂಡವನ್ನು ರೂಪಿಸಬೇಕಿದೆ.

ಆದರೆ ಇಲ್ಲಿ ಅನೇಕ ಆಟಗಾರರು ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿರುವುದರಿಂದ ಯಾರನ್ನು ಆಯ್ಕೆ ಮಾಡುವುದು ಯಾರನ್ನು ಬಿಡುವುದು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದಾಗ್ಯೂ ಟೀಮ್ ಇಂಡಿಯಾದ ಮುಂಬರುವ ಪ್ರಮುಖ ಸರಣಿಗಳ ಮೂಲಕ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುವ ಆಯ್ಕೆಯೊಂದು ಬಿಸಿಸಿಐ ಮುಂದಿದೆ.

ಏಕೆಂದರೆ ಟೀಮ್ ಇಂಡಿಯಾ ಐರ್ಲೆಂಡ್ ವಿರುದ್ದದ ಟಿ20 ಸರಣಿ ಬಳಿಕ ಇಂಗ್ಲೆಂಡ್ ವಿರುದ್ದ 3 ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಯು ಇಂಗ್ಲೆಂಡ್​ನಲ್ಲೇ ನಡೆಯುತ್ತಿರುವುದರಿಂದ ವಿದೇಶಿ ಪಿಚ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ.

ಇದನ್ನೂ ಓದಿ
Image
Irfan Pathan: ಟಿ20 ವಿಶ್ವಕಪ್​ಗೆ ಇರ್ಫಾನ್ ಪಠಾಣ್​ರ ಟೀಮ್ ಇಂಡಿಯಾ ಪ್ಲೇಯಿಂಗ್ 11
Image
Team India: 8 ತಿಂಗಳಲ್ಲಿ 6 ನಾಯಕರನ್ನು ಕಣಕ್ಕಿಳಿಸಿದ ಟೀಮ್ ಇಂಡಿಯಾ
Image
ಪೆಟ್ರೋಲ್ ಪಂಪ್​ನಲ್ಲಿ ಚಹಾ ನೀಡುತ್ತಿರುವ ಶ್ರೀಲಂಕಾ ಕ್ರಿಕೆಟಿಗ
Image
Rishabh Pant: ನಾಯಕನಾಗಿ ಅತ್ಯಂತ ಕೆಟ್ಟ ದಾಖಲೆ ಬರೆದ ರಿಷಭ್ ಪಂತ್

ಈ ಸರಣಿಯ ಬಳಿಕ ಭಾರತ ತಂಡವು ಆಗಸ್ಟ್​ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ಸರಣಿಯಲ್ಲಿ ಟೀಮ್ ಇಂಡಿಯಾ 5 ಟಿ20 ಪಂದ್ಯಗಳನ್ನಾಡಲಿದೆ. ಟೀಮ್ ಇಂಡಿಯಾ ಬ್ಯಾಟ್ಸ್​ಮನ್​ಗಳು ಕೆರಿಬಿಯನ್​ನ ಬೌನ್ಸ್ ಪಿಚ್​ಗಳಲ್ಲಿ ಚೆಂಡನ್ನು ಹೇಗೆ ಎದುರಿಸುತ್ತಾರೆ ಎಂಬುದು ಕೂಡ ಈ ಸರಣಿಯಿಂದ ಗೊತ್ತಾಗಲಿದೆ.

ಆ ಬಳಿಕ ಏಷ್ಯಾಕಪ್ ನಡೆಯಲಿದ್ದು, ಇದು ಕೂಡ ಟೀಮ್ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ. ಏಕೆಂದರೆ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ಸರಣಿಗಳ ಬಳಿಕ ಟೀಮ್ ಇಂಡಿಯಾ ಏಷ್ಯಾ ರಾಷ್ಟ್ರಗಳ ವಿರುದ್ದ ಏಷ್ಯಾಕಪ್​ನಲ್ಲಿ ಟಿ20 ಪಂದ್ಯಗಳನ್ನಾಡಲಿದೆ. ಹೀಗಾಗಿ ಪಾಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ್ ತಂಡಗಳ ವಿರುದ್ದ ಟಿ20 ವಿಶ್ವಕಪ್​ಗೂ ಮುನ್ನ ಕಾರ್ಯತಂತ್ರಗಳನ್ನು ರೂಪಿಸಲು ಏಷ್ಯಾಕಪ್ ಸಹಕಾರಿಯಾಗಲಿದೆ.

ಇದಾದ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿರುವುದು ವಿಶೇಷ. ಅಂದರೆ ಸೆಪ್ಟೆಂಬರ್​ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿ ಆಡಲಿದೆ. ಅಂದರೆ ಟಿ20 ವಿಶ್ವಕಪ್​ಗೂ ಮುನ್ನವೇ ಆಸ್ಟ್ರೇಲಿಯಾ ಪಿಚ್​ನಲ್ಲಿ ಆಡುವ ಅವಕಾಶ ಟೀಮ್ ಇಂಡಿಯಾಗೆ ಸಿಗಲಿದೆ. ಅತ್ತ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸುವ ಅವಕಾಶದ ಜೊತೆಗೆ, ಟಿ20 ವಿಶ್ವಕಪ್​ ಮುನ್ನ ಆಸೀಸ್​ ಪಿಚ್​ನಲ್ಲಿ ಆಡಿ ಸಂಪೂರ್ಣವಾಗಿ ಸಜ್ಜಾಗುವ ಉತ್ತಮ ಅವಕಾಶ ಟೀಮ್ ಇಂಡಿಯಾ ಮುಂದಿದೆ.

ಇತ್ತ ಅಕ್ಟೋಬರ್ 16 ರಿಂದ ಟಿ20 ವಿಶ್ವಕಪ್​ ಶುರುವಾಗಲಿದ್ದು, ಹೀಗಾಗಿ ಈ ಪ್ರಮುಖ ಸರಣಿಗಳಲ್ಲಿನ ಪ್ರದರ್ಶನವನ್ನು ಆಧರಿಸಿ ಅಂತಿಮವಾಗಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಮೂಲಕ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುವ ಅವಕಾಶ ಆಯ್ಕೆ ಸಮಿತಿ  ಮುಂದಿದೆ. ಹಾಗೆಯೇ ಈ ಸರಣಿಗಳ ಮೂಲಕ ಫರ್ಫೆಕ್ಟ್ ಆಟಗಾರರನ್ನು ಆರಿಸಿಕೊಳ್ಳುವ ಅವಕಾಶ ಕೂಡ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಸಿಗಲಿದೆ.​  ಹೀಗಾಗಿ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ಹಾಟ್ ಫೇವರೇಟ್ ತಂಡವಾಗಿ ಟೀಮ್ ಇಂಡಿಯಾ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

ಐರ್ಲೆಂಡ್ ಸರಣಿಗೆ ಭಾರತ ಟಿ20 ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ದೀಪಕ್ ಹೂಡಾ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್

ಇಂಗ್ಲೆಂಡ್ ವಿರುದ್ದ ಟೆಸ್ಟ್​ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಬ್ ಪಂತ್, ಕೆಎಸ್ ಭರತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ , ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಪ್ರಸಿಧ್ದ್ ಕೃಷ್ಣ.