ಕುಂದಾನಗರಿಯಲ್ಲಿ ವರುಣನ ಅಬ್ಬರ; ಮನೆಗೆ ನುಗ್ಗಿದ ಮಳೆ ನೀರು, ಊಟ-ನಿದ್ದೆ ಇಲ್ಲದೆ ಜನರ ಪರದಾಟ

Edited By: ಆಯೇಷಾ ಬಾನು

Updated on: Jul 24, 2023 | 2:40 PM

ಬೆಳಗಾವಿಯ ಗಣೇಶ್ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೇಕಾರರ ಮನೆಗಳಿಗೂ ನೀರು ನುಗ್ಗಿದ್ದು, ಮಗ್ಗಗಳೆಲ್ಲವೂ ನೀರು ಪಾಲಾಗಿವೆ. ಊಟ ನಿದ್ದೆ ಇಲ್ಲದೇ ಜನ ನೀರು ಹೊರ ಹಾಕುತ್ತಿದ್ದಾರೆ.

ಬೆಳಗಾವಿ, ಜುಲೈ 24: ಬೆಳಗಾವಿ ನಗರದಲ್ಲಿ ಧಾರಾಕಾರ ಮಳೆ‌ ಹಿನ್ನೆಲೆ ಬಳ್ಳಾರಿ ನಾಲಾ ನೀರಿನ ಪ್ರಮಾಣ ಮತ್ತಷ್ಟು ಏರಿಕೆಯಾಗಿದೆ. ವಡಗಾಂವ ಬಳಿಯ ಯಳ್ಳೂರ ರಸ್ತೆಯಲ್ಲಿರುವ ಗಣಪತಿ ದೇವಸ್ಥಾನ ಜಲಾವೃತಗೊಂಡಿದೆ. ಇನ್ನೊಂದು ದಿನ ಮಳೆಯಾದ್ರೇ ಬೆಳಗಾವಿ ಯಳ್ಳೂರ ಸಂಪರ್ಕ ಕಡಿತಗೊಳ್ಳಲಿದೆ. ರಸ್ತೆ ಮೇಲೆ ಬಳ್ಳಾರಿ ನಾಲಾ ನೀರು ಬರಲು ಅರ್ಧ ಅಡಿಯಷ್ಟು ಮಾತ್ರ ಬಾಕಿ ಇದ್ದು ವಡಗಾಂವ ಬಳಿಯ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತ ಜಲಾವೃತಗೊಳ್ಳಲಿದೆ.

ಇನ್ನು ಮತ್ತೊಂದೆಡೆ ಬೆಳಗಾವಿಯ ಗಣೇಶ್ ಕಾಲೋನಿಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ. ನೇಕಾರರ ಮನೆಗಳಿಗೂ ನೀರು ನುಗ್ಗಿದ್ದು, ಮಗ್ಗಗಳೆಲ್ಲವೂ ನೀರು ಪಾಲಾಗಿವೆ. ಊಟ ನಿದ್ದೆ ಇಲ್ಲದೇ ಜನ ನೀರು ಹೊರ ಹಾಕುತ್ತಿದ್ದಾರೆ. ತಿನ್ನಲು ಕೂಡ ಏನೂ ಇಲ್ಲ ಯಾರಾದರೂ ಸಹಾಯ ಮಾಡಿದ್ರೇ ಅನುಕೂಲ ಆಗುತ್ತೆ ಎಂದು ಸುನಂದಾ ಮುಳಗುಂದ ಬಳಿ ಟಿವಿ9 ಬಳಿ ಅಳಲು ತೋಡಿಕೊಂಡಿದ್ದಾರೆ. ಗಣೇಶ್ ಕಾಲೋನಿಯಲ್ಲಿ ಮತ್ತೊಂದು ಮನೆಗೆ ನೀರು ನುಗ್ಗಿ ಅವಾಂತರವಾಗಿದೆ. ರಾತ್ರಿಯಿಡೀ ಕಾಟ್ ಮೇಲೆ ಕುಳಿತು ಕುಟುಂಬಸ್ಥರು ರಾತ್ರಿ ಕಳೆದಿದ್ದಾರೆ. ಅರ್ಧ ಅಡಿಯಷ್ಟು ನೀರು ಬಂದು ಮನೆಯ ಸಾಮಾಗ್ರಿಗಳೆಲ್ಲವೂ ನೀರು ಪಾಲಾಗಿವೆ.

Loading...
Unable to load recommendations.
Follow Us
ಸಹದೇವ್​ ಮಾನೆ

ಸಹದೇವ ಯಲ್ಲಪ್ಪ ಮಾನೆ. ಹುಟ್ಟಿದ್ದು ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮ. ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಳೆದ 12 ವರ್ಷದಿಂದ ಟಿವಿ ಮಾಧ್ಯಮದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. 2014ರಲ್ಲಿ ಬೀದರ್ ಜಿಲ್ಲೆಯಿಂದ ವೃತ್ತಿ ಜೀವನ ಪ್ರಾರಂಭ ಮಾಡಿ ಕಲಬುರಗಿ, ಹುಬ್ಬಳ್ಳಿಯಲ್ಲಿ ಕೆಲಸ ಮಾಡಿ ಸದ್ಯ ‘ಟಿವಿ9’ ಕನ್ನಡ ಸುದ್ದಿ ವಾಹಿನಿಯಲ್ಲಿ 9ವರ್ಷಗಳಿಂದ ಬೆಳಗಾವಿ ಜಿಲ್ಲೆಯಲ್ಲಿ ಹಿರಿಯ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದೇನೆ. ಬೀದರ್ ಜಿಲ್ಲೆಯಲ್ಲಿ ಅತ್ಯುತ್ತಮ ಜಿಲ್ಲಾ ವರದಿಗಾರ ಪ್ರಶಸ್ತಿ ಪಡೆದಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ. ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುವ ವರದಿ ಸೇರಿ ಗಡಿ ಸಮಸ್ಯೆ, ಕ್ರೈಮ್, ಪ್ರವಾಹ ಪರಿಸ್ಥಿತಿ, ನೆರೆಯ ಮಹಾರಾಷ್ಟ್ರ, ಗೋವಾದಲ್ಲಿನ ಬೆಳವಣಿಗೆ ಕುರಿತು ವರದಿ ಮಾಡುತ್ತಿರುವುದು ವಿಶೇಷ.

Read More