Loading video

ಅಧಿಕಾರಿಗಳಿಗೂ ತಟ್ಟಿದ ಫೆಂಗಲ್ ಚಂಡಮಾರುತ ಎಫೆಕ್ಟ್: ಸಭೆ ವೇಳೆ ಒಳ ನುಗ್ಗಿದ ಮಳೆ ನೀರು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 02, 2024 | 7:03 PM

ಮಂಗಳೂರಿನ ಉರ್ವದ ಜಿಲ್ಲಾ ಪಂಚಾಯತ್ ಸಭಾಂಗಣಕ್ಕೆ ಭಾರೀ ಮಳೆಯಿಂದ ನೀರು ನುಗ್ಗಿದೆ. ಉಪ ಲೋಕಾಯುಕ್ತರ ಅಹವಾಲು ಸ್ವೀಕಾರ ಸಭೆ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಧಿಕಾರಿಗಳು ಕುಳಿತಿರುವ ಸ್ಥಳಕ್ಕೆ ನೀರು ನುಗ್ಗಿದ್ದು, ಸುಮಾರು ಒಂದು ಗಂಟೆ ಭಾರೀ ಮಳೆ ಸುರಿದಿದೆ. ಫೆಂಗಲ್ ಚಂಡಮಾರುತದ ಪ್ರಭಾವ ಅಧಿಕಾರಿಗಳಿಗೂ ತಟ್ಟಿದೆ.

ಮಂಗಳೂರು, ಡಿಸೆಂಬರ್​​ 02: ಮಂಗಳೂರಿನ ಉರ್ವ ಬಳಿ ಇರುವ ಜಿಲ್ಲಾ ಪಂಚಾಯತ್ ಸಭಾಂಗಣದ ಒಳಗೆ ಮಳೆ ನೀರು ನುಗ್ಗಿದೆ. ಆ ಮೂಲಕ ಅಧಿಕಾರಿಗಳಿಗೂ ಫೆಂಗಲ್ ಚಂಡಮಾರುತದ ಎಫೆಕ್ಟ್ (Cyclone Fengal) ತಟ್ಟಿದೆ. ನೇತ್ರಾವತಿ ಸಭಾಂಗಣದಲ್ಲಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತ್ರತ್ವದಲ್ಲಿ ಅಹವಾಲು ಹಾಗೂ ಕುಂದುಕೊರತೆ ಸ್ವೀಕಾರ ಸಭೆ ನಡೆಯುತ್ತಿತ್ತು. ಈ ವೇಳೆ ಅಧಿಕಾರಿಗಳು ಕುಳಿತಿದ್ದ ಜಾಗದ ಕಡೆ ಮಳೆ ನೀರು ನುಗ್ಗಿದೆ. ಕುರ್ಚಿ ಅಡಿ ಭಾಗಕ್ಕೆ ಮಳೆ ನೀರು ನುಗಿದೆ. ಸುಮಾರು ‌ಒಂದು ಗಂಟೆ ಕಾಲ ಭಾರಿ ಮಳೆ ಸುರಿದಿದೆ. ಸದ್ಯ ಕೊಂಚ ಬಿಡುವು ನೀಡಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.