ಹೈದರಾಬಾದ್ ನಗರದಲ್ಲಿ ಕುಂಭದ್ರೋಣ, ಫ್ಲೈಓವರ್ ಮೇಲೂ ಅರ್ಧ ಟೈರ್ ಮುಳುಗುವಷ್ಟು ನೀರು!

|

Updated on: May 16, 2024 | 6:58 PM

ಮೇಲ್ಸೇತುವೆ ಮೇಲೆ ಹರಿಯುತ್ತಿರುವ ನೀರಲ್ಲಿ ವಾಹನಗಳು ನಿಧಾವಾಗಿ ಚಲಿಸತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇದನ್ನು ಬಿಡಿ, ನಗರದ ಬೇರೆ ರಸ್ತೆಗಳನ್ನು ನೋಡಿ. ಎಲ್ಲೆಡೆ ನೀರು, ಜನರಿಗೆ ರಸ್ತೆ ದಾಟುವುದು ಸಹ ಕಷ್ಟವಾಗುತ್ತಿದೆ. ನಗರದಲ್ಲಿ ಇಂದು ಸುರಿದಿದ್ದು ನಿಸ್ಸಂದೇಹವಾಗಿ ಕುಂಭದ್ರೋಣ ಮಾರಾಯ್ರೇ!

ಹೈದರಾಬಾದ್: ತೆಲಂಗಾಂಣದ ರಾಜಧಾನಿ ಹೈದರಾಬಾದ್ ನಗರದ (Hyderabad City) ಈ ಫ್ಲೈಓವರ್ (flyover) ನೋಡಿ ಕರ್ನಾಟಕದ ರಾಜಧಾನಿ ಬೆಂಗಳೂರು ನಗರದ ನಿವಾಸಿಗಳಲ್ಲಿ (residents of Bengaluru) ಒಂದು ಬಗೆಯ ನಿರಾಳತೆ, ಸಂತೃಪ್ತಿಯ ಭಾವ ಮೂಡಬಹುದು. ಮಳೆ ಬಂದಾಗ ಬೆಂಗಳೂರು ಫ್ಲೈಓವರ್ ಗಳ ಮೇಲೆ ನೀರು ಹರಿದಾಡುವಂತೆ ಹೈದರಾಬಾದ್ ನಗರದ ಫ್ಲೈಓವರ್ ಮೇಲೂ ನೀರು! ಜೋಕ್ಸ್ ಅಪಾರ್ಟ್, ವಿಷಯವೇನೆಂದರೆ, ಹೈದರಾಬಾದ್ ನಲ್ಲಿ ಇವತ್ತು ಸುರಿದ ಮಳೆಗೆ ನಗರದ ಪ್ರಮುಖ ಫ್ಲೈಓವರ್ ಒಂದು ಜಲಾವೃತ ಗೊಂಡಿದೆ. ಮೇಲ್ಸೇತುವೆ ಮೇಲೆ ಹರಿಯುತ್ತಿರುವ ನೀರಲ್ಲಿ ವಾಹನಗಳು ನಿಧಾವಾಗಿ ಚಲಿಸತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಇದನ್ನು ಬಿಡಿ, ನಗರದ ಬೇರೆ ರಸ್ತೆಗಳನ್ನು ನೋಡಿ. ಎಲ್ಲೆಡೆ ನೀರು, ಜನರಿಗೆ ರಸ್ತೆ ದಾಟುವುದು ಸಹ ಕಷ್ಟವಾಗುತ್ತಿದೆ. ನಗರದಲ್ಲಿ ಇಂದು ಸುರಿದಿದ್ದು ನಿಸ್ಸಂದೇಹವಾಗಿ ಕುಂಭದ್ರೋಣ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಮಾಜಿ ಪ್ರಧಾನಿ ಪಿ.ವಿ ನರಸಿಂಹರಾವ್ ಕುಟುಂಬದಿಂದ ಹೈದರಾಬಾದ್​ನಲ್ಲಿ ಪಿಎಂ ಮೋದಿ ಭೇಟಿ