ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಕೋರ್ಟ್ ನಿಂದ ಆಚೆ ಬಂದ ರೇವಣ್ಣ ಮುಖದಲ್ಲಿ ಸಂತಸ

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದು ಕೋರ್ಟ್ ನಿಂದ ಆಚೆ ಬಂದ ರೇವಣ್ಣ ಮುಖದಲ್ಲಿ ಸಂತಸ

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2024 | 7:32 PM

ಜಾಮೀನು ಪಡೆದು ಹೊರಬಂದ ರೇವಣ್ಣ ಮುಖದಲ್ಲಿ ಖುಷಿ ಗೋಚರಿಸುತಿತ್ತು. ತಮ್ಮ ಜೊತೆಗಿದ್ದ ಆಪ್ತರೊಂದಿಗೆ ಅವರು ನಗುತ್ತಾ ಬೆನ್ನು ತಟ್ಟುತ್ತಾ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು. ಜನ ಅವರನ್ನು ಸುತ್ತುವರಿದಿದ್ದಾರೆ ಮತ್ತು ಅವರ ವಕೀಲರೂ ಸಹ ಜೊತೆಗಿದ್ದಾರೆ.

ಬೆಂಗಳೂರು: ಎರಡು ದಿನಗಳ ಹಿಂದಷ್ಟೇ ಮಹಿಳೆಯೊಬ್ಬರ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿಂದ ಹೊರಬಂದಿದ್ದ ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರು ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯದ (sexual assault) ಬೇರೆ ಪ್ರಕರಣದಲ್ಲಿ ಇವತ್ತು ನಗರದ 42 ನೇ ಎಸಿಎಂಎಂ ಕೋರ್ಟ್ (42 ACMM court) ಮುಂದೆ ಹಾಜರಾಗಬೇಕಾಯಿತು. ಅವರನ್ನು ಕೊಂಚ ನಿರಾಳ ಮಾಡಿದ ಅಂಶವೆಂದರೆ, ನಾಳೆ ಮಧ್ಯಾಹ್ನದವರೆಗೆ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ನಾಳೆ ಅಂದರೆ ಮೇ 17 ರಂದು ಮಧ್ಯಾಹ್ನ ಅವರು ಪುನಃ ಕೋರ್ಟ್ ಮುಂದೆ ಹಾಜರಾಗಬೇಕು. ಜಾಮೀನು ಪಡೆದು ಹೊರಬಂದ ರೇವಣ್ಣ ಮುಖದಲ್ಲಿ ಖುಷಿ ಗೋಚರಿಸುತಿತ್ತು. ತಮ್ಮ ಜೊತೆಗಿದ್ದ ಆಪ್ತರೊಂದಿಗೆ ಅವರು ನಗುತ್ತಾ ಬೆನ್ನು ತಟ್ಟುತ್ತಾ ಮಾತಾಡುವುದನ್ನು ದೃಶ್ಯಗಳಲ್ಲಿ ನೋಡಬಹುದು. ಜನ ಅವರನ್ನು ಸುತ್ತುವರಿದಿದ್ದಾರೆ ಮತ್ತು ಅವರ ವಕೀಲರೂ ಸಹ ಜೊತೆಗಿದ್ದಾರೆ. ನಮ್ಮ ವರದಿಗಾರ ರೇವಣ್ಣ ಅವರ ಬೈಟ್ ತೆಗೆದುಕೊಳ್ಳಲು ಪ್ರಯತ್ನಿಸಿದರಾದರೂ ಅದು ಸಾಧ್ಯವಾಗಲಿಲ್ಲ. ಒಂದು ಅಂಶವನ್ನು ನೀವು ಗಮನಿಸಬಹುದು. ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಮಗ ನಿಖಿಲ್ ಕುಮಾರಸ್ವಾಮಿ ರೇವಣ್ಣರಿಂದ ಅಂತರ ಕಾಯ್ದುಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಜೈಲಿಂದ ಹೊರಬಂದು ನಿರಾಳರಾಗಿರುವ ಹೆಚ್ ಡಿ ರೇವಣ್ಣರಿಂದ ಬೆಂಗಳೂರಿನ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಕೆ