ಹಾಸನದ ಕದಾಳು ಬಳಿ 4 ಬಾಲಕರು ಕೆರೆಯಲ್ಲಿ ಜಲಸಮಾಧಿಯಾದ ವಿಷಯ ಹೇಳುವಾಗ ಜಿಲ್ಲಾಧಿಕಾರಿ ಸತ್ಯಭಾಮ ಗದ್ಗದಿತರಾದರು

ಹಾಸನದ ಕದಾಳು ಬಳಿ 4 ಬಾಲಕರು ಕೆರೆಯಲ್ಲಿ ಜಲಸಮಾಧಿಯಾದ ವಿಷಯ ಹೇಳುವಾಗ ಜಿಲ್ಲಾಧಿಕಾರಿ ಸತ್ಯಭಾಮ ಗದ್ಗದಿತರಾದರು

ಅರುಣ್​ ಕುಮಾರ್​ ಬೆಳ್ಳಿ
|

Updated on: May 16, 2024 | 6:13 PM

ಇಂಥ ದುರ್ಘಟನೆಗಳು ಸಂಭವಿಸಿದಾಗ ದುಃಖವಾಗುತ್ತದೆ, ಬೇಸಿಗೆ ರಜೆಯಲ್ಲಿ ಮಕ್ಕಳು ಮೋಜು ಮಸ್ತಿ ಮಾಡುತ್ತಾರೆ, ಅವರನ್ನು ಕಟ್ಟಿಹಾಕುವುದು ಸಾಧ್ಯವಿಲ್ಲ. ಆದರೆ ಪೋಷಕರು ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು, ಎಲ್ಲಿ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದನ್ನು ಗಮನಿಸುತ್ತಿರಬೇಕು ಎಂದು ಸತ್ಯಭಾಮ ಹೇಳಿದರು.

ಹಾಸನ: ಬೇಸಿಗೆ ರಜೆಯಲ್ಲಿ ಇಂಥ ದುರ್ಘಟನೆಗಳು ಸಂಭವಿಸುತ್ತಿರುತ್ತವೆ ಆದರೆ ಪೋಷಕರು ಮತ್ತು ಪಾಲಕರು ಮಾತ್ರ ಎಚ್ಚೆತ್ತುಕೊಳ್ಳಲ್ಲ. ಜಿಲ್ಲೆಯ ಆಲೂರು ತಾಲ್ಲೂಕಿನ ಕದಾಳು (Kadalu) ಸಮೀಪದ ಮುತ್ತಿಗೆ ಗ್ರಾಮದಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಅಥವಾ ಈಜಲು ಹೋಗಿದ್ದ 13 ವರ್ಷದೊಳಗಿನ ನಾಲ್ವರು ಬಾಲಕರು ನೀರು ಪಾಲಾಗಿದ್ದಾರೆ. ಜಲಸಮಾಧಿಯಾದ (drowned) ಬಾಲಕರನ್ನು ಜೀವನ್ (13), ಸಾತ್ವಿಕ್ (11), ವಿಶ್ವ (12) ಮತ್ತು ಪೃಥ್ವಿ (12) ಎಂದು ಗುರುತಿಸಲಾಗಿದೆ. ದುರ್ಘಟನೆಯ ಬಗ್ಗೆ ಮಾಧ್ಯಮದವರಿಗೆ ಬ್ರೀಫ್ ಮಾಡಿದ ಹಾಸನದ ಜಿಲ್ಲಧಿಕಾರಿ ಸಿ ಸತ್ಯಭಾಮ (C Satyabhama) ಅವರು ಅಕ್ಷರಶಃ ಗದ್ಗದಿತರಾದರು. ಉಕ್ಕಿಬರುತ್ತಿದ್ದ ದುಃಖವನ್ನು ಬಹಳ ಕಷ್ಟಪಟ್ಟು ತಡೆದ ಅವರು ಸಾಧ್ಯವಾದಷ್ಟು ಬೇಗ ಕೆಮೆರಾಗಳಿಂದ ಮರೆಯಾಗುವ ಪ್ರಯತ್ನ ಮಾಡಿದರು. ಇಂಥ ದುರ್ಘಟನೆಗಳು ಸಂಭವಿಸಿದಾಗ ದುಃಖವಾಗುತ್ತದೆ, ಬೇಸಿಗೆ ರಜೆಯಲ್ಲಿ ಮಕ್ಕಳು ಮೋಜು ಮಸ್ತಿ ಮಾಡುತ್ತಾರೆ, ಅವರನ್ನು ಕಟ್ಟಿಹಾಕುವುದು ಸಾಧ್ಯವಿಲ್ಲ. ಆದರೆ ಪೋಷಕರು ಮಕ್ಕಳ ಮೇಲೆ ನಿಗಾ ಇಟ್ಟಿರಬೇಕು, ಎಲ್ಲಿ ಹೋಗಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋದನ್ನು ಗಮನಿಸುತ್ತಿರಬೇಕು ಎಂದು ಸತ್ಯಭಾಮ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೊಜಾಂಬಿಕ್ ಸಮುದ್ರದಲ್ಲಿ ದೋಣಿ ಮುಳುಗಿ 90 ಜನ ಜಲಸಮಾಧಿ