ಮೊದಲ ಸಿನಿಮಾ ‘ಗೌರಿ’ ಬಗ್ಗೆ ‘ಪುಟ್ಟಗೌರಿ’ ಸಾನ್ಯಾ ಮಾತು
ಕನ್ನಡದ ಜನಪ್ರಿಯ ಧಾರಾವಾಹಿ ‘ಪುಟ್ಟಗೌರಿ ಮದುವೆ’ಯಲ್ಲಿ ಪುಟ್ಟಗೌರಿಯಾಗಿ ನಟಿಸಿದ್ದ ಪುಟ್ಟ ಹುಡುಗಿ ಸಾನ್ಯಾ ಐಯ್ಯರ್ ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದೂ ‘ಗೌರಿ’ ಹೆಸರಿನ ಸಿನಿಮಾದ ಮೂಲಕ. ಸಿನಿಮಾದ ಬಗ್ಗೆ ಸಾನ್ಯ ಅಭಿಪ್ರಾಯ ಹಂಚಿಕೊಂಡಿದ್ದು ಹೀಗೆ.
ಕನ್ನಡದ ಜನಪ್ರಿಯ ಧಾರಾವಾಹಿ ‘ಪುಟ್ಟಗೌರಿ ಮದುವೆ’ಯಲ್ಲಿ ಪುಟ್ಟಗೌರಿಯಾಗಿ ನಟಿಸಿದ್ದ ಪುಟ್ಟ ಹುಡುಗಿ ಸಾನ್ಯಾ ಐಯ್ಯರ್ (Sanya Iyer) ಈಗ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಅದೂ ‘ಗೌರಿ’ ಹೆಸರಿನ ಸಿನಿಮಾದ ಮೂಲಕ. ಸಾನ್ಯಾಗೆ ಇದು ನಾಯಕಿಯಾಗಿ ಮೊದಲ ಸಿನಿಮಾ ಅಂತೆಯೆ ಸಿನಿಮಾದ ನಾಯಕ ಸಮರ್ಜಿತ್ಗೂ ಇದು ನಾಯಕನಾಗಿ ಮೊದಲ ಸಿನಿಮಾ. ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಪುತ್ರ ಸಮರ್ಜಿತ್ ರ ಮೊದಲ ಸಿನಿಮಾದ ನಿರ್ದೇಶನ ಹಾಗೂ ನಿರ್ಮಾಣದ ಜವಾಬ್ದಾರಿಯನ್ನು ತಾವೇ ಹೊತ್ತಿದ್ದಾರೆ. ಇತ್ತೀಚೆಗಷ್ಟೆ ಸಿನಿಮಾದ ಮೊದಲ ಹಾಡನ್ನು ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಲಾಂಚ್ ಮಾಡಲಾಯ್ತು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸಾನ್ಯಾ ಐಯ್ಯರ್ ಅವರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ