ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಪ್ರದೇಶದಲ್ಲಿ ಮತ್ತೇ ಅಬ್ಬರದ ಮಳೆ, ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

|

Updated on: Jul 16, 2024 | 10:25 AM

ಮಳೆಯ ಮಹಿಮೆ ಅರ್ಥಮಾಡಿಕೊಳ್ಳುವುದು ಕಷ್ಟ. ಇದನ್ನು ಯಾಕೆ ಹೇಳಬೇಕಾಗಿದೆಯೆಂದರೆ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಪ್ರಾಂತ್ಯದಲ್ಲಿ ವಿಪರೀತ ಮಳೆಯಾಗುತ್ತಿದ್ದರೆ, ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕೊರತೆ ಮಳೆಯಿಂದ ಬೆಳೆ ಹಾಳಾಗುತ್ತಿವೆ. ಕೊಪ್ಪಳ ಜಿಲ್ಲೆಯ ರೈತರು ಹೆಸರು ಬೇಳೆ ಬೆಳೆ ಮೊಳಕೆಯೊಡೆಯದ ಕಾರಣ ಅದನ್ನುನಾಶ ಮಾಡುತ್ತಿದ್ದಾರೆ.

ಬೆಂಗಳೂರು: ರಾಜ್ಯದ ದಕ್ಷಿಣ ಮತ್ತು ಕರಾವಳಿ ಪ್ರದೇಶದಲ್ಲಿ ಮಳೆ ಒಂದೇ ಸಮನೆ ಸುರಿಯಲಾರಂಭಿಸಿದೆ.. 2-3 ದಿನಗಳ ಈ ಭಾಗದಲ್ಲಿ ಅದರ ಅಬ್ಬರ ತಗ್ಗಿತ್ತು, ಆದರೆ ನಿನ್ನೆಯಿಂದ ಧಾರಾಕಾರ ಮಳೆ. ಅದಾಗಲೇ ಉಕ್ಕಿ ಹರಿಯುತ್ತಿದ್ದ ನದಿ ಮತ್ತು ಹಳ್ಳ-ಕೊಳ್ಳಗಳಲ್ಲಿ ಮತ್ತಷ್ಟು ನೀರು ಬರುತ್ತಿರುವುದರಿಂದ ರಸ್ತೆ, ಸೇತುವೆಗಳು ಮತ್ತು ಕೆಲವೆಡೆ ಊರುಗಳು ಸಹ ಜಲಾವೃತಗೊಂಡಿವೆ. ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಕೊಡಗು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇಲ್ಲಿ ಉಲ್ಲೇಖಿಸಿರುವ ಎಲ್ಲ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಗಲೇ ಹೇಳಿದಂತೆ ಸೇತುವೆ ಮತ್ತು ರಸ್ತೆಗಳ ಮೇಲೆ ನೀರು ಅಪಾಯಕಾರಿಯಾಗಿ ಹರಿಯುತ್ತಿರರುವುದರಿಂದ ವಾಹನ ಸಂಚಾರ ತೀವ್ರ ಪ್ರಭಾವಕ್ಕೊಳಗಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೊಪ್ಪಳ; ಮಳೆ ಇಲ್ಲದೆ ಹೂ ಕಾಯಿಯಾಗ್ತಿಲ್ಲ, ತಾವೇ ಬೆಳೆದ ಬೆಳೆಯನ್ನು ಕಿತ್ತು ಹಾಕಿದ ರೈತರು