ಕಾರವಾರದಲ್ಲಿ ತುರ್ತು ಲ್ಯಾಂಡಿಂಗ್​ಗೆ ಪ್ರಯತ್ನಿಸಿದ ಹೆಲಿಕಾಪ್ಟರ್; ಆತಂಕಗೊಂಡ ಸ್ಥಳೀಯರು

ಕಾರವಾರದಲ್ಲಿ ತುರ್ತು ಲ್ಯಾಂಡಿಂಗ್​ಗೆ ಪ್ರಯತ್ನಿಸಿದ ಹೆಲಿಕಾಪ್ಟರ್; ಆತಂಕಗೊಂಡ ಸ್ಥಳೀಯರು

TV9 Web
| Updated By: ಸುಷ್ಮಾ ಚಕ್ರೆ

Updated on: Oct 22, 2022 | 3:43 PM

ಭಾರತೀಯ ಕೋಸ್ಟ್ ಗಾರ್ಡ್​ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಕಾರವಾರದ ಮಾಲಾದೇವಿ ಮೈದಾನ, ಡಿಸಿ ಕಚೇರಿ ಎದುರಿಗಿನ ಫ್ಲೈ ಓವರ್ ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಇಳಿಯಲು ಪ್ರಯತ್ನಿಸಿ ಮತ್ತೆ ಮೇಲೆ ಹಾರಿದೆ.

ಕಾರವಾರ: ಕಾರವಾರದ ಮಾಲಾದೇವಿ ಮೈದಾನದಲ್ಲಿ ಹೆಲಿಕಾಪ್ಟರ್ (Helicopter) ತೀರಾ ಕೆಳಗೆ ಹಾರಾಟ ನಡೆಸಿ, ಜನರಲ್ಲಿ ಆತಂಕ ಮೂಡಿಸಿದೆ. ಕಾರವಾರದ (Karwar) 3 ಕಡೆ ತುರ್ತು ಭೂ ಸ್ಪರ್ಶಕ್ಕೆ ಯತ್ನಿಸಿದ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಲು ಯತ್ನಿಸಿ ಮತ್ತೆ ಮೇಲೇರಿದೆ. ಇದ್ದಕ್ಕಿದ್ದಂತೆ ಹೆಲಿಕಾಪ್ಟರ್ ಕೆಳಗೆ ಬಂದಿದ್ದರಿಂದ ಜನರು ಭೀತಿಗೊಳಗಾದರು. ಪರೀಕ್ಷಾರ್ಥ ಪ್ರಯೋಗ ನಡೆಸುವ ವೇಳೆ ಈ ಘಟನೆ ನಡೆದಿದೆ. ಭಾರತೀಯ ಕೋಸ್ಟ್ ಗಾರ್ಡ್​ನ ಅಡ್ವಾನ್ಸ್ಡ್ ಲೈಟ್ ಹೆಲಿಕಾಪ್ಟರ್ ಕಾರವಾರ ನಗರದ ಮಾಲಾದೇವಿ ಮೈದಾನ, ಡಿಸಿ ಕಚೇರಿ ಎದುರಿಗಿನ ಫ್ಲೈ ಓವರ್ ಹಾಗೂ ಟ್ಯಾಗೋರ್ ಕಡಲತೀರದಲ್ಲಿ ಇಳಿಯಲು ಪ್ರಯತ್ನಿಸಿ ಮತ್ತೆ ಮೇಲೆ ಹಾರಿದೆ.