Hassan: ಬಾರದ ಮಳೆ; ಹೇಮಾವತಿ ಡ್ಯಾಂ ಖಾಲಿ ಖಾಲಿ
ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯವಾದ ಹೇಮಾವತಿ ಡ್ಯಾಂನಲ್ಲಿ ನೀರಿನ ಮಟ್ಟ ಸಂಪೂರ್ಣ ಕುಸಿದಿದೆ.
ಹಾಸನ: ಕಾವೇರಿ ನದಿ ಪಾತ್ರದ ಪ್ರಮುಖ ಜಲಾಶಯವಾದ ಹೇಮಾವತಿ ಡ್ಯಾಂನಲ್ಲಿ (Hemavati Dam) ನೀರಿನ ಮಟ್ಟ (Water Level) ಸಂಪೂರ್ಣ ಕುಸಿದಿದೆ. ಗರಿಷ್ಠ 37.103 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 14.079 ಟಿಎಂಸಿ ನೀರು ಇದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 24.426 ಟಿಎಂಸಿ ನೀರಿತ್ತು. ಕಳೆದ ವರ್ಷ 3,556 ಕ್ಯಾಸೆಕ್ ನೀರಿನ ಒಳ ಹರಿವು ಇತ್ತು. ಇಂದು (ಜು.02) ಕೇವಲ 85 ಕ್ಯುಸೆಕ್ ನೀರಿನ ಒಳ ಹರಿವು ಇದೆ. ಹೊರ ಹರಿವು 1350 ಕ್ಯುಸೆಕ್ ಇದೆ. ಕಳೆದ ವರ್ಷ ಇದೇ ದಿನ 200 ಕ್ಯುಸೆಕ್ ನೀರಿನ ಹೊರ ಹರಿವು ಇತ್ತು.