Hassan: ಲಕ್ಕುಂದ ಗ್ರಾಮಕ್ಕೆ ದಾಳಿಯಿಟ್ಟ ಕಾಡಾನೆ ಹಿಂಡು, ನಿವಾಸಿಯೊಬ್ಬರ ಮನೆ ಕಂಪೌಂಡ್ ಮತ್ತು ತೋಟ ಧ್ವಂಸ
ಯಾವುದಾದರೂ ದೊಡ್ಡ ಅನಾಹುತ, ದುರದೃಷ್ಟಕರ ಘಟನೆ ಸಂಭವಿಸುವ ಮೊದಲು ಅಧಿಕಾರಿಗಳು ಆನೆ ಹಿಂಡನ್ನು ಕಾಡಿಗಟ್ಟಬೇಕೆಂದು ಜನ ಆಗ್ರಹಿಸಿದ್ದಾರೆ.
ಹಾಸನ: ಕಾಡಾನೆಗಳ ಯೋಚನೆ ಯಾಕೆ ಜನರಲ್ಲಿ ಭೀತಿ ಹುಟ್ಟಿಸುತ್ತದೆ ಅಂದರೆ ಕಾರಣ ಇಲ್ಲಿದೆ ಮಾರಾಯ್ರೇ. ಜಿಲ್ಲೆಯ ಬೇಲೂರು ತಾಲ್ಲೂಕಿನ ಲಕ್ಕುಂದ ಹೆಸರಿನ ಗ್ರಾಮಕ್ಕೆ ನುಗ್ಗಿರುವ ಕಾಡಾನೆಗಳು (wild elephants) ಲಕ್ಷ್ಮಮ್ಮ (Lakshmamma) ಎನ್ನುವವರ ಮನೆ ಕಂಪೌಂಡ್ ಮತ್ತು ತೋಟವನ್ನು ಧ್ವಂಸ ಮಾಡಿವೆ. ಸ್ಥಳೀಯರು ಹೇಳುವಂತೆ ಆನೆಯೊಂದು ತನ್ನ ಮರಿಗಳೊಂದಿಗೆ ಗ್ರಾಮದ ಬಳಿ ಬೀಡು ಬಿಟ್ಟಿದೆ ಮತ್ತು ರಾತ್ರಿ ಸಮಯದಲ್ಲಿ ಅವು ಸುತ್ತಮುತ್ತಲಿನ ಗ್ರಾಮಗಳಿಗೆ ನುಗ್ಗುತ್ತಿವೆ. ನಿವಾಸಿಗಳು ಅರಣ್ಯ ಇಲಾಖೆಯ ಸಿಬ್ಬಂದಿಗೆ ವಿಷಯ ತಿಳಿಸಿದ್ದುಂಟು. ಆದರೆ, ಅವರಿಂದ ಇದುವರೆಗೆ ಯಾವುದೇ ಕ್ರಮ ಜರುಗಿಲ್ಲ. ಯಾವುದಾದರೂ ದೊಡ್ಡ ಅನಾಹುತ, ದುರದೃಷ್ಟಕರ ಘಟನೆ ಸಂಭವಿಸುವ ಮೊದಲು ಅಧಿಕಾರಿಗಳು ಆನೆ ಹಿಂಡನ್ನು ಕಾಡಿಗಟ್ಟಬೇಕೆಂದು ಜನ ಆಗ್ರಹಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ