‘ಆ ಸೀನ್​ ನನಗೆ ಟಚ್​ ಆಯ್ತು’; ‘ಭಜರಂಗಿ 2’ ನೋಡಿದ ಶಿವಣ್ಣನ ಮಾತು

| Updated By: ರಾಜೇಶ್ ದುಗ್ಗುಮನೆ

Updated on: Oct 29, 2021 | 11:42 AM

ಆ ನಂತರ ಮಾತನಾಡಿದ ಶಿವರಾಜ್​ಕುಮಾರ್​, ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕೆಲ ದೃಶ್ಯಗಳಲ್ಲಿ ತಾಯಿಗೆ ಕನೆಕ್ಟ್​ ಆದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ.

ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ರಾಜ್ಯಾದ್ಯಂತ ಇಂದು (ಅಕ್ಟೋಬರ್​ 29) ಭರ್ಜರಿಯಾಗಿ ತೆರೆಕಂಡಿ. ರಾಜ್ಯಾದ್ಯಂತ ಬರೋಬ್ಬರಿ 300 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನ ಜೆ.ಪಿ. ನಗರದ ಸಿದ್ದೇಶ್ವರ ಚಿತ್ರಮಂದಿರ ಹಾಗು ಗೌಡನ ಪಾಳ್ಯದ ಶ್ರೀನಿವಾಸ ಥಿಯೇಟರ್​​ನಲ್ಲಿ ಮುಂಜಾನೆ 5 ಘಂಟೆಗೆ ಸಿನಿಮಾ ಪ್ರದರ್ಶನ ಕಂಡಿದೆ. ಅಭಿಮಾನಿಗಳು ಶಿವಣ್ಣನ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಶಿವರಾಜ್​ಕುಮಾರ್​ ಕೂಡ ಅಭಿಮಾನಿಗಳ ಜತೆ ಕೂತು ಸಿನಿಮಾ ನೋಡಿದರು.

ಆ ನಂತರ ಮಾತನಾಡಿದ ಶಿವರಾಜ್​ಕುಮಾರ್​, ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಕೆಲ ದೃಶ್ಯಗಳಲ್ಲಿ ತಾಯಿಗೆ ಕನೆಕ್ಟ್​ ಆದೆ ಎನ್ನುವ ಮಾತನ್ನು ಅವರು ಹೇಳಿದ್ದಾರೆ. ಹಾಗಾದರೆ, ಅವರು ಸಿನಿಮಾ ಬಗ್ಗೆ ಏನಂದ್ರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಇದನ್ನೂ ಓದಿ: Bhajarangi 2 Movie Review: ಫ್ಯಾಂಟಸಿ ಲೋಕದ ‘ಭಜರಂಗಿ 2’ ಕಥೆಯಲ್ಲಿ ಶಿವಣ್ಣನ ಎನರ್ಜಿಯೇ ಹೈಲೈಟ್

Bhajarangi 2 First Half Review: ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಮೊದಲಾರ್ಧದಲ್ಲಿ ಏನೆಲ್ಲ ಇದೆ? ಇಲ್ಲಿದೆ ಉತ್ತರ